ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!'

0
61

ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..! ಇದು ಕೇವಲ ಗಾದೆ ಮಾತಲ್ಲ, ನಿಜವೂ ಹೌದು. ಹೆಣ್ಣು ಒಲಿದರೇ ನದಿಯಂತೆ ಪ್ರಶಾಂತವಾಗಿ ಹರಿಯುತ್ತಾಳೆ, ಮುನಿದರೇ ಅವಳ ಅಬ್ಬರ ಸುನಾಮಿಗೆ ಸಮ. ಅಂಥ ಹತ್ತು ಮಂದಿ ಕ್ರೂರ ಹೆಣ್ಣುಮಕ್ಕಳ ವಿಸ್ತೃತ ವರದಿ ಇಲ್ಲಿದೆ. ಹೆಣ್ಣು ಅಬಲೆ ಅಂದವರೆಲ್ಲಾ ಮುಟ್ಟಿ ನೋಡಿಕೊಳ್ಳುವಂತೆ ಪೈಶಾಚಿಕತೆ ಮೆರೆದ ಅಸಂಖ್ಯಾ ಹೆಣ್ಣುಮಕ್ಕಳು ಈ ಜಗತ್ತಿನಲ್ಲಿದ್ದಾರೆ. ಅಂಥ ಅತೀ ಕ್ರೂರ ಹೆಣ್ಣು ಮಕ್ಕಳ ಬಗ್ಗೆ ಹೇಳೋದಕ್ಕಿಂಥ ಮೊದಲು ಹೆಣ್ಣಿನ ಬಗ್ಗೆ ಸ್ವಲ್ಪ ವಿವರಣೆ ಅತ್ಯಗತ್ಯ.

ಆ ಕಾಲದ ಕ್ರೂರ ಹೆಣ್ಣಿನ ವಿಚಾರ ಬಿಡಿ, ಪ್ರಸ್ತುತ ಹೇಗಿದೆ ನೋಡಿ. ದಿನಕ್ಕೆ ಅದೆಷ್ಟು ಹೆಣ್ಣುಮಕ್ಕಳು ಕಾಮುಕರ ಕೈಲಿ ಸಿಕ್ಕು ನರಳುತ್ತಾಳೋ ಲೆಕ್ಕವಿಲ್ಲ. ಎಲ್ಲಿ ನೋಡಿದರೂ, ಯಾವಾಗ ನೋಡಿದರೂ ಹೆಣ್ಣಿನ ಮೇಲೆ ದೈಹಿಕ ದೌರ್ಜನ್ಯ ನಡೀತಾನೇ ಇದೆ. ಇಲ್ಲಿ ಕಾಮದ ಮುಂದೆ ರಕ್ತ ಸಂಬಂಧಗಳಿಗೂ ಬೆಲೆಯಿಲ್ಲ. ಮನೆಯಿಂದ ಹೊರಗೆ ಹೆಜ್ಜೆಯಿಟ್ಟ ಹೆಣ್ಣು ಸೇಫಾಗಿ ಮರಳುತ್ತಾಳೆ ಅನ್ನೋದು ಖಾತ್ರಿಯಿಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇರೋ ಅತ್ಯಾಚಾರಕ್ಕೆ ಕಾರಣ ಏನು..?

