‘ಕುರುಕ್ಷೇತ್ರ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ನೀಡುವಂತೆ ಅರ್ಜಿ ಸಲ್ಲಿಸಿದ ಚಿತ್ರತಂಡ…
ದರ್ಶನ್ ಅಭಿನಯದ 50 ನೇ ಪೌರಾಣಿಕ ಸಿನಿಮಾ, ಕನ್ನಡದ ಅತೀ ಹೆಚ್ಚು ಬಜೆಟ್ ನ, ಅತೀ ಹೆಚ್ಚು ಸ್ಟಾರ್ ಗಳನ್ನ ಒಳಗೊಂಡಿರುವ ಸಿನಿಮಾ, ಮೊದಲ ತ್ರಿಡಿ ಸಿನಿಮಾ ಎಂಬೆಲ್ಲ ಖ್ಯಾತಿಗೆ ಪಾತ್ರವಾಗಿರುವ ದರ್ಶನ್ ಕುರುಕ್ಷೇತ್ರ ಆದಷ್ಟು ಬೇಗ ತೆರೆಗೆ ಬರಲಿ ಅಂತ ಅಭಿಮಾನಿಗಳು ಕಾದು ಕುಳಿತಿದ್ದಾರೆ…
ಇತ್ತಕಡೆ ಭಾರತೀಯ ಮಹಾ ಪೌರಾಣಿಕ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ನೀಡುವಂತೆ ಅರ್ಜಿ ಸಲ್ಲಿಸಿದೆ ಚಿತ್ರತಂಡ.. ಯು/ಎ ಪ್ರಮಾಣ ಪತ್ರವನ್ನ ಪಡೆದುಕೊಂಡಿರುವ, 3 ಗಂಟೆ 5 ನಿಮಿಷ ಇರುವ 2ಡಿ ವರ್ಷನ್ ಬಿಡುಗಡೆ ಸಿದ್ದವಿದೆ.. ಆದರೆ ತ್ರಿಡಿಯ ಕೆಲಸಗಳು ಇನ್ನು ಬಾಕಿ ಇರುವುದರಿಂದ ಚಿತ್ರದ ರಿಲೀಸ್ ಡೇಟ್ ಮುಂದೆ ಹೋಗಿತ್ತು..
ಸದ್ಯ ಲಹರಿ ಆಡಿಯೋ ಸಂಸ್ಥೆ ದೊಡ್ಡ ಮೊತ್ತವನ್ನ ಕೊಟ್ಟು ಈ ಚಿತ್ರದ ಆಡಿಯೋ ಹಕ್ಕನ್ನ ಖರೀದಿಸಿದ್ದು, ಮುಂದಿನ ತಿಂಗಳಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಲಿದೆ.. ಆದಾದ ಕೆಲ ದಿನಗಳ ಅಂತರದಲ್ಲಿ ಚಿತ್ರವನ್ನ ತೆರೆಗೆ ತರಲು ಪ್ಲಾನ್ ಮಾಡಲಾಗಿದ್ಯಂತೆ..