ಅವಳು ತಾಯಿ ಇಲ್ಲದ ತಬ್ಬಲಿ. ತಂದೆಯೇ ನನಗೆಲ್ಲಾ ಎಂದುಕೊಂಡಿದ್ದವಳು. ಆದರೆ, ತಂದೆ ಅವಳಿಗೆ ಮಾಡಿದ್ದು ಯಾರೂ ಸಹಿಸಲಾಗದ ದ್ರೋಹ. ಎರಡು ವರ್ಷದಿಂದ ತಂದೆ ಎಂದು ಕರೆಸಿಕೊಂಡ ಅಪ್ಪನಿಂದ ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿ ಕೊನೆಗೂ ಸಹಿಸಿಕೊಳ್ಳಲಾಗದೆ ತಂದೆಯನ್ನು ಕೊಂದಿದ್ದಾಳೆ.
ಉತ್ತರ ಪ್ರದೇಶದ ಸಂಬಾಲ್ ಜಿಲ್ಲೆಯಲ್ಲಿ ನಡೆದಿರುವ ಘಟನೆಯಿದು. ತಂದೆಯಿಂದ ದೌರ್ಜನ್ಯಕ್ಕೆ ಒಳಗಾಗಿ ಅವನನ್ನು ಕೊಂದಿದ್ದಾಳೆ 16 ವರ್ಷದ ಬಾಲಕಿ. ಆಕೆ ಪೊಲೀಸರಿಗೆ ನೀಡಿರುವ ಮಾಹಿತಿಯಂತೆ 9 ವರ್ಷದ ಹಿಂದೆ ತಾಯಿ ತೀರಿಕೊಂಡಿದ್ದಾರೆ. ಮನೆಯಲ್ಲಿ ತಂದೆ, ಅಜ್ಜಿ ಹಾಗೂ ತಂಗಿಯ ಜೊತೆ ಅವಳು ವಾಸವಿದ್ದಾಳೆ. ಕಳೆದ ಎರಡು ವರ್ಷದಿಂದ ನಿರಂತರವಾಗಿ ಕಾಮಪಿಶಾಚಿ ತಂದೆ ಲೈಂಗಿಕ ದೌರ್ಜನ್ಯ ನಡಿಸಿದ್ದಾನೆ.
ಅಜ್ಜಿಗೆ ಕಣ್ಣು ಕಾಣದೇ ಇದ್ದಿದ್ದರಿಂದ ಅವರಿಂದ ಈಕೆಗೆ ಯಾವುದೇ ಸಹಾಯ ಸಿಕ್ಕಿಲ್ಲ. ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಹೆದರಿಸುತ್ತಿದ್ದ ನೀಚ ತಂದೆ ಕಳೆದ ಸೋಮವಾರವು ಅತ್ಯಾಚಾರ ಎಸಗಿದ್ದಾನೆ..!
ಆಗ ಬಾಲಕಿ ಆತ್ಮರಕ್ಷಣೆಗಾಗಿ ಕೊಲೆ ಮಾಡಿದ್ದಾಳೆ. ಮರುದಿನ (ಮಂಗಳವಾರ) ಪಕ್ಕದ ಮನೆಯವರ ಜೊತೆ ಸ್ಥಳಿಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಮೃತ ತಂದೆಯ ವಿರುದ್ಧ ದೂರು ದಾಖಲಾಗಿದೆ.