ಕಾಮಿಡಿ ಕಿಂಗ್ ಚಿಕ್ಕಣ್ಣ ಸಿಕ್ಕಾಪಟ್ಟೆ ಬೇಡಿಕೆ ಇರೋ ನಟ.
ಸಾಲು ಸಾಲು ಸಿನಿಮಾಗಳಲ್ಲಿ ಚಿಕ್ಕಣ್ಣ ಬ್ಯುಸಿ ಇದ್ದಾರೆ. ಇಷ್ಟು ದಿನ ಸಿಂಪಲ್ಲಾಗಿ ಕಾಣುತ್ತಿದ್ದ ಚಿಕ್ಕಣ್ಣ ಅವರ ಹೇರ್ ಸ್ಟೈಲ್ ಸಹ ಈಗ ಬದಲಾಗಿದೆ.
‘ಪಡ್ಡೆಹುಲಿ’ ಸಿನಿಮಾಕ್ಕಾಗಿ ಚಿಕ್ಕಣ್ಣನ ಹೇರ್ ಸ್ಟೈಲ್ ಚೇಂಜ್ ಆಗಿದೆ. ಹೇರ್ ಕಲರಿಂಗ್ ಮಾಡಿಸಿ ನ್ಯೂ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ ಸ್ಯಾಂಡಲ್ ವುಡ್ ನ ಬಹುಜನಪ್ರಿಯ ಕಾಮಿಡಿಯನ್ ಚಿಕ್ಕಣ್ಣ.
ಚಿಕ್ಕಣ್ಣ ಪಡ್ಡೆಹುಲಿ ಅಲ್ಲದೆ ಮಂಜು ಮಾಂಡವ್ಯ ನಿರ್ದೇಶನದ ‘ಭರತ ಬಾಹುಬಲಿ’ ಹೊಸಬರ ‘ಹೌಸ್ ಫಾರ್ ಸೇಲ್’ , ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ, ಅಭಿಷೇಕ್ ಅಂಬರೀಶ್ ಅಭಿನಯದ ‘ಅಮರ್’, ಚಿರಂಜೀವಿ ಸರ್ಜಾ ಅಭಿನಯದ ‘ರಾಜ ಮಾರ್ತಾಂಡ’, ನಿಖಿಲ್ ಕುಮಾರ್ ಅವರ ‘ಸೀತಾ ರಾಮ ಕಲ್ಯಾಣ’ ಯಶ್ ಅಭಿನಯದ ‘ಮೈ ನೇಮ್ ಈಸ್ ಕಿರಾತಕ’ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.