ಕೋಮಾ ಕೋಮಾ ಕೋಮಾ… ಹೊಸ ಹುಡುಗರ ಹೊಸ ಹವಾ… ಇದೊಂಥರಾ ಬಣ್ಣಬಣ್ಣದಾ ಲೋಕ..! ನಟನೆಯಲ್ಲಿ ಹೊಸಬರು ಅನಿಸದ ಹೊಸಬರು..! ಏನ್ ಬೇಕೋ ಅದು, ಎಷ್ಟ್ ಬೇಕೋ ಅಷ್ಟು… ರುಚಿಗೆ ತಕ್ಕಷ್ಟು ಅಂತಾರಲ್ಲ ಹಾಗೆ. ಕ್ಯಾಮೆರಾಮನ್, ಎಡಿಟರ್ ಸಿನಿಮಾದ ಪ್ಲಸ್ ಪಾಯಿಂಟ್. ಹಾಡುಗಳು ಕೇಳೋದರ ಜೊತೆಗೆ ನೋಡೋಕೂ ಮಜಾ ಕೊಡ್ತಾವೆ. ಕಣ್ಣಿಗೆ ಹಬ್ಬ ಅಂತಾರಲ್ಲ ಹಾಗೆ.! ಡೈಲಾಗ್ ಚೆನ್ನಾಗಿಲ್ಲ ಅಂದ್ರೆ ನಿಮ್ಗೆ ಕಿವಿ ಸರಿಯಾಗ್ ಕೇಳಲ್ಲ ಅಂತ ಅರ್ಥ.! ರವಿ ಮತ್ತು ಚೇತನ್ ನಿರ್ದೇಶಕರ ಜೋಡಿ, ಕನ್ನಡಕ್ಕೊಂದು ಭಲೇ ಜೋಡಿ ಆಗೋದ್ರಲ್ಲಿ ಅನುಮಾನವಿಲ್ಲ.! ಕಥೆ ಎಕ್ಸ್ ಟ್ರಾ ಆರ್ಡಿನರಿ ಅನಿಸದೇ ಇದ್ರೂ, ನಿಮಗೆ ವ್ಯಥೆ ಅಂತ ಖಂಡಿತ ಅನಿಸೋದಿಲ್ಲ.! ಸಿಂಪಲ್ ಕಥೆಗೆ ಸಖತ್ತಾಗಿ ಎಲ್ಲಾ ಮಿಶ್ರಣ ಮಾಡಿ, ರುಚಿಕರವಾದ ಸಿನಿಮಾ ಮಾಡಿದ್ದಾರೆ… ಮಧ್ಯದಲ್ಲಿ ಏನೋ ಮಿಸ್ ಹೊಡೀತಿದೆ ಅಂತ ಅನಿಸೋ ಟೈಮಿಗೆ ಮತ್ತೆ ಟ್ರ್ಯಾಕ್ ಗೆ ಬರೋ ಸಿನಿಮಾ ಪ್ರೇಕ್ಷಕನನ್ನು ಕೋಮಾ ಸ್ಟೇಜಿಗೆ ತೆಗೆದುಕೊಂಡು ಹೋಗದೇ ಸಿನಿಮಾ ಮೇಲೆ ಪ್ರೇಮ ಬರೋ ಹಾಗೆ ಮಾಡುತ್ತೆ..! ಕಷ್ಟಪಟ್ಟು ಸಿನಿಮಾ ನೋಡಿದ್ರೆ ಸಿನಿಮಾ ಇಷ್ಟವಾಗುತ್ತೆ. ಹೊಸಬರ ಸಿನಿಮಾ ಆದ್ರೂ ಕೊಟ್ಟ ಕಾಸಿಗೆ ಮೋಸವಾಗೋದಿಲ್ಲ… ಬುಕ್ ಮಾಡಿ, ಕನ್ನಡ ಸಿನಿಮಾಗಳನ್ನು ಚಿತ್ರಮಂದಿರದಲ್ಲೇ ನೋಡಿ..ಪ್ರೋತ್ಸಾಹ ನೀಡಿ…
- ಕೀರ್ತಿ ಶಂಕರಘಟ್ಟ
POPULAR STORIES :
ವೆಂಕಯ್ಯ ಕರ್ನಾಟಕಕ್ಕೆ ಸಾಕಯ್ಯ ಅಂದ್ರೆ.. `ವಚ್ಚೆ ವಸ್ತಾನು’ ಅಂತ ತೆಲುಗಿನಲ್ಲಿ ಅಂದ್ರು..!
ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?
ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!
ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!
ಪ್ರತಿ 10 ನಿಮಿಷಕ್ಕೆ ಶುರುವಾಗುತ್ತೆ ಹೊಸ ಜೀವನ..!! ಇದು ರೀಲ್ ಅಲ್ಲ ರಿಯಲ್ ಗಜನಿಯ ಕಥೆ..!!!
ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?
ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!
ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?