ಜಗತ್ತಿನಲ್ಲಿ ದಿನಕ್ಕೆ ಸಾವಿರಾರು ಅತ್ಯಾಚಾರಗಳು ನಡೆಯುತ್ತವೇ ಎಂದು ಸಮೀಕ್ಷೆ ಹೇಳುತ್ತೆ. ಅಷ್ಟೇ ಪ್ರಮಾಣದಲ್ಲಿ ಅತ್ಯಾಚಾರದ ಜೊತೆ ಹತ್ಯೆಗಳು ನಡೆದು ಹೋಗುತ್ತವೆ. ಮನೆಯಲ್ಲಿ ಒಬ್ಬಂಟಿಯಾಗಿರೋ ಮುದುಕಿಯಿಂದ ಹಿಡಿದು, ಆಗ ತಾನೆ ಜಗತ್ತನ್ನು ಅಚ್ಚರಿಯಿಂದ ನೋಡುತ್ತಿರೋ ಪುಟ್ಟ ಕಂದಮ್ಮಗಳವರೆಗೂ ಅತ್ಯಾಚಾರ ನಡೆಯುತ್ತಿದೆ. ಶಾಲೆಗೆ ಟಾಟಾ ಮಾಡಿ ಹೋದ ಮಗು, ಪಕ್ಕದ ಮನೆ ಅಂಕಲ್ ಚಾಕ್ಲೇಟ್ ಕೊಡಿಸುತ್ತಾನೆ ಅಂತ ನಂಬಿ ಹೋದ ಬಾಲಕಿ, ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗ ಹುಡುಕಿ ಹೊರಟ ಯುವತಿ, ತರಕಾರಿ ತರಲು ಮಾರುಕಟ್ಟೆಗೆ ಹೋದ ಗೃಹಿಣಿ, ಅನ್ಯಾಯವನ್ನು ಬಹಿರಂಗಪಡಿಸುತ್ತೇನೆಂದು ಹೋದ ಪತ್ರಕರ್ತ, ಖಾಕಿ ಧರಿಸಿ ಕಿರಣ್ ಬೇಡಿಯಾಗಲು ಹೊರಟ ಮಹಿಳೆ..! ಇವರ್ಯಾರು ಕಾಮಾಂಧರ ಅಟ್ಟಹಾಸದ ಮುಂದೆ ನಿಲ್ಲುತ್ತಿಲ್ಲ. ಗಂಡಸಿನ ಮುಂದೆ ಅವಳು ಕೇವಲ ಗೊಂಬೆ, ಅವನಾಡಿಸಿದಂತೆ ಆಡುತ್ತಾಳೆ, ಕೈ ಸೋತು ಕೂರುತ್ತಾಳೆ.
ರೇಪ್ ತಡೆಯಬೇಕೆಂದರೇ ಈ ವ್ಯವಸ್ಥೇ ಮೊದಲು ಬದಲಾಗಬೇಕು. ಕಾನೂನಿನಲ್ಲಿ ಮಾರ್ಪಾಡಾಗಬೇಕು. ಅರಬ್ ದೇಶದ ಕೆಲವು ಕಡೆ ಅತ್ಯಾಚಾರಕ್ಕೆ `ಅದನ್ನೇ..’ ಕಟ್ ಮಾಡಿ ಕೊಲ್ಲೋ ಕ್ರೂರ ಶಿಕ್ಷೆಯಿದೆ. ಅಂಥ ಶಿಕ್ಷೆ ಇಡೀ ಜಗತ್ತಿನಲ್ಲಿ ಜಾರಿಯಾಗಬೇಕು. ಆಗ ಯಾವುದೇ ಕಾಮುಕ ಐದು ನಿಮಿಷದ ಕಾಮಕ್ಕೆ ಜೀವ ಕಳೆದುಕೊಳ್ಳಲಾರ. ಜಗತ್ತಿನಲ್ಲಿ ಹೆಣ್ಣು ಒಬ್ಬಂಟಿಯಾಗಿ ಮಧ್ಯರಾತ್ರಿ ದೈರ್ಯದಿಂದ ತಿರುಗಾಡಬೇಕಾದ್ರೇ, ಅವಳು ನಿಜಕ್ಕೂ ಗಂಡಿಗೆ ಸರಿಸಮಾನಳಾಗಿ ಬದುಕಬೇಕೆಂದರೇ, ಆಯಾ ದೇಶದ ನಪುಂಸಕತ್ವ ಕೊನೆಯಾಗಬೇಕು. ಆಗ ಉಮೇಶ್ ರೆಡ್ಡಿಗಳ ಬೇರು ನಾಶವಾಗುತ್ತದೆ. ಸದಾ ಪ್ರಶ್ನೆಗಳನ್ನು ಹೊತ್ತು ತಿರುಗೋ ಹೆಣ್ಣಿನ ಮೊಗದಲ್ಲಿ ನಗು ಅರಳುತ್ತದೆ.
ಇವೆಲ್ಲಾ ನಿಜಕ್ಕೂ ಅಬಲೆಯಾದ ಹೆಣ್ಣಿಗೆ ನಾವು ಕೊಡೋ ಸಮಜಾಯಿಷಿ, ವಾಸ್ತವಕ್ಕೆ ಹಿಡಿದ ಕನ್ನಡಿ. ಆದರೆ ಅದೇ ಹೆಣ್ಣು ಸಿಡಿದೆದ್ದರೇ, ತಿರುಗಿಬಿದ್ರೇ ಅದ್ಯಾವ ಗಂಡೂ ಅವಳಿಗೆ ಸರಿಸಮನಾಗಿ ನಿಲ್ಲಲಾರ. ಇವನದ್ದೇನಿದ್ದರೂ ಆ ಕ್ಷಣದ ಆವೇಶ, ಅವಳದ್ದು ದೀರ್ಘಾವಧಿಯ ಅನಾಹುತ. ಅದಕ್ಕೆ ಹೇಳೋದು ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ.
ಅವಳ ಹೆಸ್ರು ಇರ್ಮಾ ಗ್ರೇಸ್, ಹುಟ್ಟಿದ್ದು ಅಕ್ಟೋಬರ್ 7, 1923ರಂದು. ಜರ್ಮನಿಯ ಸ್ವತಂತ್ರ ರಾಜ್ಯ ಮೈಕ್ಲೆನ್ ಬರ್ಗ್ ನಲ್ಲಿ ಜನಿಸಿದ ಇವಳು ಬದುಕಿದ್ದು ಕೇವಲ ಇಪ್ಪತ್ತೆರಡು ವರ್ಷಗಳು ಮಾತ್ರ. ಅಂದರೇ ಡಿಸೆಂಬರ್ 13, 1945ರಷ್ಟರಲ್ಲಾಗಲೇ ಇರ್ಮಾ ಸತ್ತು ಹೋಗಿದ್ದಳು. ನಾಜಿ ಕಾನ್ಸಂಟ್ರೇಶನ್ನಲ್ಲಿ ಕೆಲಸ ಮಾಡಿಕೊಂಡಿದ್ದ ಈಕೆ, ಅಲ್ಲಿ ಮಹಿಳೆಯರ ವಾರ್ಡ್ ಇನ್ಚಾರ್ಜ್ ಆಗಿದ್ದಳು. ನೋಡೋಕೆ ಸಿನಿಮಾ ನಟಿ ಥರಾ ಇರೋ ಇವಳಿಗಿದ್ದ ವಿಕೃತ ಏನ್ ಗೊತ್ತಾ..? ಇವಳಿಗೆ ಗಂಡಸರನ್ನು ಕಂಡರೇ ಆಗ್ತಾ ಇರ್ಲಿಲ್ಲ, ಅವರಿಗೆ ಟಾರ್ಚರ್ ಕೊಡೋದಂದ್ರೇ ಭಯಂಕರ ಇಷ್ಟ, ಅದರಲ್ಲೂ ವಿಚಿತ್ರವಾಗಿ ಹಿಂಸಿಸುವುದನ್ನು ಅವಳು ಎಂಜಾಯ್ ಮಾಡುತ್ತಿದ್ದಳು. ಮರ್ಮಾಂಗವನ್ನ ಬೂಟ್ನಿಂದ ಒದ್ದು ಒದ್ದೇ ಎಷ್ಟೋ ಜನರನ್ನು ಕೊಂದಿದ್ದಳು.
ಆದರೆ ಅವಳ ವಿಕೃತ ಸ್ವಭಾವಕ್ಕೆ ಇಪ್ಪತ್ತನೇ ಶತಮಾನದ ಇಂಗ್ಲೀಷ್ ಕಾನೂನು ಮರಣದಂಡನೆ ಶಿಕ್ಷೆ ವಿಧಿಸಿತ್ತು. ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ಅದೆಷ್ಟೋ ಜನರನ್ನು ವಿಕೃತವಾಗಿ ಹಿಂಸಿಸಿ ಕೊಂದಿದ್ದ ಇರ್ಮಾ ಗ್ರೇಸ್ ನಾಜಿ ಮುಖ್ಯಸ್ತ ಹಿಟ್ಲರ್ನ ಕೊನೆಯ ತಂಗಿಯಂತೆ ಗೋಚರವಾಗಿದ್ದು ಸುಳ್ಳಲ್ಲ. ಅವಳು ಸಾಯುವಾಗ ಆಕೆಗಿನ್ನೂ ಇಪ್ಪತ್ತೆರಡು ವರ್ಷ, ಅರವತ್ತೇಳು ದಿನವಾಗಿತ್ತು. ಜರ್ಮನ್ನರು ಇವತ್ತಿಗೂ ಇರ್ಮಾ ಗ್ರೇಸ್ ಹೆಸ್ರು ಕೇಳಿದ್ರೇ `ದೀ ಬಿಸ್ಟ್ ಆಫ್ ಬೆಲ್ಸೆನ್’ ಎಂದೇ ಕರೆಯುತ್ತಾರೆ.
ಮೈರಾ ಹೈಂಡ್ಲಿ. ನೋಡೋದಿಕ್ಕೆ ಬ್ರಿಟೆನ್ ರಾಜಕುಮಾರಿ ಡಯಾನಾಳ ತದ್ರೂಪಿನಂತಿದ್ದಾಳೆ. . ಬ್ರಿಟನ್ ಅವಳನ್ನು ಇಂಗ್ಲೀಷ್ ಸೀರಿಯಲ್ ಕಿಲ್ಲರ್ ಎಂದೇ ಕರೆಯುತ್ತದೆ. ಇವಳು 1942ರ ಕಾಲಘಟ್ಟದವಳು. ಇವಳೂ ಡಯಾನಳಂತೆ ಇಂಗ್ಲಿಷ್ ಬೆಡಗಿ. ಸುಂದರಿ ಒಳಗೊಬ್ಬ ಹಂತಕನಿರುತ್ತಾನೆ ಅನ್ನೋ ವಾದಕ್ಕೆ ಪುಷ್ಟಿ ನೀಡುವಂತೆ ಇವಳು ಪೈಶಾಚಿಕತೆ ಮೆರೆದಿದ್ದಾಳೆ. ತನ್ನ ಬಾಯ್ಫ್ರೆಂಡ್ ಇಯಾನ್ ಬ್ರಾಡಿ ಜೊತೆ ಸೇರಿಕೊಂಡು ಐದು ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಳು. ಅವತ್ತಿನ ಇಬ್ಬರು ಮಂತ್ರಿಗಳ ಜೊತೆ ಸೇರಿ ಹನ್ನರೆಡು ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳನ್ನು