ರಿಲೀಸ್ ಗು ಮೊದಲೇ ದಾಖಲೆ ಬರೆದ ಯಜಮಾನ..!!
ಇದೇ ಮಾರ್ಚ್ 1ನೇ ತಾರೀಖು ಬಿಡುಗಡೆಗೆ ಸಿದ್ದವಾಗಿರುವ ಸಿನಿಮಾ ದರ್ಶನ್ ಅಭಿಯದ ಯಜಮಾನ.. ಈಗಾಗ್ಲೇ ಆನ್ ಲೈನ್ ನಲ್ಲಿ ಅಡ್ವಾನ್ಸ್ ಬುಕಿಂಗ್ ಶುರುವಾಗಿದ್ದು, ಹಲವು ಕಡೆ ಟಿಕೆಟ್ ಸೋಲ್ಡ್ಔಟ್ ಆಗಿದೆ.. ಈ ನಡುವೆ ‘ಐಎಂಡಿಬಿ‘ ಲೀಸ್ಟ್ ನಲ್ಲಿ ಯಜಮಾನ ಪ್ರಥಮ ಸ್ಥಾನವನ್ನ ಪಡೆದುಕೊಂಡಿದೆ.. ಸಲ್ಮಾನ್ ನಿರ್ಮಾಣದ ನೋಟ್ ಬುಕ್ ಹಾಗು ಅಕ್ಷಯ್ ಕುಮಾರ್ ನಟನೆಯ ಕೇಸರಿ ಚಿತ್ರವನ್ನ ಹಿಂದಿಕ್ಕಿ ಮೊದಲ ಸ್ಥಾನವನ್ನ ಯಜಮಾನ ಆವರಿಸಿಕೊಂಡಿದ್ದಾನೆ..
ಮಾರ್ಚ್ ಒಂದರಂದೆ ಸುಮಾರು 500 ಕ್ಕು ಅಧಿಕ ಚಿತ್ರಮಂದಿರದಲ್ಲಿ ಯಜಮಾನ ವೀಕ್ಷಣೆಗೊಳ್ಳಲಿದೆ.. ಮೊದಲ ಬಾರಿಗೆ ದೇಶದಲ್ಲಿ ಮಾತ್ರವಲ್ಲದೆ ಅರಬ್ ರಾಷ್ಟ್ರದಲ್ಲಿ ಮಾರ್ಚ್ ಒಂದರಂದೆ ತೆರೆ ಕಾಣುತ್ತಿದೆ.. ಮುಂಬೈ, ಪುಣೆ, ದೆಹಲಿ, ಚೆನ್ನೈ, ಹೈದ್ರಾಬಾದ್ ನಲ್ಲಿ ಯಜಮಾನನಿಗೆ ಬೇಡಿಕೆ ಹುಟ್ಟುಕೊಂಡಿದೆ..
ಸದ್ಯ ಚಿತ್ರದ ರಿಲೀಸ್ ಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇದ್ದು, ಕೌಂಟ್ಡೌನ್ ಸಹ ಶುರುವಾಗಿದ್ದು, ದಚ್ಚು ಅಭಿಮಾನಿಗಳಲ್ಲಿ ಈಗಾಗ್ಲೇ ಹಬ್ಬದ ವಾತಾವರಣ ಮನೆ ಮಾಡಿದೆ..