`ಸಾಯುವ ಮನಸ್ಸೆ..! ನಿನ್ನ ಕಡೆ ನನಗಿದೆ ತಿರಸ್ಕಾರ..!!'

Date:

`ಅರೆಕ್ಷಣ ಮನಸ್ಸು ಕೋತಿಯಾಗಿತ್ತು. ಸಾವರಿಸಿಕೊಳ್ಳುವಷ್ಟರಲ್ಲಿ ಮುಗುಳ್ ನಗುವೊಂದು ತುಟಿಯ ಕೊನೆಯಲ್ಲಿ ಕಚಗುಳಿಯಿಟ್ಟಿತ್ತು. ಛೇ.. ಹೀಗೆಲ್ಲ ಯೋಚಿಸಿಬಿಟ್ಟೆನಾ..? ಅಂತ ಮತ್ತೊಮ್ಮೆ ತಲೆಗೆ ಮೊಟಕಿಕೊಂಡು ಎದ್ದು ಹೊರ ನಡೆದುಬಿಟ್ಟಿದ್ದೆ. ಮನೆಯಿಂದ ಅನತಿ ದೂರದಲ್ಲಿದ್ದ ಪಾರ್ಕ್ ನಲ್ಲಿ ಇಳಿ ಸಂಜೆ ಸುಮ್ಮನೇ ಕುಂತು ಮತ್ತೊಮ್ಮೆ ಆ ಬಗ್ಗೆ ಯೋಚಿಸಿದೆ. ಪಾರ್ಕ್ ನ ತುಂಬಾ ಮುದ್ದಾಗಿ ಓಡಾಡುತ್ತಾ, ಆಟವಾಡುತ್ತಿದ್ದ ಮಕ್ಕಳೇಕೋ ಅಪ್ಯಾಯಮಾನವೆನಿಸಿದರು. ಇಳಿವಯಸ್ಸಿನಲ್ಲೂ ಶತಕ ದಾಟಿಯೇ ಅಸ್ತಂಗತರಾಗಲು ಶ್ರಮಿಸುತ್ತಿದ್ದ ವೃದ್ಧರು ನಿಜಕ್ಕೂ ತಮಾಷೆ ಎನಿಸಲಿಲ್ಲ. ಅಲ್ಲಿಯೂ ನನ್ನ ಯೋಚನೆಗಳ ದಿಕ್ಕು ಬದಲಾಗಲಿಲ್ಲ. ಅಲ್ಲಲ್ಲೇ ಗಿರಕಿ ಹೊಡೆಯುತ್ತಾ, ಪುನಃ ಪುನಃ ಕೆಣಕುತ್ತಿತ್ತು. ನನ್ನ ವಾಸಸ್ಥಳ ರಹ್ಮತ್ ನಗರ ದಾಟಿ, ತರಳಬಾಳು ಮಠವನ್ನು ಬಳಸಿ ಬರೋಬ್ಬರಿ ಸಹಕಾರನಗರದವರೆಗೆ ನಡೆದುಹೋದೆ. ಅಂದಾಜು ಮೂರರಿಂದ ನಾಲ್ಕು ಮೈಲಾಗಬಹುದು. ರಸ್ತೆ, ಪುಟ್ಪಾತ್ ಎರಡನ್ನೂ ಸಂಭಾಳಿಸಿಕೊಂಡು ನಡೆಯುತ್ತಿದ್ದವನಿಗೆ ಎಲ್ಲಿಗೆ ಹೋಗುತ್ತಿದ್ದೇನೆ ಎಂಬ ಪರಿವಿರಲಿಲ್ಲ. ಸುಮ್ಮನೇ ನಡೆಯುತ್ತಿದ್ದೆ. ಅದೇಕೋ ಕಾಲು ಸೋತ ಅನುಭವವಾಗಿ ಅಲ್ಲಿಯೇ ಕಟ್ಟೆಯೇ ಮೇಲೆ ಕುಳಿತುಬಿಟ್ಟೆ.

