ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾನುವಾರ ಕಡಲ ನಾಡು ಮಂಗಳೂರಿಗೆ ಹೋಗಿದ್ದರು.
ಮಂಗಳೂರು ಹೊರವಲಯದ ಅಡ್ಯಾರ್ ನಲ್ಲಿ ಏರ್ಪಡಿಸಲಾಗಿದ್ದ ಯಕ್ಷ ಧ್ರುವ ಪಟ್ಲ ಕಾರ್ಯಕ್ರಮಕ್ಕೆ ದರ್ಶನ್ ನಿಗದಿತ ಸಮಯಕ್ಕಿಂತ ತಡವಾಗಿ ಹೋಗಿದ್ದರು. ಆದರೂ ಅಭಿಮಾನಿಗಳು ದರ್ಶನ್ ಬರುವಿಕೆಗಾಗಿ ಕಾದು ಕುಳಿತಿದ್ದರು.
ಈ ವೇಳೆ ಅಭಿಮಾನಿಯೊಬ್ಬರು ದರ್ಶನ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ದರ್ಶನ್ ಅವರ ವ್ಯಂಗ್ಯಚಿತ್ರವಿರುವ ಫೋಟೋವನ್ನು ಅಭಿಮಾನಿ ನೆಚ್ಚಿನ ನಟನಿಗೆ ಕೊಟ್ಟಿದ್ದಾರೆ.