ಸ್ಯಾಂಡಲ್‍ವುಡ್‍ನ ಮತ್ತೊಂದು ತಾರಾಜೋಡಿ ದಾಪಂತ್ಯಕ್ಕೆ ಕಾಲಿಡುತ್ತಿದೆ. ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಮದುವೆ ಆಗೋದು ಪಕ್ಕಾ ಆಗಿದೆ. ಇಷ್ಟು ದಿನ ಚಿರು-ಮೇಘನಾ ಮದ್ವೆ ಆಗ್ತಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಕೇಳಿಬರ್ತಿತ್ತು. ಆದ್ರೆ ಚಿರು ಅಥವಾ ಮೇಘನಾ ಅವರಾಗಲಿ, ಅವರ ಕುಟುಂಬದವರಾಗಲಿ ಈ ಬಗ್ಗೆ ಯಾವುದೇ ರೀತಿಯ ಮಾಹಿತಿ ಬಿಟ್ಟುಕೊಟ್ಟಿರ್ಲಿಲ್ಲ. ಇದೀಗ ಅಕ್ಟೋಬರ್ 22ಕ್ಕೆ ಚಿರು ಮತ್ತು ಮೇಘನಾ ಎಂಗೇಜ್ಮೆಂಟ್ ನಡೆಯೋದು ಕನ್ಫರ್ಮ್ ಆಗಿದ್ದು ಡಿಸೆಂಬರ್‍ನಲ್ಲಿ ಮದುವೆ ಆಗಲಿದ್ದಾರಂತೆ.
ಇವತ್ತು ಹುಟ್ಟುಹುಬ್ಬ ಆಚರಿಸಿಕೊಂಡ ಚಿರಂಜೀವಿ ಸರ್ಜಾ ಮೇಘನಾ ರಾಜ್ ಅವರನ್ನು ಮದುವೆ ಆಗುವ ಬಗ್ಗೆ ಇಷ್ಟುದಿನ ಬಚ್ಚಿಟ್ಟಿದ್ದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಇದೇ ಸಮಯದಲ್ಲಿ ಚಿರು ಅಭಿನಯದ ‘ಸಂಹಾರ’ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇಲ್ಲಿದೆ ಟ್ರೇಲರ್ ನೋಡಿ..
ಚಿರು-ಮೇಘನಾ ಎಂಗೇಜ್ಮೆಂಟ್ ಕನ್ಫರ್ಮ್
Date: