ಮುಖದಲ್ಲಿ ವೃದ್ಯಾಪ್ಯ, ಮೀಸೆ ತೆಗೆಸಿದ್ದಾನೆ. ಅವ್ನು ದಾವೂದ್ ಇಬ್ರಾಹಿಂ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಇತ್ತೀಚೆಗೆ ತೆಗೆದ ಫೋಟೋನಾ..? ಅಥವಾ ಹಲವು ದಿನ, ತಿಂಗಳು, ವರ್ಷಗಳ ಹಿಂದೆ ತೆಗೆದ ಫೋಟೋನಾ..? ಎಂಬುದು ಖಾತ್ರಿಯಿಲ್ಲ. ಆದರೆ ಗೂಗಲ್ ನಲ್ಲಿ ದಾವೂದ್ ಲೇಟೆಸ್ಟ್ ಫೋಟೋ ಹರಿದಾಡುತ್ತಿದೆ.
ಒಂದು ವೇಳೆ ಇದು ಇತ್ತೀಚಿಗಿನ ಫೋಟೋ ಎನ್ನುವುದಾದರೇ ದಾವೂದ್ ಸತ್ತಿಲ್ಲ ಬದುಕಿದ್ದಾನೆ ಎನ್ನುವುದು ನಿಕರವಾಗುತ್ತದೆ. ಕೆಲವರು, ದಾವೂದ್ಗೆ ಪ್ರಪಂಚದ ಅಷ್ಟೂ ದುಶ್ಚಟಗಳಿದ್ದವು. ದಿನಕ್ಕೆ ನಾಲ್ಕೈದು ಪಾಕೆಟ್ ಸಿಗರೇಟ್ ಸೇದುತ್ತಿದ್ದ. ಡ್ರಗ್ಸ್ ಸೇವಿಸುವ ಅಭ್ಯಾಸವಿತ್ತು. ಹೆಣ್ಣುಮಕ್ಕಳ ಸಹವಾಸ ಮಾಡುತ್ತಿದ್ದ. ಅವನಿಂದ ಸೇವೆ ಪಡೆದುಕೊಂಡವರಲ್ಲಿ ಬಾಲಿವುಡ್ ನಟಿಮಣಿಯರ ಪಾಲು ದೊಡ್ಡದು. ಏನಿಲ್ಲವೆಂದರೂ ದಾವೂದ್ ಕೆಟ್ಟ ರೋಗ ಬಂದು ಸತ್ತುಹೋಗಿರುತ್ತಾನೆ. ಯಾವುದೇ ಕಾರಣಕ್ಕೂ ಬದಕಿರಲು ಸಾಧ್ಯವಿಲ್ಲ ಎನ್ನುವವರಿದ್ದಾರೆ. ಇನ್ನು ಕೆಲವರು, ದಾವೂದ್ ನನ್ನು ಅವನ ಹುಡುಗರೇ ಹೊಡೆದು ಹಾಕಿರುತ್ತಾರೆ. ಅವನ ಹೆಸರಿನಲ್ಲಿ ಅಂಡರ್ ವರ್ಲ್ಡ್ ನಿಭಾಯಿಸುತ್ತಿದ್ದಾರೆ ಎನ್ನುತ್ತಾರೆ. ಒಂದು ವೇಳೆ ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ದಾವೂದ್ ಫೋಟೋ ಈಗಿನದ್ದೇ ಆದರೆ, ಇವೆಲ್ಲಾ ಊಹಾಪೋಹಕ್ಕೆ ತೆರೆಬೀಳುತ್ತದೆ. ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬದುಕಿದ್ದಾನೆ ಎಂಬುದು ಖಾತ್ರಿಯಾಗುತ್ತದೆ. ದಾವೂದ್ ಬದುಕಿದ್ದಾನೆ ಎಂದಮೇಲೆ ಅವನನ್ನು ಭಾರತ ಹಿಡಿಯುತ್ತಿಲ್ಲವೇಕೆ..? ಎಂಬ ಪ್ರಶ್ನೆ ಹುಟ್ಟಿಕೊಳ್ಳಲೇಬೇಕು. ದಾವೂದ್ನನ್ನು ಕೆಡವೋದೇನು ದೊಡ್ಡ ವಿಚಾರವಲ್ಲ. ಆದರೆ ಶತ್ರು ರಾಷ್ಟ್ರಕ್ಕೆ ನುಗ್ಗಿ ಅವನನ್ನು ಹೊಡೆದರೇ ಅದು ಎರಡು ದೇಶಗಳ ನಡುವೆ ರಾಜತಾಂತ್ರಿಕ ಸಮಸ್ಯೆಗೆ ಕಾರಣವಾಗುತ್ತದೆ. ಯುದ್ಧವು ಸಂಭವಿಸಬಹುದು. ಈ ವಿಚಾರದಲ್ಲಿ ಚೀನಾದ ಬೆಂಬಲ ಪಡೆಯೋಣ ಅಂದರೇ, ಪಾಕಿಸ್ತಾನದ ವಿಚಾರದಲ್ಲಿ ಆ ದೇಶದ ನಿಲುವು ಈಗಾಗಲೇ ಸ್ಪಷ್ಟವಾಗಿದೆ. ಅವರನ್ನು ನಂಬುವಂತಿಲ್ಲ. ಆದರೆ ಅಮೇರಿಕಾ ಬೆಂಬಲ ಪಡೆದರೇ ಎಲ್ಲವೂ ಸಲೀಸು. ಪಾಕಿಸ್ತಾನ ಕಮಕ್ ಕಿಮಕ್ ಎನ್ನುವುದಿಲ್ಲ. ಇದು ಮೋದಿಯ ಹಳೆಯ ಪ್ಲಾನ್..!
ದಾವೂದ್ ಪಾಪಕೃತ್ಯಗಳ ಆರಂಭಿಕ ದಿನಗಳಲ್ಲಿ ಭಾರತದ ಜೈಲುಗಳಲ್ಲಿ ಕಂಬಿ ಎಣಿಸಿದ್ದಾನೆ. 1993ರ ಮುಂಬೈ ಬ್ಲಾಸ್ಟ್ ನಂತರ ಆಸಾಮಿ ಪತ್ತೆಯೇ ಇಲ್ಲ. ಅಂದರೇ ಡಾನ್ ಭೂಗತವಾಗಿ ಇಪ್ಪತ್ಮೂರು ವರ್ಷಗಳಾಗಿದೆ. ಅಲ್ಲೆಲ್ಲೋ ದುಬೈನಲ್ಲಿ ತನ್ನ ಮಗಳ ಮದುವೆಗೆ ಬಂದು ಹೋಗಿದ್ದ ಎಂಬ ಪುಕಾರು ಬಿಟ್ಟರೇ.. ಮತ್ತೆಲ್ಲೂ ಆತನ ಸುದ್ಧಿಯಾಗಿಲ್ಲ. ಡಾನ್ ಆಗಿ ಒಂದು ಮಟ್ಟಕ್ಕೆ ಬೆಳೆದ ನಂತರ ದುಬೈನಲ್ಲಿ ಕುಂತು ಆಪರೇಟ್ ಮಾಡುತ್ತಿದ್ದ ಈ ಪರಮ ಪಾತಕಿ, ಹಾಕಾಂಗ್, ಆಸ್ಟ್ರೇಲಿಯ ಸೇರಿದಂತೆ- ವಿದೇಶಗಳಲ್ಲೇ ಕುಂತು ವಿದ್ವಂಸಕ ಕೃತ್ಯಗಳನ್ನು ನಡೆಸಿದ್ದೇ ಹೆಚ್ಚು. ದಾವೂದ್ ನನ್ನು ಹಿಡಿಯಲು ಇಂಟರ್ ಫೋಲ್ ಒಂದು ಹಂತದಲ್ಲಿ ಭೂಗತ ಪಾತಕಿಗಳ ಬೆಂಬಲವನ್ನು ಯಾಚಿಸಿತ್ತು. ಚೋಟಾ ರಾಜನ್ನಂಥ ಡಾನ್ಗಳು ದಾವೂದ್ ಬಗ್ಗೆ ಮಾಹಿತಿ ಕೊಡುತ್ತಿದ್ದರು. ಅಂತಿಮವಾಗಿ ಆತ ಪಾಕಿಸ್ತಾನದಲ್ಲಿಯೇ ಇರುವುದು ಖಾತ್ರಿಯಾಗಿತ್ತು. ಆದರೆ ಪಾಕಿಸ್ತಾನದಲ್ಲಿರುವ ದಾವೂದ್ನನ್ನು ಮುಟ್ಟೋದ್ ಹೇಗೆ..? ರಿಸ್ಕ್ ತೆಗೆದುಕೊಳ್ಳುವುದಕ್ಕೆ ಭಾರತ ಮನಸು ಮಾಡಲಿಲ್ಲ. ಈ ಹಿಂದೆ ನರೇಂದ್ರ ಮೋದಿ ಅಮೇರಿಕಾ ಭೇಟಿಯ ವೇಳೆ, ದಾವೂದ್ ಬಗ್ಗೆ ಪ್ರಸ್ತಾಪವೆತ್ತಿ, ಆತನನ್ನು ಮಟ್ಟ ಹಾಕುವುದಕ್ಕೆ ಸಹಕರಿಸಿ ಎಂದು ಕೇಳಿದ್ದರು. ಇಲ್ಲೊಂದು ಪರಸ್ಪರ ಒಮ್ಮತದ ಅಭಿಪ್ರಾಯಗಳನ್ನು ಗಮನಿಸಬಹುದು. ಅದೇನೆಂದರೇ, ಕಾಯುವಷ್ಟು ಕಾದು ಈಗ ಐಸಿಸ್ ಉಗ್ರರನ್ನು ಮಟ್ಟ ಹಾಕುತ್ತಿರುವ ಅಮೇರಿಕಾ, ಐಸಿಸ್ ಉಗ್ರರನ್ನು ಸರ್ವನಾಶ ಮಾಡುವುದಕ್ಕೆ ಭಾರತದ ಬೆಂಬಲ ಕೇಳಿತ್ತು. ಅದಕ್ಕೆ ಭಾರತವೂ ಸಮ್ಮತಿಸಿತ್ತು. ಇದೇ ವೇಳೆ ದಾವೂದ್ ಮಟ್ಟ ಹಾಕುವ ಮಾತುಕತೆಯೂ ನಡೆದಿತ್ತು. ಆದರೆ ಆ ನಿಟ್ಟಿನಲ್ಲಿ ಪ್ರಯತ್ನವಾಗಲಿಲ್ಲ.
ಅವನ್ಯಾರೋ, ಅದೆಲ್ಲೋ ಕುಂತು ಇಡೀ ದೇಶವನ್ನು ಆಪರೇಟ್ ಎನ್ನುವುದನ್ನು ತಮಾಷೆ ಅಂದುಕೊಂಡರೇ ಅದು ಮೂರ್ಖತನ. ಇರಬಹುದೇನೋ ಅಂದುಕೊಂಡರೇ, ಅದೇ ವಾಸ್ತವ..! ಕೆಟ್ಟ ಹುಳುಗಳನ್ನು ಹೊಸಕಿ ಹಾಕದಷ್ಟು ಅಸಮರ್ಥವಾಗಿದೆಯಾ ನಮ್ಮ ಆಡಳಿತ..? ನಾಟ್ ಶ್ಯೂರ್. ಒಂದಂತೂ ನಿಜ. ಮತ್ತೆ-ಮತ್ತೆ ದಾವೂದ್ ಕಾಡುತ್ತಿದ್ದಾನೆ. ಛೋಟಾ ಶಕೀಲ್ ಗುಡುಗುತ್ತಿದ್ದಾನೆ. ಟೈಗರ್ ಮೆಮೋನ್, ರವಿ ಪೂಜಾರಿ, ವಿಕ್ಕಿ ಶೆಟ್ಟಿ, ಹೆಬ್ಬೆಟ್ಟು ಮಂಜ..! ಒಬ್ಬರಾ..? ಇಬ್ಬರಾ..? ಅಷ್ಟಕ್ಕೂ ಇವರ್ಯಾರು ಕೈಗೆಟುಕದಷ್ಟು ದೂರದಲ್ಲಿದ್ದಾರಾ..? ಇವರನ್ನು ಹಿಡಿಯೋದು ಅಷ್ಟು