ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದ್ರೆ ಅದು ಖಂಡಿತ ಸೂಪರ್ ಹಿಟ್ ಆಗುತ್ತೆ. ಹಾಕಿದ ದುಡ್ಡಿಗೆ ಮೋಸ ಇಲ್ವೇ ಇಲ್ಲ ಅನ್ನೋದು ಪ್ರತಿಯೊಬ್ಬ ನಿರ್ಮಾಪಕರಿಗೂ ಗೊತ್ತು. ದರ್ಶನ್ ಗಾಗಿ ಸಿನಿಮಾ ಮಾಡ್ಬೇಕು ಎಂಬ ಆಸೆ ಬಹುತೇಕ ಎಲ್ಲಾ ನಿರ್ದೇಶಕರಲ್ಲೂ ಇರುತ್ತೆ.
ದರ್ಶಶನ್ ಗಾಗಿ ಸಿನಿಮಾ ಮಾಡೋಕೆ ಇಷ್ಟು ಜನ ಕಾಯ್ತಾ ಇಲ್ಲ ಹೇಳಿ? ಹೀಗಿರುವಾಗ ದರ್ಶನ್ ಆದ್ಯತೆ ಎಂಥಾ ಸಿನಿಮಾಗಳಿಗೆ, ಎಂಥಾ ಕಥೆಗಳಿದ್ರೆ ದರ್ಶನ್ ಗೆ ಇಷ್ಟವಾಗುತ್ತೆ ಅನ್ನೋ ಕುತೂಹಲ ಅಭಿಮಾನಿಗಳದ್ದು. ಈಗ ದರ್ಶನ್ ತಮ್ಮ ಮೊದಲ ಆದ್ಯತೆ ಎಂಥಾ ಸಿನಿಮಾಗಳಿಗೆ ಅನ್ನೋದನ್ನು ಹೇಳಿದ್ದಾರೆ.
ದರ್ಶನ್ ಅವರ ಅಭಿನಯದ 50 ನೇ ಸಿನಿಮಾ ‘ಕುರುಕ್ಷೇತ್ರ’ ರಿಲೀಸ್ ಗೆ ಅಭಿಮಾನಿಗಳು ಕಾದಿದ್ದು, ಮುಂದೆಯೂ ದರ್ಶನ್ ಅವರು ಐತಿಹಾಸಿಕ ,ಪೌರಾಣಿಕ ಸಿನಿಮಾಗಳನ್ನು ಮಾಡೋ ನಿರ್ದೇಶಕರಿಗೆ ಮೊದಲ ಆದ್ಯತೆ ನೀಡ್ತಾರಂತೆ.