ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾರಿಗೆ ತಾನೆ ಗೊತ್ತಿಲ್ಲ..? ದರ್ಶನ್ ಕಂಡರೆ ಯಾರಾದರೂ ಮಾತಾಡಿಸದೇ ಇರ್ತಾರ..? ಆದರೆ ನಮ್ಮ ಸ್ಯಾಂಡಲ್ ವುಡ್ ನ ನಟಿಯೊಬ್ಬರು ದರ್ಶನ್ ಅವರನ್ನು ಗುರುತಿಸುವಲ್ಲಿ ವಿಫಲರಾಗಿದ್ದರು…!
ಹೌದು, ನಟಿ ಮಾನ್ವಿತಾ ಹರೀಶ್ ಅವರು ದರ್ಶನ್ ಅವರನ್ನು ಗುರುತಿಸುವಲ್ಲಿ ವಿಫಲರಾದ ನಟಿ.
ಕಳೆದ ಬಾರಿ ದಸರಕ್ಕೆ ಮೈಸೂರಿಗೆ ಮಾನ್ವಿತಾ ಹೋಗಿದ್ದರು. ಅಲ್ಲಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ದರ್ಶನ್ ಅದೇ ಹೋಟೆಲ್ ನಲ್ಲಿ ತಂಗಿದ್ದರು ಎನ್ನೋದು ಮಾನ್ವಿತಾ ಅವರಿಗೆ ಗೊತ್ತಿರ್ಲಿಲ್ಲ. ಕಾರ್ಯಕ್ರಮಕ್ಕೆ ಹೋಗುವಾಗ ಹೋಟೆಲ್ ಹೊರಗಡೆಯ ಮೆಟ್ಟಿಲಲ್ಲಿ ದರ್ಶನ್ ತಮ್ಮ ಒಂದಿಷ್ಟು ಫ್ರೆಂಡ್ಸ್ ಜೊತೆ ಹೊರಗಡೆ ಮೆಟ್ಟಿಲಲ್ಲಿ ಕುಳಿತಿದ್ದರು. ಮಾನ್ವಿತಾ ಯಾರೋ ಕುಳಿತಿದ್ದಾರೆ ಅಂತ ಅವರ ಪಾಡಿಗೆ ಅವರು ಹೋದರು…!
ಆಗ ಅಲ್ಲೊಬ್ಬರು ಮಾನ್ವಿತಾ ಅವರಿಗೆ ದರ್ಶನ್ ಇರುವ ವಿಷಯವನ್ನು ಹೇಳಿದ್ದಾರೆ. ತಬ್ಬಿಬ್ಬಾದ ಮಾನ್ವಿತಾ ದರ್ಶನ್ ಅವರನ್ನು ಹುಡುಕಿದ್ರೂ ದರ್ಶನ್ ಅವರನ್ನು ಗುರುತಿಸಲು ಆಗಲಿಲ್ಲ. ಕೊನೆಗೆ ದರ್ಶನ್ ಮೆಟ್ಟಿಲ ಮೇಲೆ ಇರೋದನ್ನು ನೋಡಿ ಅವರ ಬಳಿ ಹೋಗಿದ್ದಾರೆ…!
ಬಿಗ್ ಸ್ಟಾರ್ ಮೆಟ್ಟಿಲ ಮೇಲೆ ಕುಳಿತುಕೊಂಡಿದ್ದನ್ನು ಕಂಡ ಮಾನ್ವಿತಾಗೆ ಅಚ್ಚರಿಯಾಗಿದೆ. ನೀವು ಹೀಗೆ ನೆಲದ ಮೇಲೆ ಕುಳಿತರೆ ಹೇಗೆ ಅಂತ ದರ್ಶನ್ ಅವರನ್ನು ಕೇಳಿದ್ದಾರೆ. ಅದಕ್ಕೆ ದರ್ಶನ್ ನಾನಿರುವುದೇ ಹೀಗೆ ಅಂದಿದ್ದಾರೆ…! ಮಾತನಾಡಿಸದೇ ಇದ್ದುದಕ್ಕೆ ಮಾನ್ವಿತಾ ಕ್ಷಮೆ ಕೇಳಿ ಅಲ್ಲಿಂದ ಹೊರಟರಂತೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.