ನಿಜಕ್ಕೂ ಮನಸ್ಸು ಗೊಜಲು ಗೊಜಲಾಗಿತ್ತು. ಹತ್ತಿರತ್ತಿರ ಈ ಏಕಾಂತ ಬದುಕಿಗೆ ಹೊಂದಿಕೊಂಡು ದಶಕಗಳೇ ಕಳೆದಿದೆ. ಬುದ್ಧಿ ಬಂದಾಗಿನಿಂದ ಒಂಟಿಯಾಗಿ ಜೀವಿಸಿದ್ದೇ ಹೆಚ್ಚು. ಅಪಾರ ಗೆಳೆಯರು, ಬೆರಳೆಣಿಕೆಯ ಗೆಳತಿಯರಿದ್ದರೂ, ಅವರೆಲ್ಲ ಮೋಜು-ಮಸ್ತಿ, ಸುಳ್ಳು, ನಾಟಕೀಯತೆಗೆ ಮಾತ್ರ ಮೀಸಲಾದವರೇನೋ ಎಂದು ಆಗಾಗ ಅನಿಸಿದೆ. ಇವರನ್ನೆಲ್ಲ ಬದಿಗಿಟ್ಟು ಅದರಾಚೆಗೆ ಲೆಕ್ಕ ಹಾಕಿ ಕುಂತರೇ ನಾನು, ನನ್ನ ಪೆನ್ನು, ಪ್ಯಾಡು, ಸಮಯ ಕೊಲ್ಲುವ ಟ್ಯಾಬು, ಜೀವ ನುಂಗುವ ಸಿಗರೇಟು ಮಾತ್ರ ಉಳಿದುಕೊಳ್ಳುತ್ತಿತ್ತು. ಅಫ್ಕೋರ್ಸ್ ಉಳಿದುಕೊಳ್ಳುತ್ತಿದೆ. ಯಥಾಪ್ರಕಾರ ಆಫೀಸು, ದಿನನಿತ್ಯದ ಕಮಿಟ್ಮೆಂಟು, ಒಂದಿಷ್ಟು ಸುಳ್ಳು ಸುಳ್ಳೇ ಕೇಸು ಬಿಟ್ಟರೇ- ಮತ್ತದೇ ಖಾಲಿತನ. ಹೀಗಿದ್ದು ನಾನು ಖುಷಿಯಾಗಿರಲು ಪ್ರಯತ್ನಿಸುತ್ತೇನೆ. ಖುಷಿಯಾಗಿರುವಂತೆ ನಟಿಸುತ್ತೇನೆ. ದಿನಕ್ಕೆ ನಾಲ್ಕು ತಾಸು ನಿದ್ದೆ ಕಣ್ತುಂಬಿದರೇ ಅವತ್ತಿನ ಮಟ್ಟಿಗೆ ನಾನೇ ಕುಂಭಕರ್ಣ.

ಡಾಕ್ಟರ್ ಹತ್ರ ಹೋದರೇ, `ಜಾಸ್ತಿ ಚಿಂತೆ ಮಾಡ್ಬೇಡಿ’ ಎಂದು ನನಗೆ ಗೊತ್ತಿರುವ ವಿಚಾರವನ್ನೇ ಹೇಳುತ್ತಾರೆ. ಯಾರಾದ್ರೂ ಸ್ವಾಮೀಜಿ ಹತ್ರ ಹೋಗೋಣ ಅಂದ್ರೇ ಅವರದ್ದೇ ಊರು ಬಾಗಿಲು. ಇನ್ನು ದೇವರ ಹತ್ರ ಸಂಕಷ್ಟ ಹೇಳಿಕೊಳ್ಳೋಣ ಅಂದ್ರೇ: ದೇವರು ಈ ಜಗತ್ತಿನ ಅತಿದೊಡ್ಡ ಹಾಗೂ ಮೊಟ್ಟ ಮೊದಲನೆಯ ಸುಳ್ಳು ಎನ್ನುವವರ ಸಾಲಿಗೆ ನಾನೂ ಸೇರಿದ್ದೇನೆ. ಹಾಗಾದ್ರೆ ನನ್ನ ಸಮಸೈಯೇನು..?

