ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಮಾತ್ರವಲ್ಲ ಪ್ರತಿಯೊಬ್ಬ ಕನ್ನಡಿಗ, ಪ್ರತಿಯೊಬ್ಬ ದಕ್ಷಿಣ ಭಾರತೀಯ, ಅಷ್ಟೇ ಅಲ್ದೆ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡಬೇಕಾದ ಸುದ್ದಿ ಇದು..!
ಹೆಮ್ಮೆಯ ಕನ್ನಡಿಗ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಬ್ರಿಟಿಷ್ ಪಾರ್ಲಿಮೆಂಟ್ನಲ್ಲಿ ಸನ್ಮಾನ ನಡೆಯಲಿದೆ. ಲಂಡನ್‍ಗೆ ಹೋಗುತ್ತಿದ್ದಾರೆ ದರ್ಶನ್. ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್‍ಖಾನ್‍ಗೆ ಬ್ರಿಟಿಷ್ ಪಾರ್ಲಿಮೆಂಟ್ ಹೌಸ್‍ನಿಂದ ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ಸಿಕ್ಕಿತ್ತು. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬ್ರಿಟಿಷ್ ಪಾರ್ಲಿಮೆಂಟ್ ಗೌರವಿಸಲಿದೆ. ನಾಳೆ (18ಕ್ಕೆ) ಲಂಡನ್‍ಗೆ ಹೋಗಲಿರುವ ದರ್ಶನ್ 19 ರಂದು ಪ್ರಶಸ್ತಿ ಸ್ವೀಕರಿಸಲಿದ್ದಾರೆ. 26ನೇ ತಾರೀಖು ವಾಪಾಸ್ಸಾಗ್ತಿದ್ದಾರೆ ಎಂದು ತಿಳಿದುಬಂದಿದೆ..!
ದರ್ಶನ್‍ಗೆ ಇಂಗ್ಲೆಂಡ್ ಪಾರ್ಲಿಮೆಂಟ್ನಲ್ಲಿ ಸನ್ಮಾನ ಮಾಡ್ತಿರೋ ಬಗ್ಗೆ ತಿಳಿಯುತ್ತಿದ್ದಂತೆ ಕುರುಕ್ಷೇತ್ರ ಸೆಟ್‍ನಲ್ಲಿ ಎಲ್ಲರೂ ಸಂಭ್ರಮಿಸಿದರು ಎನ್ನಲಾಗಿದೆ.
ಬ್ರಿಟಿಷ್ ಪಾರ್ಲಿಮೆಂಟ್‍ನಲ್ಲಿ ಸನ್ಮಾನಿಸಲ್ಪಡುತ್ತಿರುವ ದಕ್ಷಿಣ ಭಾರತದ ಮೊದಲ ನಟ ಹಾಗೂ 4ನೇ ಭಾರತೀಯ ಎಂಬ ಕೀರ್ತಿಗೆ ಭಾಜನರಾಗ್ತಿದ್ದಾರೆ ದರ್ಶನ್.