ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಆಕೆಯ ತಲೆಯನ್ನು ಪೊ,ಲೀಸ್ ಠಾಣೆಗೆ ತಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.
ರೂಪ (30) ಎಂಬಾಕೆ ಪತಿಯಿಂದ ಕೊಲೆಯಾದ ಪತ್ನಿ. ಸತೀಶ್ ಎಂಬಾತ ಆರೋಪಿ.
ಸತೀಶ್ ಮತ್ತು ರೂಪ ಐದು ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಆದರೆ ರೂಪ ಸುನೀಲ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಸತೀಶ್ ಕತ್ತಿಯಿಂದ ರೂಪಾಳ ತಲೆ ಕತ್ತರಿಸಿದ್ದಾನೆ.
ಸುನೀಲ್ ತಪ್ಪಿಸಿಕೊಂಡಿದ್ದಾನೆ. ಬಳಿಕ ಸತೀಶ್ ತಲೆಯನ್ನು ಚೀಲದಲ್ಲಿಟ್ಟುಕೊಂಡು 20ಕಿಮೀ ಬಸ್ ನಲ್ಲಿ ಪ್ರಯಾಣಿಸಿ ಅಜ್ಜಂಪುರ ಹೋಬಳಿ ಶಿವನಿ ರೈಲ್ವೆ ಸ್ಟೇಷನ್ ನಿಂದ ಅಜ್ಜಂಪುರ ಠಾಣೆಗೆ ಬಂದು ತಲೆ ಮತ್ತು ಕತ್ತಿಯನ್ನು ನೀಡಿ ಶರಣಾಗಿದ್ದಾನೆ.
ಅಷ್ಟೇಅಲ್ಲದೆ ನನಗೆ ಯಾವ ಶಿಕ್ಷೆ ನೀಡಿದರೂ ಸರಿಯೇ. ಜೈಲಿನಿಂದ. ಬಿಡುಗಡೆ ಆದ ಬಳಿಕ ಸುನೀಲ್ ನನ್ನು ಹುಡುಕಿ ಕೊಲೆ ಮಾಡುತ್ತೇನೆ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.