ಇದನ್ನು ಖಿನ್ನತೆ ಎನ್ನುವುದೇ ಆದ್ರೆ, ಅದಕ್ಕೆ ಕಾರಣವಿರಲೇಬೇಕು..? ಬಲವಾದ ನಿಮಿತ್ತಗಳಿಲ್ಲದೇ ಅಪರಿಪೂರ್ಣತೆ ಭಾದಿಸುವುದಿಲ್ಲ. ಇಂಥದ್ದೊಂದು ತರ್ಕ ನನ್ನಲ್ಲಿದೆ. ಒಂದಲ್ಲ ಹಲವಾರು ಬಾರಿ ಎಡವಿದ್ದೇನೆ. ಎಷ್ಟೇ ಹುಷಾರಾಗಿದ್ದರೂ ಆಗಾಗ್ಗೆ ಎಡವದಿದ್ದರೇ ಎಡಗಾಲಿನ ಹೆಬ್ಬೆರಳೂ ಶಾಂತವಾಗುವುದಿಲ್ಲ. ಈ ಬದುಕೆನ್ನುವ ಕಾಲಚಕ್ರ ಹೇಗಿದೆ ನೋಡಿ, ಕೆಲವೊಮ್ಮೆ ಪಿತೂರಿಗಳು ಸಹ ನನಗರಿವಿಲ್ಲದೇ ನಡೆದುಹೋಗುತ್ತದೆ. ಎದುರಿಸುವ ಸಾಮಥ್ರ್ಯವಿದ್ದರೂ ಕೈ ಚೆಲ್ಲಿ ಕುಂತುಬಿಡುತ್ತೇನೆ. ಏನೂ ತಪ್ಪಿಲ್ಲದಿದ್ದರೂ ಇಲ್ಲಿಯವರೆಗೆ ಒಟ್ಟಿಗೆ ಅರ್ಧ ಕಪ್ ಚಾ ಕುಡಿಯದ `ಮೇಧಾ’ವಿಗಳು ನನ್ನ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಿಸುತ್ತಾರೆ. ಸುಳ್ಳು ಸುಳ್ಳೆ ಸಾಕ್ಷ್ಯ ನುಡಿಯಲು ಸಿದ್ಧರಾಗುತ್ತಾರೆ. ಅವರ ಸಾಚತನವನ್ನು ಪ್ರಶ್ನಿಸುವುದಿರಲಿ, ಈವರೆಗೆ ನಾನು ಅವರ ಬಗ್ಗೆ ಹೆಮ್ಮೆಯಿಂದ ಮಾತಾಡಿದ್ದೇ ಹೆಚ್ಚು. ಇನ್ನದಕ್ಕೆ ಯೋಗ್ಯರು ಅವರಲ್ಲ. ಅದಕ್ಕಿಂತ ತಮಾಷೆಯೆಂದರೇ ನನ್ನ ಹುಟ್ಟಿನ ಬಗ್ಗೆ ಅವರಿಗಿನ್ನು ಸಂಶಯ ಬಿಟ್ಟಿಲ್ಲ. ಅದನ್ನು ವಿವರಿಸಿದರೇ ಅರಗಿಸಿಕೊಳ್ಳುವ ಚಾತಿ, ಅರ್ಥ ಮಾಡಿಕೊಳ್ಳುವ ವ್ಯವಧಾನ ಅವರಿಗೆ ಖಂಡಿತ ಇಲ್ಲ. ನನಗದರ ಅಗತ್ಯವೂ ಇಲ್ಲ. ಆಲೋಚಿಸಿ ತೋಳು ಮಡಚಿ ನಿಂತವನ ಚಿಂತನೆಯೇ ಬೇರೆ..! ಕಾಲಾಯ ತಸ್ಮೈ ನಮಃ. ಅದೇನೇ ಇರಲಿ ಸಂಕಷ್ಟಕ್ಕೆ ತೆರೆದುಕೊಂಡು ಅವರನ್ನು ಕ್ಷಮಿಸಿದ್ದೇನೆ. ದೇವರು ಅವರನ್ನು ತಣ್ಣಗಿಟ್ಟಿರಲಿ. ಉಳಿದಂತೆ ಶೋಭಾಯಮಾನ, ವಿನೋದವಳಿಗಳ ಬಗ್ಗೆ ನಾನು ಯಾವತ್ತಿಗೂ ತಲೆಕೆಡಿಸಿಕೊಂಡಿಲ್ಲ. ಅವರಿಗೆ ಶಂಭೋ ಶಂಕರ ಅಂದು ಬಹಳ ಕಾಲವೇ ಕಳೆದಿದೆ. ಇನ್ನು ದೃಶ್ಯ ಮಾದ್ಯಮದಲ್ಲಿ ಕೆಲವರಿಗೆ ನನ್ನ ಕಂಡರೇ ಅವರಮ್ಮನ ಮೇಲಿರುವಂತಹ ಸಂಶಯ. ಡಸ್ ನಾಟ್ ಮ್ಯಾಟರ್.

