No menu items!
22.1 C
Munich
Friday, May 22, 2026

ಅಂಡರ್ 19 ವಿಶ್ವಕಪ್ : ನಾಳೆ ಇಂಡೋ-ಪಾಕ್ ಕದನ…!

Must read

ನ್ಯೂಜಿಲೆಂಡ್ ಅಂಡರ್ 19 ವಿಶ್ವಕಪ್ ನಲ್ಲಿ ಸೋಲಿಲ್ಲದೆ ಮುನ್ನಿಗಿರುವ ಭಾರತ ತಂಡ ನಾಳೆ ಸೆಮಿಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.


ಕನ್ನಡಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅತ್ಯುತ್ತನ ಪ್ರದರ್ಶನ ತೋರುತ್ತಿರುವ ಪೃಥ್ವಿ ಶಾ ನೇತೃತ್ವದ ಟೀಂ ಇಂಡಿಯಾ ಗೆಲುವಿನ ಹಳಿಯಲ್ಲಿದೆ.


ನಾಳೆ ಬೆಳಗ್ಗೆ 3 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಪಾಕಿಸ್ತಾನವನ್ನು ಮಣಿಸಿ ಫೆಬ್ರವರಿ 3ರಂದು ನಡೆಯಲಿರೋ‌ ಫೈನಲ್ ನಲ್ಲಿ ಆಸ್ಟ್ರೇಲಿಯಾ ‌ವಿರುದ್ಧ ಸೆಣಸಲಿದೆ‌.


ಮೊದಲ ಸೆಮಿಫೈನಲ್ ನಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿರುವ ಆಸೀಸ್ ಗೆ ಭಾರತದ ಭಯ ಇದ್ದೇ ಇದೆ.
ನಾಳೆ ಪಾಕ್ ಅನ್ನು ಮಣಿಸಿ, ಮುಂದಿನ ಪಂದ್ಯದಲ್ಲಿ ಆಸೀಸ್ ಗೆ ಸೋಲುಣಿಸಿ ದ್ರಾವಿಡ್ ಶಿಷ್ಯರು ವಿಶ್ವ ವಿಜೇತರಾಗಲಿ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article