ಅಪಹರಣ ಮಾಡಿ, ಕಾಮಕ್ಕೆ ಬಳಸಿಕೊಂಡು ಹಿಂಸೆ ನೀಡಿ ಸಾಯಿಸುವಷ್ಟರ ಮಟ್ಟಿಗೆ ವಿಕೃತಿ ಮೆರೆದಿದ್ದಳು. ಆದರೆ ತನ್ನ ಅಕ್ಕನ ವಿಕೃತ ಸ್ವಭಾವವನ್ನು ಆಕೆಯ ತಮ್ಮನೇ ಸಹಿಸಲಿಲ್ಲ. ಆತನೇ ಪೊಲೀಸರಿಗೆ ಅಕ್ಕನನ್ನು ಹಾಕಿಕೊಟ್ಟ. ಪೊಲೀಸರಿಂದ ಅರೆಸ್ಟ್ ಆದ ಮೈರಾ ಹೈಂಡ್ಲಿಗೆ ಸ್ವಲ್ಪವೂ ಪಶ್ಚಾತಾಪವಿರಲಿಲ್ಲ.ಇಂಗ್ಲೆಂಡ್ ಕಾನೂನು ಅವಳಿಗೆ ಅಜೀವ ಪರ್ಯಂತ ಜೈಲು ಶಿಕ್ಷೆ ವಿಧಿಸಿತ್ತು. ಅನಾಮತ್ತು ನಲವತ್ತರಿಂದ ಐವತ್ತು ವರ್ಷಗಳ ಕಾಲ ಜೈಲಿನಲ್ಲಿ ಕೊಳೆತ ಮೈರಾ, 2002ರಲ್ಲಿ ಜೈಲಿನಲ್ಲೇ ಸತ್ತು ಹೋದಳು.
ಬೆವಲರ್ಿ ಎಲಿಯಟ್ಳನ್ನು ಇಂಗ್ಲಿಷ್ ಜಗತ್ತು ಅರ್ಥಾತ್ ಇಂಗ್ಲೆಂಡ್ ದೇಶ `ದಿ ಆಂಗೆಲ್ ಆಫ್ ಡೆತ್’ ಎಂದೇ ಕರೆದಿತ್ತು. ಇವಳನ್ನು ಪ್ರಪಂಚದ ಹತ್ತು ರಕ್ಕಸ ಮಹಿಳೆಯರಲ್ಲಿ ಒಬ್ಬಳೆಂದೇ ಕರೆಯಲಾಗುತ್ತದೆ. ಇವಳು ನಾಲ್ಕು ಮಕ್ಕಳನ್ನು ಕೊಂದಿದ್ದಾಳೆ. ಮೂರು ಮಕ್ಕಳನ್ನು ಕೊಲ್ಲೋಕೆ ಪ್ರಯತ್ನಿಸಿದ್ದಾಳೆ. ಅನಾಮತ್ತು ಅರು ಮಕ್ಕಳಿಗೆ ಕೊಡಬಾರದ ಹಿಂಸೆಗಳನ್ನು ಕೊಟ್ಟು ಕಾಡಿದ್ದಾಳೆ. ಇಷ್ಟೆಲ್ಲಾ ಅವಳ ವಿಕೃತಿಗೆ ಕಾರಣವಾಗಿದ್ದು ಮತ್ತು ಅನುಕೂಲವಾಗಿದ್ದು ಆಕೆ ಮಾಡುತ್ತಿದ್ದ ವೃತ್ತಿ. ಎಲಿಯಟ್ ಇಂಗ್ಲೆಂಡ್ನ ಸ್ಟೇಟ್ ಎನ್ರೋಲ್ಡ್ನಲ್ಲಿ ನರ್ಸ್ ಆಗಿದ್ಳು. ಅಲ್ಲಿದ್ದೇ ಹೆವಿ ಡೋಸ್ ಕೊಟ್ಟು ಮಕ್ಕಳನ್ನು ಕೊಲ್ಲುತ್ತಿದ್ದಳು. ನರಳುತ್ತಿರೋ ಮಕ್ಕಳನ್ನು ನೋಡಿ ವಿಕೃತ ಸುಖ ಅನುಭವಿಸುತ್ತಿದ್ದಳು. ಅವಳೊಳಗಿನ ಹಂತಕಿ ಅದೆಂಥಾ ಹಠಕ್ಕೆ ಬಿದ್ದು ಕ್ರೈಂ ಮಾಡುತ್ತಿದ್ದಳೆಂದರೇ, ಅವಳು ಇವಿಷ್ಟು ಪಾಪಕೃತ್ಯಗಳನ್ನು ಕೇವಲ ಐವತ್ತೊಂಬತ್ತು ದಿನಗಳ ಅಂತರದಲ್ಲೇ ಮಾಡಿ ಮುಗಿಸಿದ್ದಳು. 1991ರ ಫೆಬ್ರವರಿ ತಿಂಗಳಲ್ಲಿ ಶುರುವಾದ ಆಕೆಯ ಪಾತಕ, ಎಪ್ರಿಲ್ ಕಡೆಯ ವಾರಕ್ಕೆ ಪರಾಕಾಷ್ಟೆ ತಲುಪಿತ್ತು. ಆದರೆ ಎಲ್ಲಾ ಪಾಪಕ್ಕೂ ಒಂದು ಅಂತ್ಯವಿದೆ. ಅವಳ ವಿಕೃತಗಳು ಕಡೆಗೂ ಬಯಲಾಗಿತ್ತು. ಪೊಲೀಸರ ಮುಂದೇ ತನ್ನೆಲ್ಲಾ ಕೃತ್ಯಗಳನ್ನು ಎಲಿಯಟ್ ಬಾಯಿಬಿಟ್ಟಳು. ಕೋರ್ಟ್ ಅವಳನ್ನು ಜೈಲಿಗಟ್ಟಿತ್ತು. ಆದರೆ ಜೈಲಿನಲ್ಲಿ ಭಯಾನಕವಾಗಿ ಅನಾರೋಗ್ಯ ಪೀಡಿತಳಾದ ಅವಳನ್ನು ನಾಟ್ಟಿಂಗ್ಹ್ಯಾಮ್ನ ಆಸ್ಪತ್ರೆಯಲ್ಲಿ, ವಿತ್ ಸೆಕ್ಯೂರಿಟಿ ಟ್ರೀಟ್ಮೆಂಟ್ ಕೊಡಲಾಗುತ್ತಿದೆ.