ಅದರಾಚೆಗೂ ಕೆಲವೊಂದು ವೈಯುಕ್ತಿಕ ಆಕಾಂಕ್ಷೆ, ಹರಕತ್ತುಗಳು ನನಗಿವೆ. ಅದರಲ್ಲೂ ವಂಚನೆ ಅನುಭವಿಸಿದ್ದೇನೆ. ಅಷ್ಟಕ್ಕೂ ಏನಪ್ಪಾ.. ಎಲ್ಲಾ ರೀತಿಯ ಸಂಕಷ್ಟಗಳು ನನಗೊಬ್ಬನಿಗೆ ಇದೆ ಎಂದು ಕೊರಗುವ ಜಾಯಮಾನವಲ್ಲ. ಇತ್ತೀಚೆಗೆ ಫೇಸ್ ಬುಕ್ಕಿನಲ್ಲಿ ಅವಿವೇಕಿಯೊಬ್ಬ ಸಾಯುತ್ತೇನೆ ಎಂದು ಬರೆದಿದ್ದ. ಅವನ ಮಾಹಿತಿಯನ್ನು ತೆರೆದರೇ `ಪತ್ರಕರ್ತ’ ಅಂತಿತ್ತು. ಇವನ್ಯಾವ ಸೀಮೆ ಸಮಾಜ ಸುಧಾರಕ, ಸಾಯಲಿ ಎಂದು ಹಾರೈಸಿದೆ. ಏಕೆಂದರೇ ಈ ಹೇಡಿ ಮನಸ್ಸುಗಳ ಕಡೆ ನನಗೆ ಮೊದಲಿನಿಂದಲೂ ತಿರಸ್ಕಾರವಿದೆ. ಹೇಡಿಗಳ ಸಾಯಬೇಕು ಎಂದು ಆಗಾಗ್ಗೆ ಬರೆಯುತ್ತಿರುತ್ತೇನೆ. ಪ್ರತಿಯೊಬ್ಬ ಮನುಷ್ಯ ಹುಟ್ಟುತ್ತಲೇ ಪದವಿ, ಸಮಸೈಗಳನ್ನು ಹೊತ್ತು ಬಂದಿರುವುದಿಲ್ಲ. ಅವೆಲ್ಲ ಕಾಲಕ್ಕೆ ತಕ್ಕಂತೆ ಆವರಿಸಿಕೊಳ್ಳುವ ಅನುಭವಗಳು. ಎಲ್ಲವನ್ನು ಸಂಭಾಳಿಸಿ ಗೆಲ್ಲುವವನೇ ಶೂರ. ಎಲ್ಲಾ ಸಮಸೈಗಳಿಗೂ ತಕ್ಷಣದ ಪರಿಹಾರವಿಲ್ಲ ನಿಜ, ಆದರೆ ದೂರದಲ್ಲೆಲ್ಲೋ ಆಶಾವಾದ ಜೀವಂತವಾಗಿರುತ್ತದೆ. ಆ ಕಡೆ ಹೋಗುವ ಧಾವಂತದಲ್ಲಿ ಮತ್ತೆ ಎಡವಬಾರದು. ಎಷ್ಟೇ ಹುಷಾರಾಗಿದ್ದರೂ, ಯಾಮಾರುತ್ತೇವೆ ನಿಜ. ಕೊನೆಗೂ ಗೆಲ್ಲುವುದು. ಛಲ, ಪರಿಶ್ರಮ ಮಾತ್ರ. ಇದು ಈ ಕ್ಷಣದ ಹೆಜ್ಜೆ. ಸರ್ವನಾಶ ಮಾಡಿದಷ್ಟು ಪುಟಿಯುವ ಭರವಸೆಯಿದೆ. ವಾಮಾ ಮಾರ್ಗವಾದರೂ ಸರಿ, ಐ ವನ್ ದ ಗೇಮ್.

