ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50ನೇ ಸಿನಿಮಾ ‘ಕುರುಕ್ಷೇತ್ರ’ ದಲ್ಲಿ ಬ್ಯುಸಿಯಾಗಿದ್ದಾರೆ.
ದರ್ಶನ್ ಲೈಟ್ ಬಾಯ್ ಆಗಿ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿ ನಂತರ ನೀನಾಸಂ ನಲ್ಲಿ ಅಭಿನಯ ಕಲಿಯಲು ಹೋದವರು. ಆದರೆ, ದರ್ಶನ್ ಅವರಿಗೆ ಕಲೆ ರಕ್ತಗತವಾಗಿಯೇ ಒಲಿದುಬಂದಿದೆ.
ದರ್ಶನ್ಬ9 ವರ್ಷದ ಬಾಲಕನಾಗಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು..! ಮಂಡ್ಯ ರಮೇಶ್ ನಿರ್ದೇಶಿಸಿದ ‘ ರಾಬಿನ್ ಗುಡ್ಫೆಲೊ’ ನಾಟಕದಲ್ಲಿ ದರ್ಶನ್ ರಾಜನಾಗಿ ಆಭಿನಯಿಸಿದ್ರು…! ಇದು 30 ವರ್ಷದ ಹಿಂದಿನ ಕತೆ
ಈ ನಾಟಕ ಪ್ರದರ್ಶನದ ವೇಳೆ ತೆಗೆದ ಫೋಟೋವೊಂದು ಇದೀಗ ರಮೇಶ್ ಅವರಿಗೆ ಸಿಕ್ಕಿದ್ದು, ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೂವತ್ತೊಂದು ವರ್ಷದ ಹಿಂದೆ ಈ ನಾಟಕ ಮಾಡಿಸುವಾಗ ಅವನು ಈ ಎತ್ತರಕ್ಕೆ ಏರಬಹುದು ಅಂತಾ ನಮಗಾರಿಗೂ ಅನಿಸಿರ್ಲಿಲ್ಲ! ಸೃಷ್ಟಿ ಕೊಡುರಂಗದ ‘ರಾಬಿನ್ ಗುಡ್ಫೆಲೊ’ ನಾಟಕದ ರಾಜ! ಗುರುತಿಸಿ? ಎಂಬ ಸಾಲುಗಳನ್ನು ಮಂಡ್ಯ ರಮೇಶ್ ಫೋಟೋ ಜೊತೆ ಪೋಸ್ಟ್ ಮಾಡಿದ್ದಾರೆ.