ಹೆಚ್ಚು ಲಾಭ ಪಡೆಯಲು ಕಾಫಿ ಹೇಗೆ ಕುಡಿಯಬೇಕೆಂಬುದನ್ನು ವಿಜ್ಞಾನ ಹೇಳುತ್ತದೆ. ಆ ರೀತಿಯಾಗಿ ನೀವು ಪಾಲಿಸಿದರೆ ಕೆಲವೊಮ್ಮೆ ತಪ್ಪು ಮಾಡುತ್ತಿದ್ದೀರಿ ಎಂದಲೇ ಅರ್ಥ.
ನೀವು ಸ್ಮಾರ್ಟ್ ಆಗಿ ಕಾಫಿ ಕುಡಿಯಲು ಇಲ್ಲಿವೆ 7 ವಿಧಾನಗಳು:
1. ಬೆಳಗ್ಗೆ ಹತ್ತು ಗಂಟೆಗೂ ಮುಂಚೆ ಕಾಫಿ ಕುಡಿಯಬೇಡಿ
ಪ್ರತೀ ಬಾರಿಯೂ ಗಡಿಯಾರ ನೋಡಿ ಸಮಯ ತಿಳಿದುಕೊಳ್ಳುವ ರೀತಿಯಲ್ಲಿ ನಮ್ಮ ದೇಹದಲ್ಲಿಯೂ ಇದೇ ರೀತಿಯಲ್ಲಿ ಕೆಲಸ ಮಾಡುವ ಗಡಿಯಾರವೊಂದಿರುತ್ತದೆ. ಇದಕ್ಕೆ ಬಯಾಲಾಜಿಕಲ್ ಕ್ಲಾಕ್ ಅಥವಾ ಸಿರ್‍ಕ್ಯಾಡಿಯೆನ್ ಕ್ಲಾಕ್ ಎಂದು ಕರೆಯುತ್ತಾರೆ. ನಿಮ್ಮನ್ನು ನಿದ್ದೆಯಿಂದ ಎಚ್ಚರಿಸುವುದು, ಸರಿಯಾದ ಸಮಯದಲ್ಲಿ ನಿದ್ದೆ ಬರುವ ಹಾಗೆ ಮಾಡುವುದು ಇದೇ ಕ್ಲಾಕ್. ಇದು ಕಾರ್ಟಿಸೋಲ್ ಎನ್ನುವ ಹಾರ್ಮೊನನ್ನು (ಗ್ರಂಥಿ) ಬಿಡುಗಡೆಗೊಳಿಸುತ್ತದೆ.
ಈ ಹಾರ್ಮೋನು ದಿನದಲ್ಲಿ ಮೂರು ಬಾರಿ ಅತೀ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅದರಲ್ಲಿಯೂ ಬೆಳಗ್ಗೆ 8-9, ಮಧ್ಯಾಹ್ನ 12-1 ಮತ್ತು ಸಂಜೆ 5-6. ಹೀಗಾಗಿ ಈ ಸಮಯದಲ್ಲಿ ಕಾಫಿ ಕುಡಿಯುವುದು. ಸೂಕ್ತವಲ್ಲ.
ಬೆಳಗ್ಗೆ ಎದ್ದ ಕೂಡಲೇ ನಾವ್ಯಾಕೇ ಕಾಫಿಗಾಗಿ ಹಂಬಲಿಸುತ್ತೇವೆ?
ಇದಕ್ಕೆ ಒಂದೇ ಒಂದು ಕಾರಣವಿದೆ. ನಾವು ನಮ್ಮ ದೇಹವನ್ನು ಆ ಸಮಯದಲ್ಲಿ ನಮ್ಮ ದೇಹಕ್ಕೆ ಕ್ಯಾಫೇನ್‍ನನ್ನು ಒದಗಿಸುವ ರೀತಿಯಲ್ಲಿ ಸುಸಜ್ಜಿತಗೊಳಿಸಿರುತ್ತೇವೆ. ಹೀಗಾಗಿ ಆ ಸಮಯಕ್ಕೆ ನಮಗೆ ಕಾಫಿ ಬೇಕೆನ್ನಿಸುವುದು ಸಹಜ.