ಅವಳು ಇಂಗ್ಲೆಂಡಿನ ಮಹಾರಾಣಿ ಮೇರಿ..! ಇವಳು ಹುಟ್ಟಿದ್ದು ಫೆಬ್ರವರಿ 18, 1516ರಲ್ಲಿ. ತನ್ನ ಮೂವತ್ತೆರಡನೇ ವಯಸ್ಸಿನಲ್ಲಿ ಅಂದರೇ 1558ರಲ್ಲಿ ಸತ್ತ ಮೇರಿಯನ್ನು ಇಂಗ್ಲೆಂಡಿನ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ನರು `ಬ್ಲಡಿ ಮೇರಿ’ ಅಂತಾನೆ ಕರೆಯುತ್ತಾರೆ. ಪರಮ ಕ್ಯಾಥೋಲಿಕ್ ಆಗಿದ್ದ ಅವಳು ಪ್ರೊಟೆಸ್ಟೆಂಟರ ಮೇಲೆ ಹಗೆ ಸಾಧಿಸುತ್ತಿದ್ದಳು. ಅಂದಾಜು 800ಕ್ಕೂ ಹೆಚ್ಚು ಪ್ರೊಟೆಸ್ಟೆಂಟರನ್ನು ಬಹಿಷ್ಕಾರ ಹಾಕಿ ಕೊಲ್ಲಿಸಿದ್ದಳು. ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರಾಂತ್ಯಕ್ಕೆ ಮಹಾರಾಣಿಯಾಗಿದ್ದ ಮೇರಿಯದ್ದು ಬಾಲ್ಯ ವಿವಾಹ. ಹೆನ್ರಿಯ ಮೊದಲ ರಾಣಿಯ ಅಕಾಲಿಕ ಮರಣ ನಂತರ ಅವನ ಅಂತಃಪುರದ ರಾಣಿಯಾದಳು. ರಾಣಿಯಾಗಿದ್ದೇ ವಿಕೃತಿ ಮೆರೆದು ಬಿಟ್ಟಿದ್ದಳು. `ಬ್ಲಡಿ ಮೇರಿ’ ಎಂದೇ ಕರೆಸಿಕೊಂಡಿದ್ದ ಈ ಕ್ರೂರ ಮಹಾರಾಣಿ ಸತ್ತ ನಂತರ ಪ್ರೊಟೆಸ್ಟೆಂಟರು ತಮ್ಮ ದೇಶಕ್ಕೆ ವಾಪಾಸಾಗಿದ್ದರು.
ಈ ಸೀರಿಯಲ್ ಕಿಲ್ಲರ್ಗಳಿಗೂ ಇಂಗ್ಲೆಂಡಿಗೂ ಅದೇನೋ ಋಣಾನುಬಂಧ ಇದೇ ಅಂತ ಅನ್ನಿಸೋದು ಸುಳ್ಳಲ್ಲ. ಮೇರಿ ಆನ್ ಕಾಟನ್ ಎಂಬಾಕೆ ಕೂಡ ಇಂಗ್ಲೆಂಡಿನವಳು. ಜೊತೆಗೆ ಇಂಗ್ಲೆಂಡಿನ ಪ್ರಪ್ರಥಮ ಸೀರಿಯಲ್ ಕಿಲ್ಲರ್ ಇವಳೇ. ಇವಳೆಂಥಾ ಮಾಸ್ಟರ್ಮೈಂಡ್ ಸೀರಿಯಲ್ ಕಿಲ್ಲರ್ ಅಂದ್ರೇ, ಆದ ಸಾವುಗಳೆಗೆಲ್ಲಾ ಖಾಯಿಲೆಯ ರೂಪ ಕೊಡುತ್ತಿದ್ದಳು. ಅವಳ ಮುಖವಾಡ ಬಯಲಿಗೆ ಬರುಷ್ಟರಲ್ಲಿ ಅವಳ ಅಕೌಂಟಿನಲ್ಲಿ ಬರೋಬ್ಬರಿ ಹದಿನೆಂಟು ಹತ್ಯೆಗಳ ಲೆಕ್ಕವಿತ್ತು. ಮೇರಿ ಆನ್ ಕಾಟನ್ ಮಾಡಿದ ಹತ್ಯೆಗಳನ್ನು ಒಂದರ್ಥದಲ್ಲಿ ಮರ್ಯಾದೆ ಹತ್ಯೆ ಅಂತ ಕರೆದರೂ ತಪ್ಪಿಲ್ಲ. ಯಾಕಂದ್ರೇ ಅವಳು ಕೊಂದಿದ್ದು, ತನ್ನ ಸ್ನೇಹಿತರನ್ನ, ಸಂಗಾತಿಗಳನ್ನ, ಗಂಡಂದಿರನ್ನ ಹಾಗೂ ತಾನೇ ಹೆತ್ತ ಮಕ್ಕಳನ್ನ..!
1832ರಲ್ಲಿ ದುರ್ಹಮ್ನ ಲಾ ಮೂರ್ಸ್ಲೀಯಲ್ಲಿ ಜನಿಸಿದ ಮೇರಿ ಕಾಟನ್ ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ವಿಲಿಯಂ ಮೋಬ್ರೇವ್ ಎಂಬಾತನನ್ನು ಮದ್ವೆಯಾದಳು. ಇಬ್ಬರ ದಾಂಪತ್ಯಕ್ಕೆ ಐದು ಮಕ್ಕಳು ಹುಟ್ಟಿದವು. ಎಲ್ಲಾ ಮಕ್ಕಳು ಗ್ಯಾಸ್ಟ್ರಿಕ್ನಿಂದ ಸತ್ತವು. ಮತ್ತೆ ಮೂರು ಮಕ್ಕಳಾದ್ವು, ಅವು ಕೂಡ ಸೇಮ್ ರೀಸನ್ನಿಂದ ಅಸುನೀಗಿದವು. ಈ ಮದ್ಯೆ ಪತಿ ವಿಲಿಯಂ ಸತ್ತು ಹೋದ. ಆಮೇಲೆ ಎರಡನೇ ಪತಿ ಜಾರ್ಜ್ ವಾರ್ಡ್ ಕೂಡ ಸತ್ತುಹೋದ. ಅವನಿಗೆ ಹುಟ್ಟಿದ ಇಬ್ಬರು ಮಕ್ಕಳು ತೀರಿಕೊಂಡ್ವು. ಆನಂತರ ಮತ್ತೊಂದು ಮದ್ವೆಯಾದಳು. ಅವನೂ ಸತ್ತ. ಅವನಿಗೆ ಹುಟ್ಟಿದ ಮಕ್ಕಳು ಸತ್ತು ಹೋದವು.
ಯಾವಾಗ ಮೇರಿ ಕಾಟನ್ ಹೊರತುಪಡಿಸಿ ಮಿಕ್ಕವರೆಲ್ಲಾ ಒಂದಲ್ಲ ಒಂದು ಕಾರಣದಿಂದ ಸಾಯತೊಡಗಿದರೋ, ಸ್ಥಳೀಯ ಪತ್ರಿಕೆಯೊಂದು `ಸಮ್ಥಿಂಗ್ ಈಸ್ ಗೋಯಿಂಗ್ ಆನ್’ ಅಂತ ವರದಿ ಪ್ರಕಟಿಸಿತ್ತು. ಅದರ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರ ಮುಂದೆ, ಮೇರಿ ಕಾಟನ್ ತನ್ನ ವಿಕೃತವನ್ನು ಬಿಚ್ಚಿಟ್ಟಿದ್ದಳು. ಅವಳು ಮದ್ವೆಗೂ ಮುಂಚೆ ಒಬ್ಬ ಸ್ನೇಹಿತ, ಒಬ್ಬ ಬಾಯ್ಫ್ರೆಂಡ್ ಅನ್ನು ಕೊಂದಿದ್ದಳು. ಮದ್ವೆ ಆದಮೇಲೆ ಆ ಕೊಲೆಯ ಪರ್ವ ಮುಂದುವರಿಸಿದ್ದಳು. ಅವಳಿಗೆ ಒಂಥರಾ ಕೊಲೆ ಮಾಡೋದೆ ಅಭ್ಯಾಸವಾಗಿ ಹೋಗಿತ್ತು. ಅವಳ ಮುಖವಾಡ ಬಯಲಾಗುವಾಗ ಅವಳ ಅಕೌಂಟಿನಲ್ಲಿ ಅನಾಮತ್ತು ಹದಿನೆಂಟು ಕೊಲೆಗಳ ಲೆಕ್ಕವಿತ್ತು. 1873ರಲ್ಲಿ ಅವಳಿಗೆ ಅರೆಸೆನಿಕ್ ಪಾಯಿಸನ್ ಅಂದ್ರೇ, ವಿಷಗಾಳಿ ಕೊಟ್ಟು ಕೊಲ್ಲಲಾಯಿತು.
ಬೆಲ್ಲಿ ಗನ್ನೆಸ್, ಅವಳು ನಿಂತರೇ ಅನಾಮತ್ತು ಆರು ಆಡಿಯ ಸೈಂದವಳಂತೆ ಕಾಣುತ್ತಾಳೆ, ತೂಕಕ್ಕೆ ಹಾಕಿದರೇ ಬರೋಬ್ಬರಿ ತೊಂಬತ್ತೊಂದು ಕೆಜಿ ಕಟ್ಟುಮಸ್ತು ಹೆಂಗಸು. ಮೂಲತಃ ಅಮೇರಿಕಾದವಳು. ಅವಳನ್ನು ಅಮೇರಿಕಾ ಕರೆದಿದ್ದು ಈ ಹೆಸರಿನಿಂದ; ಸೀರಿಯಲ್ ಕಿಲ್ಲರ್. ಅವಳೆಷ್ಟು ಮದುವೆಯಾದಳೋ ಲೆಕ್ಕವಿಲ್ಲ, ಒಂದೈದು ಇರಬಹುದಾ..? ಒಂದ್ಹತ್ತು..? ಹೆಚ್ಚೆಂದರೇ ಒಂದಿಪ್ಪತ್ತು..? ಊಹುಂ ಲೆಕ್ಕವಿಟ್ಟವರಿಲ್ಲ. ಸಾಲು-ಸಾಲು ಮದ್ವೆಯಾದಳು. ಅಷ್ಟು ಗಂಡಂದಿರನ್ನು ಸಾಲಾಗಿಯೇ ಸ್ಮಶಾನ ಸೇರಿಸಿದಳು. ಅವಳ ಲೆಕ್ಕವಿಲ್ಲದ ಗಂಡಂದಿರ ಸಮಾಚಾರ ಬಿಡಿ, ಇವಳಿಗೆ ಬಾಯ್ಫ್ರೆಂಡ್ಗಳೂ ಇದ್ದರು. ಅದರಲ್ಲೊಬ್ಬ ಬಾಯ್ಫ್ರೆಂಡ್ ಅನ್ನು ಕೊಂದಳು. ಅವನಿಗೆ ಹುಟ್ಟಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಸಾಯಿಸಿದಳು. ಇವಳೊಳಗೆ ಇಷ್ಟು ಕ್ರೂರ ಹಂತಕಿ ಇದ್ದಾಳಾ..? ಎನ್ನುವಷ್ಟರ ಮಟ್ಟಿಗೆ ವಿಕೃತಿ ಮೆರೆದಿದ್ದಳು.
ಹೆಣ್ಣು ಕ್ರೂರಿಯಾಗಿಬಿಟ್ಟರೇ, ಅವಳ ಕ್ರೂರತೆ ಅದೆಷ್ಟು ಪರಮಾವಧಿ ತಲುಪಬಹುದು ಅನ್ನೋದಕ್ಕೆ ಆಸ್ಟ್ರೇಲಿಯಾದ ಚೆಲುವೆ `ಕ್ಯಾಥರೀನ್ ನೈಟ್’ ತಾಜಾ ನಿದರ್ಶನ. ಪೆರೋಲ್ ಇಲ್ಲದೇ ಜೀವಾವಧಿ ಶಿಕ್ಷೆಗೀಡಾದ ಏಕೈಕ ಆಸ್ಟ್ರೇಲಿಯನ್ ಮಹಿಳೆ ಈಕೆ. ಆ ಮಟ್ಟಿಗೆ ಇವಳ ಸೈಕೋ ಮನಃಸ್ಥಿತಿ ಆಸ್ಟ್ರೇಲಿಯವನ್ನು ಬೆಚ್ಚಿ ಬೀಳಿಸಿತ್ತು. ಅವಳು ತನ್ನ ಗಂಡನನ್ನು ಅದ್ಯಾವ ಪರಿ ಕೊಂದಳೆಂದರೇ, ಆ ಕೃತ್ಯವನ್ನು ನೆನೆಸಿಕೊಂಡರೇ ಮೈ ಬೆವರುತ್ತದೆ. ತನ್ನ ಗಂಡನನ್ನು ಅನಾಮತ್ತು ಮೂವತ್ತ ಮೂರು ಬಾರಿ ಇರಿದು ಸಾಯಿಸಿದ್ದಳು. ಸಾಯಿಸಿದ ನಂತರ ದೇಹದ ಚರ್ಮ ಸುಲಿದು, ಅದನ್ನು ಮೊಳೆಗೆ ನೇತಾಕಿದ್ದಳು. ಅದು ಅವಳ ವಿಕೃತವೋ, ಅವಳ ಹತಾಶೆಯೋ ಗೊತ್ತಿಲ್ಲ. ದೇಹವನ್ನು ಮೂವತ್ತೇಳು ಬಾರಿ ತಿವಿದು, ಚರ್ಮ ಸುಲಿದ ನಂತರವೂ ಅವಳ ಆಕ್ರೋಶ ತಣಿದಿಲ್ಲ. ಗಂಡನ ತಲೆಯನ್ನು ಸೂಪ್ ಮಾಡಿದಳು, ದೇಹದ ಮಾಂಸವನ್ನು ರೋಸ್ಟ್ ಮಾಡಿದಳು. ಅದನ್ನು ತನ್ನ ಮಕ್ಕಳಿಗೆ ತಿನ್ನಿಸಿದಳು. ಒಬ್ಬ ಹೆಣ್ಣು ಪರಮಕ್ರೂರತೆಯನ್ನು ಮೀರಿ, ಮನುಷ್ಯತ್ವ ಮರೆತು ನಿಂತರೇ ಏನೆಲ್ಲ ಆಗುತ್ತೆ ಅನೋದನ್ನ ಕ್ಯಾಥರೀನ್ ನೈಟ್ ತೋರಿಸಿಕೊಟ್ಟಿದ್ದಳು.
ಹಾಗೆಯೇ ಎಲಜಬೆತ್ ಬಾಥೋರಿ, ಇವಳು ಹುಟ್ಟಿದ್ದು 1560, ಸತ್ತಿದ್ದು 1614ರಲ್ಲಿ. ಹಂಗೇರಿ ಮೂಲದ ಇವಳನ್ನು ಇತಿಹಾಸ ಪ್ರೊಲಿಫಿಕ್ ಕಿಲ್ಲರ್ ಎಂದೇ ಕರೆಯುತ್ತದೆ. ಇವಳು ಮಾಡಿದ ಕೊಲೆಗಳನ್ನು ಸರಿಯಾಗಿ ಲೆಕ್ಕ ಹಾಕಿದ್ರೇ ಸಂಖ್ಯೆ ಹತ್ತಿರತ್ತಿರ ಇನ್ನೂರನ್ನು ದಾಟಬಹುದು. ಹೆಚ್ಚಾಗಿ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದಳು. ಕೊಂದ ನಂತರ ಮೃತ ದೇಹವನ್ನು ಹೊಡೆಯುತ್ತಿದ್ದಳು, ಅರೆಬರೆ ಸುಡುತ್ತಿದ್ದಳು, ದೇಹದ ಭಾಗಗಳನ್ನು ಕತ್ತರಿಸುತ್ತಿದ್ದಳು, ಮುಖವನ್ನು ಕಚ್ಚುತ್ತಿದ್ದಳು. ಎಲಿಜಬೆತ್ ಬಾಥೋರಿಯ ವಿಕೃತಕ್ಕೂ ಅಂತ್ಯವಿತ್ತು. ಅವಳ ಮನೆಯಲ್ಲೇ ಅರೆಸ್ಟ್ ಆದಳು. ಹೆಣ್ಣು ಮುನಿದರೇ ಕೇವಲ ಮಾರಿಯಾಗುವುದಿಲ್ಲ, ಹೆಮ್ಮಾರಿಯಾಗುತ್ತಾಳೆ. ಅವಳು ಸೈಕೋ ಆಗಿಬಿಟ್ಟರೇ.. ಪಾಪದ ಪರಾಕಾಷ್ಟೇಯನ್ನು ಮೀರಿ ವಿಕೃತ ಮೆರೆಯುತ್ತಾಳೆ. ಅಂಥ ಅಸಂಖ್ಯಾ ಮಹಿಳೆಯರಿದ್ದಾರೆ. ಇವರು ಕೇವಲ ಸ್ಯಾಂಪಲ್ ಅಷ್ಟೆ.