ಇನ್ನು ನನ್ನ ಪುಸ್ತಕದ ಬಗ್ಗೆ ಹೇಳುವುದಾದರೇ, ಮೂರು ಪುಸ್ತಕಗಳಿಗೆ ರಾಶಿ ರಾಶಿ ಸರಕನ್ನು ಹಾಕಿಕೊಂಡು ಕುಂತಿದ್ದೇನೆ. ಅದರಲ್ಲಿ `ನಾನು ಮತ್ತು ಅವಳು’ ಹೆಸರಿನ ನನ್ನ ಎರಡನೇ ಪುಸ್ತಕ ಬಹುತೇಕ ಮುಗಿಸಿದ್ದೇನೆ. ಸ್ವಲ್ಪ ಬಾಕಿಯಿದೆ. ನೈಜ ಘಟನೆಯನ್ನು ಕಾದಂಬರಿ ರೂಪಕ್ಕೆ ಇಳಿಸುವುದು ಅಷ್ಟು ಸುಲಭವಲ್ಲ. ಇನ್ನೆರಡು ಪುಸ್ತಕಗಳಲ್ಲಿ ಒಂದು, ನನ್ನ `ಕಾರಣ’ಗಳ ಒಂದಿಷ್ಟು ವಿಚಾರ, ಇನ್ನೊಂದು ನಿಜ ಭವಿಷ್ಯವನ್ನು ನಾನು ನುಡಿಯುವ ಕ್ರೈಂ ಕಥೆ, ಅದಕ್ಕೆ `ಮುಹೂರ್ತ’ವಿಟ್ಟಿದ್ದೇನೆ. ಇವೆಲ್ಲ ಯಾವ ಕಾಲಕ್ಕೆ ಮುಗಿಯುತ್ತೋ ಗೊತ್ತಿಲ್ಲ. ಇರುವುದು ಒಂದೇ ಜನ್ಮ, ನನಗೇ ನಾವೇ ಶ್ರೇಷ್ಠ ಎಂಬ ನಂಬಿಕೆಯಲ್ಲಿ ಉಸಿರನ್ನು ಕಾಯ್ದಿರಿಸಿಕೊಂಡಿದ್ದೇನೆ. ನನ್ನ ಖಿನ್ನತೆಗೆ ಕಾರಣವಾದ ಕೆಲ ವಿಚಾರಗಳಲ್ಲಿ ಕೆಲವದರ ವಿಷಯಕ್ಕೆ ಬಂದ್ರೆ; ನಮ್ಮ ಕಾನೂನಿನಲ್ಲಿ ಸತ್ಯಕ್ಕೆ ಬೆಲೆಯಿದೆ, ಅದ್ಯಾಕೆ ಅಂಜಿಕೆಯಿಂದ ಬದುಕಬೇಕು, ಲೀವ್ ಇಟ್. ಇವನ್ನೆಲ್ಲ ಅಹಂಕಾರ ಅಂದುಕೊಂಡರೂ ನನ್ನ ಸಮ್ಮತಿಯಿದೆ.

ಸಹಕಾರ ನಗರದ ಕಟ್ಟೆಯಲ್ಲಿ ಕುಂತು ಇಷ್ಟೆಲ್ಲ ಆಲೋಚಿಸಿ ಎದ್ದವನು, ನಡೆಯುತ್ತಲೇ ಮನೆ ಸೇರಿದೆ. ಮತ್ತದೇ ನಿದ್ರಾಹೀನತೆ. ರಾತ್ರಿಯಿಡೀ ರೆಪ್ಪೆ ಮಿಟುಕಿಸದೇ ಬೆಳ್ಳಂಬೆಳಿಗ್ಗೆ ತಣ್ಣೀರಿನ ಸ್ನಾನ ಮುಗಿಸಿ ಹೊರ ಜಗತ್ತಿಗೆ ತೆರೆದುಕೊಂಡವನಿಗೆ ಯಾವುದೂ ಹೊಸತು ಎನಿಸಲಿಲ್ಲ; ನನ್ನನ್ನು ಹೊರತುಪಡಿಸಿ..!?

  •  ರಾ. ಚಿಂತನ್.

POPULAR  STORIES :

`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?

ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?

ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!

ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

`ಚಾನೆಲ್ ಸಂಪಾದಕ ಜೈಲುಪಾಲು..!?’ ಯಾರು ಆ ಸಂಪಾದಕ..?

ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…

ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?

ಅಪಘಾತವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡ್ತೀರಾ..? ಅಪಲೋಡ್ ಮಾಡಿದ್ರೇ ಜೈಲ್ ಗ್ಯಾರಂಟಿ..!?

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

ಸಿಯಾಚಿನ್ ಎಂಬ ಸಾವಿನ ಕಣಿವೆ..! ರಣಚಳಿಗೆ ದೇಹ ಮರಗಟ್ಟಿ ಪುಡಿಯಾಗುತ್ತದೆ..!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...