ಈ ರೀತಿ ಕಾರ್ಯ ನಿಮಗೆ ಅರ್ಥ ಮಾಡಿಕೊಳ್ಳಬೇಕಾದಲ್ಲಿ ಪ್ಯಾವಲವ್ ನಾಯಿಯ ಪ್ರಯೋಗಿಕ ಪರೀಕ್ಷೆಯನ್ನು ನೆನಪು ಮಾಡಿಕೊಳ್ಳಿ.
2. ನೀವು ಎಷ್ಟು ಪ್ರಮಾಣದಲ್ಲಿ ಕೆಫೇನ್‍ನನ್ನು ಕುಡಿಯುತ್ತಿದ್ದೀರಿ ಎಂಬುದರ ಬಗ್ಗೆ ಅರಿವಿರಲಿ
ದಿನಕ್ಕೆ ಒಬ್ಬ ಸಾಮಾನ್ಯ ವ್ಯಕ್ತಿ 400ಮಿಲಿ ಗ್ರಾಂನಷ್ಟು ಕಾಫಿ ಕುಡಿದರೆ ಉತ್ತಮ. ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀವು ಕುಡಿದಾದ್ದಲ್ಲಿ, ನಿಮಗೆ ಸುಸ್ತು, ಆಯಾಸ, ನಡುಕ, ಹೊಟ್ಟೆ ನೋವು, ಮತ್ತು ಇನ್‍ಸೋಮ್ನಿಯಾದಂತ ಸಮಸ್ಯೆಗಳಿಂದ ನೀವು ಬಳಲೂಬಹುದು. ಆದರೆ ಈ ಸಮಸ್ಯೆಗಳು ಮಹಿಳೆಯರಿಗಿಂತ ಪುರುಷರಿಗೇ ಅತೀ ಹೆಚ್ಚು ಬಾಧಿಸುತ್ತವೆ ಎಂದು ಕಂಡುಬಂದಿದೆ.
3. ನಿಮ್ಮ ಬುದ್ಧಿ ಶಕ್ತಿ ಹೆಚ್ಚಿಸಿಕೊಳ್ಳಿ
ಸಂಶೋಧನೆಯ ಪ್ರಕಾರ ದಿನದಲ್ಲಿ ಸುಮಾರು 200ಮಿಲಿ ಗ್ರಾಂನಷ್ಟು ಕೆಫೇನ್ ಅಂಶ ನಿಮ್ಮ ಬುದ್ಧಿಶಕ್ತಿಯನ್ನು ವೃದ್ಧಿಸುತ್ತದೆ.
4. ಕೆಫೇನ್ ಒಂದು ರೀತಿಯ ಪ್ರಚೋದಕ
ಒಂದು ರೀತಿಯಲ್ಲಿ ಕಾಫಿ ಕುಡಿಯುವುದರಿಂದ ನಿಮಗೆ ಸ್ವಲ್ಪ ಪ್ರಮಾಣದಲ್ಲಿ ಶಕ್ತಿ ಬರುತ್ತದೆ. ಇದರಿಂದ ನೀವು ಮಾಡುವ ಕೆಲಸದ ವೇಗವೂ ಸ್ವಲ್ಪ ಮಟ್ಟದಲ್ಲಿ ಹೆಚ್ಚುತ್ತದೆ. ಆದರೆ ಇದನ್ನೇ ರೂಢಿಸಿಕೊಳ್ಳಬೇಡಿ. ಇಷ್ಟಲ್ಲದೇ ನಿಮ್ಮ ಕೆಲಸದಲ್ಲಿನ ಏಕಾಗ್ರತೆ ಮತ್ತು ವೇಗ ಹೆಚ್ಚಿಸಲು ಕಾಫಿ ಡೇ ಅಂತಹ ಕಾಫೀ ಶಾಪ್‍ಗಳಿಗೆ ತೆರಳಿ. ಆ ಅಂಗಡಿಗಳಲ್ಲಿರುವ ಸುಂದರವಾದ ಸಂಗೀತ ನಿಮ್ಮ ಮಿದುಳನ್ನು ಬಡಿದೆಬ್ಬಿಸುತ್ತದೆ.