ಕಷ್ಟಾನಾ..? ಹೋಗಲಿ, ಇವರೆಲ್ಲಾ ಲ್ಯಾಡೆನ್ ಗಿಂಥ ಬಲಿಷ್ಟರಾ..? ಒಬ್ಬನನ್ನ ಹೊಡೀಲೇಬೇಕು ಅಂದರೇ ಒಂದು ದೇಶದ ಮಟ್ಟಿಗೆ ಎಷ್ಟು ದಿನದ ಮಾತು. ಆದರೆ ಹಾಗಾಗುತ್ತಿಲ್ಲ ಯಾಕೆ..?. ದಾವೂದ್ ಡ್ರಗ್ಸ್ ಮಾಫಿಯಾ, ಕೆಮಿಕಲ್ ಮಾಫಿಯಾ, ವೆಪನ್ಸ್ ಮಾಫಿಯಾ, ಫೀಲ್ಮ್ ಮಾಫಿಯಾ- ಎಲ್ಲಾ ವಲಯಗಳಲ್ಲೂ ಅಕ್ರಮವಾಗಿ ಅಕ್ಷರಶಃ ಮೆರೆದಿದ್ದಾನೆ. ಮೆರೆಯುತ್ತಿದ್ದಾನೆ. ಆದರೆ ಅದೆಷ್ಟು ತಿಪ್ಪರಲಾಗವೋ ಗೊತ್ತಿಲ್ಲ, ದಾವೂದ್ ನೆರಳೂ ಹಿಡಿಯುವುದಕ್ಕಾಗದೇ ಪೇಚಾಡುತ್ತಿದೆ ನಮ್ಮ ದೇಶ.
ದಾವೂದ್ ಇಬ್ರಾಹೀಂ ಈಗ ಕೇವಲ ಭೂಗತ ಪಾತಕಿಯಾಗುಳಿದಿಲ್ಲ. ಅವನೀಗ ಭಯೋತ್ಪಾದಕ. ಭಾರತಕ್ಕೆ ಬೇಕಿರುವ ಮೋಸ್ಟ್ ವಾಂಟೆಡ್ ಟೆರ್ರರಿಸ್ಟ್. ಸ್ಮಗ್ಲಿಂಗ್ ಮಾಡುತ್ತಿದ್ದ ಹುಡುಗ, ಮುಂದೊಂದು ದಿನ ಮುಸಲ್ಮಾನರ ನಾಯಕನಾಗಲು ಹೊರಟಿದ್ದ. ಭಾರತದಲ್ಲಿ ಮುಸಲ್ಮಾನರಿಗೆ ಉಳಿಗಾಲವಿಲ್ಲ, ಮುಸ್ಲೀಮರನ್ನು ಕಂಡರೇ ಭಾರತ ನಡುಗಬೇಕು ಅಂತ ನಿರ್ಧಾರಕ್ಕೆ ಬಂದಿದ್ದ. ಬಾಬ್ರಿ ಮಸೀದಿ ಕೆಡವಿದ್ದನ್ನೇ ಮುಂದಿಟ್ಟುಕೊಂಡು ಮುಂಬೈಗೆ ಅನಾಮತ್ತಾಗಿ ಬಾಂಬಿಟ್ಟು ಸಾವಿರಾರು ಜನರ ಸಾವಿಗೆ ಕಾರಣನಾದ. ಅವತ್ತೇ ಕೊನೆ, ದಾವೂದ್ ಭೂಗತನಾಗಿದ್ದ.
`ಡಿ’ಕಂಪನಿ, ನಿಜಕ್ಕೂ ಭಾರತದ ಪಾಲಿಗೆ ಡೇಂಜರಸ್ ಕಂಪನಿ. ಅದೇ ದಾವೂದ್ ಇಬ್ರಾಹೀಂನ ಹಳೇ ಫೋಟೋ ಇಟ್ಟುಕೊಂಡು, ದಾವೂದ್ ಇದ್ದಾನಾ..? ಅಂತ ಪಾಕಿಸ್ತಾನವನ್ನ ಗುಟ್ಟಿನಲ್ಲಿ ಕೇಳುವ ಛಾಳಿಯನ್ನು ನಮ್ಮ ದೇಶ ಬಿಟ್ಟಿರಲಿಲ್ಲ. ಇದೀಗ ಹೊಸ ಫೋಟೋ ಇಟ್ಟುಕೊಂಡು ದಾವೂದ್ ಇದ್ದಾನಾ..? ಅಂತ ಕೇಳಬಹುದು. ಪಾಕಿಸ್ತಾನ ