ಎಲ್ರಿಗೂ ಗೊತ್ತಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರ 49ನೇ ಸಿನಿಮಾ ಮಿಲನ ಪ್ರಕಾಶ್ ನಿರ್ದೇಶನದ ತಾರಕ್ ಸಖತ್ ಸೌಂಡ್ ಮಾಡ್ತಿದೆ. 50ನೇ ಚಿತ್ರ ನಾಗಣ್ಣ ನಿರ್ದೇಶನದ ‘ಕರುಕ್ಷೇತ್ರ’ ಚಿತ್ರೀಕರಣ ನಡೀತಿದೆ. ಈ ನಡುವೆ ದರ್ಶನ್ ಅವರ 51ನೇ ಚಿತ್ರ ಯಾವ್ದು ಎಂಬ ಕುತೂಹಲ ಅಭಿಮಾನಿಗಳದ್ದು.
ಕುಮಾರ್ ನಿರ್ದೇಶನದ, ಬಿ ಸುರೇಶ್ ನಿರ್ಮಾಣ ಮಾಡುವ ಚಿತ್ರವೇ ದರ್ಶನ್ 51ನೇ ಸಿನಿಮಾ ಎಂದು ಹೇಳಲಾಗಿತ್ತು. ಹಿಂದೆ ಇದೇ ದರ್ಶನ್ ಅಭಿನಯದ ಪೊರ್ಕಿ ಮತ್ತು ಬುಲ್‍ಬುಲ್ ಚಿತ್ರ ನಿರ್ದೇಶಿಸಿದ್ದ ಎಂ.ಡಿ ಶ್ರೀಧರ್ ನಿರ್ದೇಶಿಲಸಿರುವ ಚಿತ್ರವೇ ದರ್ಶನ್ ಅವ್ರ 51ನೇ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಚಿತ್ರ ತಮಿಳಿನ ಸೂಪರ್ ಹಿಟ್ ಸಿನಿಮಾ ವೀರಂ ರಿಮೇಕ್ ಎನ್ನಲಾಗ್ತಾ ಇದೆ. ಎಲ್ಲವೂ ಸದ್ಯದಲ್ಲೇ ಸ್ಪಷ್ಟವಾಗಲಿದೆ.