5. ಕ್ರೀಡಾಸಕ್ತಿ ಹೆಚ್ಚಿಸಲು ಕಾಫಿ ಉಪಯೋಗಕಾರಿ
ನೀವು ವೇಗವಾಗಿ ಓಡಬೇಕೆ? ಒಂದು ಗಂಟೆಗಿಂತ ಮುಂಚಿತವಾಗಿ ಒಂದು ಕಪ್ ಕಾಫಿಯನ್ನು ಕುಡಿಯಿರಿ. ಆಗ ನೀವು ಹುಸ್ಸೇನ್ ಬೋಲ್ಟ್ ಆದರೂ ಆಗಬಹುದು.
ಕಾಫಿಯಲ್ಲಿರುವ ಕೆಫೇನ್ ಅಂಶ ನಮ್ಮಲ್ಲಿರುವ ಕೊಬ್ಬನ್ನು ಬಳಸಿಕೊಂಡು ನಮ್ಮ ಸಹನಾಶೀಲತೆಯನ್ನು ವೃದ್ಧಿಸುತ್ತದೆ. ಈ ಪರಿಣಾಮ ಸುಮಾರು ಗಂಟೆಗಳವರೆಗೂ ನಿಮ್ಮ ದೇಹದಲ್ಲಿರುತ್ತದೆ. ನೀವು ಕಾಫಿ ಕುಡಿಯುವುದರಿಂದ ನಿಮ್ಮ ಮಿದುಳಿನಲ್ಲಿರುವ ಎಂಡಾರ್ಫಿನ್‍ಗಳ ಪ್ರಮಾಣವನ್ನು ಹೆಚ್ಚಿಸಿ ಹೆಚ್ಚೆಚ್ಚು ವ್ಯಾಯಾಮ ಮಾಡಲು ಉತ್ತೇಜಿಸುತ್ತದೆ.
6. ನಿಮ್ಮ ಆರೋಗ್ಯ ವೃದ್ಧಿಸಬೇಕೇ? ಹಾಗಿದ್ದಲ್ಲಿ ಕಾಫಿ ಕುಡಿಯಿರಿ
ಹೌದು. ಕಾಫಿ ಕುಡಿಯುವುದರಿಂದ ಹೃದಯದ ತೊಂದರೆ, ಪಾರ್ಶವಾಯು(ಸ್ಟ್ರೋಕ್), ಸಕ್ಕರೆ ಖಾಯಿಲೆ, ಆತ್ಮಹತ್ಯೆಯ ನಿರ್ಧಾರಗಳು, ಪಾರ್ಕಿನ್ಸ್‍ಸನ್ ಖಾಯಿಲೆಗಳನ್ನು ತಡೆಗಟ್ಟುತ್ತದೆ. ವಿಶ್ವದಲ್ಲಿ ಅತೀ ಹೆಚ್ಚಿನ ಜನ ಈ ಖಾಯಿಲೆಗಳಿಂದಲೇ ಸಾಯುವುದು ಜಾಸ್ತಿ. ಹೀಗಾಗಿ ಈ ರೋಗಗಳನ್ನು ನೀವು ದೂರವಿಟ್ಟರೇ ನಿಮ್ಮ ಆಯಸ್ಸು ವೃದ್ಧಿಸಿದ ಹಾಗೇ ಅಲ್ಲವೇ?
