ಪ್ರತಿಯೊಬ್ಬ ನಟನಿಗೂ ತಾನು ಅಭಿನಯಿಸೋ ಸಿನಿಮಾ ಹಿಟ್ ಆಗಿ ಬಿಡಬೇಕು ಅನ್ನೋ ಆಸೆ ಇರುತ್ತೆ.. ಜೊತೆಗೆ ತಾನೊಬ್ಬ ದೊಡ್ಡ ನಟನಾಗಿ ಜನ ತನ್ನನ್ನ ಗುರುತಿಸುವಂತಾಗಬೇಕು ಅನ್ನೋ ಹಂಬಲವಿರುತ್ತೆ.. ಅದ್ರೆ ಈ ಎರಡು ಸಿಕ್ಕಿದ್ರು ಕೂಡ ನಟ ಚೇತನ್ ಇಂಡಸ್ಟ್ರಿಯಿಂದ ಮೂರು ವರ್ಷಗಳ ಕಾಲ ದೂರವೆ ಉಳಿದು ಬಿಟ್ಟಿದ್ರು..
ಆಗೊಂದು ಮೈನಾ ಹೆಸರಿನ ಚಿತ್ರ ರಿಲೀಸ್ ಆಗಿತ್ತು.. ನಾಗಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾದಲ್ಲಿ ನಿತ್ಯಾಮೆನನ್ ಹಾಗೆ ಚೇತನ್ ಸ್ಕ್ರೀನ್‍ಷೇರ್ ಮಾಡಿಕೊಂಡಿದ್ರು.. ಈ ಸಿನಿಮಾಗೂ ಹಾಗೆ ಈ ಜೋಡಿಗೂ ಒಳ್ಳೆ ಹೆಸರು ತಂದುಕೊಟ್ಟ ಚಿತ್ರವದು.. ಆದ್ರೆ ಆದಾದ ಮೇಲೆ ಚೇತನ್ ಚಿತ್ರರಂಗದಿಂದ ದೂರವೆ ಉಳಿದು ಬಿಟ್ರು..
ಹಂಗಂತ ಈ ನಟನಿಗೆ ಸಿನಿಮಾದ ಆಫರ್ ಸಿಕ್ಕಿಲ್ಲ ಅಂತ ಅನ್ಕೊಬೇಡಿ.. ಓಡೋ ಕುದುರೆ ಹಿಂದೆ ಬಾಜಿ ಅನ್ನೋ ಹಾಗೆ ಹಲವಾರು ನಿರ್ದೇಶಕರು-ನಿರ್ಮಾಪಕರು ಈ ಸ್ಪೂರದ್ರೂಪಿ ಯುವಕನ ಮನೆ ಬಾಗಿಲನ್ನ ತಟ್ಟಿದ್ದು ಉಂಟು… ಬಟ್ ತಾನೇ ಹಾಕಿಕೊಂಡಿದ್ದ ಕೆಲವೊಂದು ಸಮಾಜಮುಖಿ ಉದ್ದೇಶಗಳಿಂದ ಯಾವುದೆ ಚಿತ್ರವನ್ನ ಒಪ್ಪಿಕೊಳ್ಳೋಕೆ ಸಾಧ್ಯವಾಗಿರಲಿಲ್ಲ.. ಆದ್ರೀಗ ಮತ್ತೆ ಕ್ಯಾಮರವನ್ನ ಫೇಸ್ ಮಾಡೋಕೆ ಕಾಲವಕಾಶ ಕೂಡಿ ಬಂದಿದೆ.. ಅದಕ್ಕಿಂತ ಹೆಚ್ಚಾಗಿ ಕ್ಯಾಮರಾ ಮುಂದೆ ಬಂದು ನಿಲ್ಲುವಂತೆ ಮಾಡುವ ಕಥೆ ಸಿಕ್ಕಿದೆ.. ಹೀಗಾಗೆ ಈ ನಟ ಮತ್ತೆ ಆಕ್ಟಿಂಗ್‍ಗೆ ಹಿಂತಿರುಗಿದ್ದಾರೆ…
ಇದು ಮಾಮೂಲಿ ಸಿನಿಮಾಗಳ ಹಾಗೆ ಮರ ಸುತ್ತುವ ಎಂದೆರಡು ಫೈಟ್‍ಗಳಿರೋ ಚಿತ್ರಗಳ ಹಾಗಲ್ಲ.. ಇಲ್ಲಿ ಪ್ರೀತಿಗೆ ಬೆಲೆ ಇದ್ಯಾಂತೆ.. 70ರ ದಶಕದ ಕಾಲೇಜ್ ಜೀವನದಲ್ಲಿ ಅರಳೋ ಪವಿತ್ರ ಪ್ರೇಮಿ ಸಿನಿಮಾವಾಗಲಿದೆ.. ಅಂದಹಾಗೆ ಈ ಸಿನಿಮಾ ಸುಹಾಸ್ ಶಿರ್ವಾಲ್ಕರ್ ಬರೆದಿರೋ `ದುನಿಯಾದಾರಿ’ ಅನ್ನೋ ಕಾದಂಬರಿಯನ್ನ ಆಧಾರಿಸಿ ಮಾಡ್ತಿರೋ ಚಿತ್ರ.. ಈಗಾಗ್ಲೇ ಮರಾಠಿ ಭಾಷೆಯಲ್ಲೂ ಇದೇ ಹೆಸರಿನಲ್ಲಿ ತೆರೆಗೆ ಬಂದಿದೆ..
ಇದ್ರಲ್ಲಿ ರೆಟ್ರೋ ಗೆಟಪ್‍ನಲ್ಲಿ ಚೇತನ್ ಮಿಂಚಲಿದ್ರೆ ಜೋಡಿಯಾಗಿ ಮೊದಲ ಬಾರಿಗೆ ಮೇಘನ ರಾಜ್ ಆಯ್ಕೆಯಾಗಿದ್ದಾರೆ.. ರಾಜವರ್ಧನ್, ಸುಸ್ಮಿತಾ ಜೋಷಿ ಚಿತ್ರದಲ್ಲಿರಲಿದ್ರೆ, ಕುಮಾರೇಶ್ ಚಿತ್ರಕ್ಕೆ ಆಕ್ಷನ್‍ಕಟ್ ಹೇಳಲಿದ್ಧಾರೆ..
- ಅಶೋಕ್ ರಾಜ್
POPULAR STORIES :
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?
ಆಟೋ ಚಾಲಕರ ಸಾರಥ್ಯದಲ್ಲಿ …..Shankar Nag
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?
ಅರೆರೆ!ಇದೇನಿದು! ವಾಟ್ಸ್ ಆ್ಯಪ್‍ಗೆ ಇತಿಶ್ರೀ ಹಾಡೋ ಕಾಲ ಬಂತೇ????
ಶುರುವಾಯ್ತು ಮತ್ತೆ ಕನ್ನಡಿಗರ ಪರ್ವ..! ಭಾರತ ಕ್ರಿಕೆಟ್‍ನಲ್ಲಿ ಮತ್ತೆ ಹಳೆ ಹುಲಿಗಳು ಘರ್ಜಿಸುತ್ತಿವೆ..!
ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೇಲ್ಸ್..!
ಮನೆ ಖರೀದಿಗೆ ಲೋನ್ ಬೇಕೇ????ಎಚ್ಚರ!!!!
ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!