ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಯಲ್ ಎನ್ ಫೀಲ್ಡ್ ನಲ್ಲಿ ಜಾಲಿ ರೈಡ್ ಮಾಡಿದ್ದು , ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದೆ.
ದರ್ಶನ್ ಹೊಸ ಬೈಕ್ ತಗೊಂಡು ರೈಡ್ ಮಾಡಿಲ್ಲ. ಬದಲಿಗೆ ಖಳನಟ ಕೀರ್ತಿ ರಾಜ್ ಅವರ ಮಗ ನಟ ಧರ್ಮ ರಾಜ್ ಅವರು ತೆಗೆದುಕೊಂಡಿರೋ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಸೋಮವಾರ ರಾತ್ರಿ ಸವಾರಿ ಮಾಡಿದ್ದಾರೆ.
ದರ್ಶನ್ ಹಾಗೂ ಧರ್ಮ ರಾಜ್ ನೈಟ್ ಡ್ರೆಸ್ ನಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಒಂದು ರೌಂಡ್ ಹೋಗಿದ್ದು, ಧರ್ಮರಾಜ್ ದರ್ಶನ್ ಜೊತೆಗಿನ ಫೋಟೋವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ದರ್ಶನ್ ಮತ್ತು ಕೀರ್ತಿ ರಾಜ್ ಅನೇಕ ವರ್ಷಗಳಿಂದ ಸ್ನೇಗಿತರು. ಧರ್ಮರಾಜ್ ನವಗ್ರಹ ಚಿತ್ರದ ಮೂಲಕ ಸಿನಿರಂಗ ಪ್ರವೇಶ ಮಾಡಿದ್ದರು. ಈ ಸಿನಿಮಾದಲ್ಲಿ ದರ್ಶನ್ ಕೂಡ ನಟಿಸಿದ್ದರು.