ಆದರೆ, ನೆನಪಿಡಿ ಈ ಲಾಭಗಳು ಕೇವಲ ನೀವು ಹೇಗೆ ಕಾಫಿ ಕುಡಿಯುತ್ತೀರಿ ಎನ್ನುವುದರ ಮೇಲೆ ಅವಲಂಭಿತವಾಗಿರುತ್ತದೆ. ಕಾಫಿಯಲ್ಲಿ ನಾವು ಹಾಲು, ಕೆನೆ, ಸಕ್ಕರೆ ಅಥವಾ ಕೃತಕವಾಗಿ ಸಿಹಿಗೊಳಿಸುವ ವಸ್ತುಗಳನ್ನು ಬಳಸುತ್ತೇವೆ. ಇವುಗಳು ನಿಮ್ಮ ದೇಹಕೆ ಅನಗತ್ಯ ಕೊಬ್ಬು, ಮತ್ತು ಕ್ಯಾಲೋರಿಗಳನ್ನು ಹೆಚ್ಚಿಸುತ್ತದೆ.
ನಿಮಗೆ ಇವುಗಳಿಲ್ಲದೇ ಬ್ಲ್ಯಾಕ್ ಕಾಫಿ ಕುಡಿಯಲು ಆಗದಿದ್ದಲ್ಲಿ ನೀವು ಸಸಿಯ ಹಾಲನ್ನು ( ಕೊಬ್ಬರಿ ಹಾಲು, ಬದಾಮಿ ಹಾಲು) ಉಪಯೋಗಿಸಬಹುದು. ಮತ್ತು ನಿಮ್ಮ ಕಾಫಿಯನ್ನು ಸಿಹಿಯಾಗಿಸಲು ಲವಂಗ,ಚಕ್ಕೆ, ದಾಲ್ಚಿನ್ನಿ, ಕೋಕೋ ಪದಾರ್ಥಗಳನ್ನು ಸಕ್ಕರೆಯ ಬದಲಾಗಿ ಉಪಯೋಗಿಸಕೊಳ್ಳಬಹುದು.
- ವಿಶು
POPULAR STORIES :
ಸೆಲ್ಫಿ ಹುಚ್ಚು ಹೆಚ್ಚಾಯ್ತು..! ಅತ್ಯಾಚಾರ ಸಂತ್ರಸ್ತೆ ಜೊತೆ ಸೆಲ್ಫಿ ತೆಗೆದುಕೊಂಡ್ಲು ಮಹಿಳಾ ಆಯೋಗದ ಸದಸ್ಸೆ..!
ಬಟ್ಟೆ ಕಳಚಿ ಬೆತ್ತಲಾದ್ರು ಆ ದೇಶದ ಜನ.. ಬೆತ್ತಲಾಗೇ ಮಾಡಿದ್ರು ಕಚೇರಿ ಕೆಲಸ ಯಾಕೆ ಗೊತ್ತಾ..?
ನಿರ್ದೇಶಕನ ಬೆವರಿಳಿಸಿದ ಜಗ್ಗುದಾದ.. ರಾಘವೇಂದ್ರ ಹೆಗಡೆ ಮೈ ಚಳಿ ಬಿಡಿಸಿದ ದರ್ಶನ್..!
ಜೈಲ್ ನಿಂದಲೇ IIT ಪರೀಕ್ಷೆ ಬರೆದು ಪಾಸಾದ ಈ ಹುಡುಗನ ಬಗ್ಗೆ ಗೊತ್ತೇ??
ಸತ್ತ ನಂತರವೂ ವ್ಯಕ್ತಿಗಳ ಜತೆ ಸಂವಹನ ನಡೆಸಿ!!
ವಿಮಾನದ ಮೆಟ್ಟಿಲಿನಿಂದ ಬಿದ್ದವಳು ಏನಾದಳು? ಹೆಂಗಿದ್ದ ಮಹಿಳೆ ಹೇಗಾದ್ಲು ಗೊತ್ತಾ?