  •  ರಾ ಚಿಂತನ್

POPULAR  STORIES :

ಬುದ್ಧಿವಂತ ಹುಡ್ಗೀರಂದ್ರೆ ಹುಡುಗರಿಗೆ ಪಂಚಪ್ರಾಣ..!? ಚಂದದ ಹುಡ್ಗೀರ್ ಅಷ್ಟಕಷ್ಟೇ..!?

ಮುಸ್ಲಿಮರ `ಅಜಾನ್’ ವೇಳೆ ಅರ್ಧಕ್ಕೆ ಭಾ‍ಷಣ ನಿಲ್ಲಿಸಿದ ಮೋದಿ…! #Video

ಟೀಂ ಇಂಡಿಯಾ ಹಾಗೂ ಬಾಂಗ್ಲಾ ಅಭಿಮಾನಿಗಳ ವಿಡಿಯೋ ಫೈಟ್..!

ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?

ಜೈಲಿನಿಂದ ಕೈದಿಗಳು ಪರಾರಿ..! ಜೈಲಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ..? ಡ್ರಗ್ಸು.. ಸೆಕ್ಸು.. ಫಿಕ್ಸು…

ಧೋನಿ ಪತ್ರಕರ್ತನ ಮೇಲೆ ಸಿಟ್ಠಾಗಿದ್ದೇಕೆ..? ನಾವು ಸ್ಕ್ರಿಪ್ಟ್ ಇಟ್ಟುಕೊಂಡು ಪಂದ್ಯವಾಡುವುದಿಲ್ಲ..!

ಖಂಡೀಲ್ ಬೆತ್ತಲಾಗದಿದ್ರೇ ಏನಂತೆ..? ಆರ್ಷಿ ಖಾನ್ ಬೆತ್ತಲಾದಳಲ್ಲ..!!

ಅಮ್ಮನಿಗೆ ಸೇಟು ದುಡ್ಡು ಕೊಟ್ಟಿದ್ದು ಯಾಕೆ..? ಫ್ರಾಕ್ ಹುಡ್ಗೀಯ ಚಾಕೊಲೇಟ್ ಸ್ಟೋರಿ..!

ಶಿವಣ್ಣನ ಜೊತೆಗೆ ಬಿಬಿಸಿ ರೇಡಿಯೋ ನಡೆಸಿದ ಸಂದರ್ಶನ ಇಲ್ಲಿದೆ.. ಕೇಳಿ..!

ನಿಯ್ಯತ್ತಿನ ಪ್ರಾಣಿ ನಾಯಿ ಮರಿಗಳನ್ನು ಕೊಂದಳು..! ನಿಯ್ಯತ್ತಿಲ್ಲದ ಹೆಂಗಸು..!?

ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?

LEAVE A REPLY

Please enter your comment!
Please enter your name here