ಬಾಕ್ಸ್ ಆಫೀನ್ ನ ‘ಯಜಮಾನ’ ಆಗೋಕೆ ಯಾವಾಗ ಬರ್ತಿದ್ದಾರೆ ದರ್ಶನ್..!!?
ಅಭಿಮಾನಿಗಳಿಗೆ ತನ್ನ ನೆಚ್ಚಿನ ಡಿ ಬಾಸ್ ಸಿನಿಮಾವನ್ನ ವರ್ಷಕ್ಕೆ ಎರಡಾದ್ರು ನೋಡ್ಬೇಕು ಎಂಬ ಆಸೆ.. ಸದ್ಯಕ್ಕೆ ದರ್ಶನ್ ಸಹ ಈ ಆಸೆಯನ್ನ ಈಡೇರಿಸಲು ಮುಂದಾಗಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಒಪ್ಪಿಕೊಂಡು ಮುಗಿಸುತ್ತಿದ್ದಾರೆ.. ಆದರೆ ಅದ್ಯಾಕೋ ಕುರುಕ್ಷೇತ್ರದ ಬಿಡುಗಡೆ ವಿಳಂಬವಾಗಿರೋದ್ರಿಂದ ಬೇರೆಲ್ಲ ದರ್ಶನ್ ಚಿತ್ರಕ್ಕೆ ಹೊಡೆತ ಬೀಳುವಂತೆ ಆಗಿದೆ..
ಸದ್ಯಕ್ಕೆ ಯಜಮಾನ ಚಿತ್ರದ ಹಾಡಿನ ಚಿತ್ರೀಕರಣ ಈಗಾಗ್ಲೇ ಶುರುವಾಗಿದ್ದು, ಇದೆಲ್ಲ ಮುಗಿದ್ರೆ ಯಜಮಾನ ಶೂಟಿಂಗೆ ಕುಂಬಳಕಾಯಿ ಬಿದ್ದಹಾಗೆ.. ಇನ್ನು ಚಿತ್ರದಲ್ಲಿನ ಕೆಲಸ ಗ್ರಾಫಿಕ್ಸ್ ವರ್ಕ್, ಎಡಿಟಿಂಗ್ ಅಂತೆಲ್ಲ ಈ ತಿಂಗಳಲ್ಲಿ ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳು ಶುರುವಾಗಲಿದೆ.. ಆನಂತರ ಚಿತ್ರದ ಟೀಸರ್, ಟ್ರೇಲರ್, ಧ್ವನಿಸುರುಳಿ ಬಿಡುಗಡೆ ಎಲ್ಲವು ನಡೆಯಬೇಕಿದೆ.. ಹೀಗಾಗೆ ಹೊಸ ವರ್ಷದಲ್ಲಿ ಯಜಮಾನ ಚಿತ್ರದ ಟ್ರೇಲರ್ ನಿಂದ ಹಿಡಿದು ಹಾಡುಗಳು ಬಿಡುಗಡೆಯಾಗಲಿದ್ದು, ಜನವರಿ ಅಂತ್ಯ ಅಥವಾ ಫೆಬ್ರವರಿ ಗೆ ಯಜಮಾನ ದರ್ಶನ್ ಬಾಕ್ಸ್ ಆಫೀಸ್ ನ ಸುಲ್ತಾನನಾಗಿ ಮೆರೆಯಲ್ಲಿದ್ದಾರೆ..