ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಡಿಪುರ ದುರಂತ ನೋಡಿ ತುಂಬಾ ದುಃಖಿತರಾಗಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಬಂಡಿಪುರ ಅಭಯಾರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 8 ಕೀ.ಮೀ. ವ್ಯಾಪ್ತಿಗೆ ಹಬ್ಬಿಕೊಂಡಿದೆ. ಪ್ರಾಜೆಕ್ಟ್ ಟೈಗರ್ ಅಭಿಯಾನಕ್ಕೂ ಈ ಅಭಯಾರಣ್ಯವು ಸಂಬಂಧವನ್ನು ಹೊಂದಿದೆ. ಅಪಾರ ಸಂಖ್ಯೆಯ ವನ್ಯ ಜೀವಿಗಳು ಹಾಗೂ ಸಂಪತ್ತು ನಾಶವಾಗಿವೆ. ಸಹಜವಾಗಿ ಅಲ್ಲಿದ್ದ ಕೆಲವು ಪ್ರಾಣಿ, ಪಕ್ಷಿಗಳು ಕೂಡ ಸುಟ್ಟು ಭಸ್ಮವಾಗಿ ಹೋಗಿವೆ.
ಬಿಸಿಲ ತಾಪಕ್ಕೆ ಹುಲ್ಲು ಒಣಗಿದ್ದರಿಂದ ಒಂದೆಡೆ ಹೊತ್ತಿಕೊಂಡ ಬೆಂಕಿ ವ್ಯಾಪಕವಾಗಿ ಆವರಿಸಿದೆ. ಕುಂದಕೆರೆಯ ಬರೆಕಟ್ಟೆ ಹಾಗೂ ಗುಡ್ಡಕೆರೆ ಬೆಟ್ಟಗಳಲ್ಲಿ ಕಾಣಿಸಿಕೊಂಡ ಬೆಂಕಿ ಹಿಮವದ್ ಗೋಪಾಲ ಸ್ವಾಮಿ ವಲಯದವರೆಗೂ ಹರಡಿದೆ. ಪ್ರಾಣಿ ಪ್ರಿಯರಾದ ದರ್ಶನ್ ಅವರು ಸರ್ಕಾರ ಹಾಗೂ ಸ್ವಯಂ ಸಂಘಗಳ ಜೊತೆಗೆ ಕೈ ಜೋಡಿಸುವ ಮನಸ್ಸು ಮಾಡಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಪೋಸ್ಟ್ ಮಾಡಿ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.