ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲಿ ಮಾತ್ರವಲ್ಲ. ರಿಯಲ್ ಲೈಫಲ್ಲೂ ಹೀರೋ ಅಂತ ಮತ್ತೊಮ್ಮೆ ಸಾಭೀತಾಗಿದೆ.
ಇತ್ತೀಚೆಗೆ ಹೈದರಾಬಾದ್ ಹೋಟೆಲೊಂದರಲ್ಲಿ ಕನ್ನಡ ಚಾನಲ್ ಬರ್ತಿಲ್ಲ ಅಂತ ದನಿ ಎತ್ತಿದ್ದ ದರ್ಶನ್ ಈಗ ಕನ್ನಡ ಶಾಲಾ ಮಕ್ಕಳ ಪಾಲಿಗೆ ನಿಜವಾದ ಹೀರೋ ಆಗಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬಬಲಾದ್ ಗ್ರಾಮದಲ್ಲಿ ಕನ್ನಡ ಶಾಲೆಯೊಂದಿದೆ. ಇದು ಗಡಿಭಾಗ ಆಗಿರೋದ್ರಿಂದ ಎರಡೂ ರಾಜ್ಯ ಸರ್ಕಾರಗಳು ಇದರ ಅಭಿವೃದ್ಧಿಗೆ ಗಮನಕೊಟ್ಟಿಲ್ಲ. ಈ ಶಾಲೆ ದರ್ಶನ್ ಅವರ ಗಮನಕ್ಕೆ ಬಂದಿದ್ದು, ಈ ಶಾಲೆಯಲ್ಲಿ ಕಲಿಯುತ್ತಿರುವ 127ಮಕ್ಕಳ ಡಿಜಿಟಲ್ ಶಿಕ್ಷಣಕ್ಕಂತ 30ಟ್ಯಾಬ್ ಗಳನ್ನು ಕೊಡಿಸಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಚೇತನ್ ಸರ್ಕಾರಿ ಕನ್ನಡ ಶಾಲೆಗಳನ್ನು ದತ್ತು ತೆಗೆದುಕೊಂಡಿರೋದನ್ನ ಸಹ ಇಲ್ಲಿ ಸ್ಮರಿಸಬಹುದು.
ಕನ್ನಡ ನಟರು ತಾವು ಸಿನಿಮಾದಲ್ಲಿ ಮಾತ್ರ ಹೀರೋಗಳಾಗದ ನಿಜ ಜೀವನದಲ್ಲಿಯೂ ನಾಡು ನುಡಿ ಸಮಾಜದ ಸೇವೆಯಲ್ಲಿ ತೊಡಗಿರೋದು ಸಂತಸದ ವಿಷಯ.