ಡಿ ಬಾಸ್ ಅಭಿಮಾನಿಗಳಿಗೆ ಡಿಸಂಬರ್ 25ಕ್ಕೆ ಕಾದಿದೆ ಗುಡ್ ನ್ಯೂಸ್..!!
ಚಾಲೆಂಜಿಂಗ್ ಸ್ಟಾರ್ ಅಭಿನಯದ ಸಿನಿಮಾಗಳು ಒಂದಾದ ಮೇಲೆ ಒಂದರಂತೆ ಸೆಟ್ಟೇರುತ್ತಿದ್ದು, ಶೂಟಿಂಗ್ ಕೂಡ ಮುಗಿಯುತ್ತಿದೆ.. ಈ ಮೂಲಕ ಮುಂದಿನ ವರ್ಷದಲ್ಲಿ ದರ್ಶನ್ ಅಭಿನಯದ ಸಿನಿಮಾಗಳು ಮೂರು ತಿಂಗಳ ಅಂತರ ತೆಗೆದುಕೊಂಡು ಒಂದರ ನಂತರ ಒಂದರಂತೆ ತೆರೆಗೆ ಬಂದ್ರೆ ಅಚ್ಚರಿ ಇಲ್ಲ..
ಈ ನಡುವೆ ತರುಣ್ ಸುಧೀರ್ ದರ್ಶನ್ ಅಭಿಯದ 53ನೇ ಸಿನಿಮಾವನ್ನ ನಿರ್ದೇಶನ ಮಾಡ್ತಿರೋದು ನಿಮಗೆ ಗೊತ್ತೆ ಇದೆ.. ಈ ಚಿತ್ರಕ್ಕೆ ಈಗಾಗ್ಲೇ ರಾಬರ್ಟ್ ಅಂತ ಹೆಸರಿಡಲಾಗಿದೆ ಅಂತ ಹೇಳಲಾಗುತ್ತಿದೆ.. ಆದರೆ ಚಿತ್ರತಂಡ ಈ ವಿಚಾರವನ್ನ ಸ್ಪಷ್ಟ ಪಡೆಸಿಲ್ಲ..ಇದೇ ಡಿಸಂಬರ್ 25ಕ್ಕೆ ಈ ಚಿತ್ರದ ಮುಹೂರ್ತ ನಡೆಯಲ್ಲಿದ್ದು ಅಂದೆ ಟೈಟಲ್ ಅನ್ನ ಲಾಂಚ್ ಮಾಡಲಿದೆ..