ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶ್ವದ ಶ್ರೇಷ್ಠ ನಟರ ಸಾಲಿನಲ್ಲಿರುವ ಕನ್ನಡದ ಹೆಮ್ಮೆಯ ನಟ.
ಕನ್ನಡಿಗರು ಮಾತ್ರವಲ್ಲದೇ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವಂತಹ ಕಲಾವಿದ ದರ್ಶನ್. ಇವರಿಂದು ಲಂಡನ್ ನಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಇಂಗ್ಲೆಂಡ್ ಸರ್ಕಾರ ನೀಡುವ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿಯನ್ನು ಬ್ರಿಟಿಷ್ ಪಾರ್ಲಿಮೆಂಟ್ ನಲ್ಲಿಂದು ಸ್ವೀಕರಿಸಿದ್ದಾರೆ ದರ್ಶನ್.
ಸುಮಾರು20 ವರ್ಷದಿಂದ ಕನ್ನಡ ಸಿನಿಮಾರಂಗದಲ್ಲಿ ದುಡಿಯುತ್ತಾ ಕಲಾಸೇವೆ ಮಾಡ್ತಿರೋ ದರ್ಶನ್ ಅವರ ಕೀರ್ತಿಗೆ ಮತ್ತೊಂದು ಗರಿ ಎಂಬಂತೆ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ಲಭಿಸಿದೆ.
ಮೆಜೆಸ್ಟಿಕ್ ಚಿತ್ರದ ಮೂಲಕ ಪ್ರೀತಿಯ ದಾಸನಾಗಿ ಸಿನಿಮಾ ರಂಗದ ಚಕ್ರವರ್ತಿಯಾಗಿ ವಿಶ್ವಮಟ್ಟದಲ್ಲಿ ಸಿನಿಪ್ರಿಯರ ಮನೆಮಗನಾಗಿ ಯಶಸ್ಸಿನ ಶಿಖರವನ್ನೇರಿದ್ದಾರೆ ದರ್ಶನ್.
ದರ್ಶನ್ ಅವರ 50ನೇ ಸಿನಿಮಾ ಕರುಕ್ಷೇತ್ರ ಚಿತ್ರೀಕರಣ ನಡೆಯುತ್ತಿದೆ. ಮೊನ್ನೆ ದರ್ಶನ್ ಗೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಕುರುಕ್ಷೇತ್ರ ಚಿತ್ರದ ಸೆಟ್ ನಲ್ಲಿ ಸಂಭ್ರಮ ಮನೆ ಮಾಡಿತ್ತು.
ಇದೀಗ ಪುತ್ರ ವಿನೀಶ್ ಜೊತೆ ಲಂಡನ್ ಗೆ ಹೋಗಿ ಪ್ರಶಸ್ತಿ ಸ್ವೀಕರಿಸಿ ,ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ ಚಾಲೆಂಜಿಂಗ್ ಸ್ಟಾರ್.
ಪ್ರಶಸ್ತಿಗೆ ಭಾಜನರಾದ ದರ್ಶನ್ ಅವರಿಗೆ ಅಭಿನಂದನೆಗಳು.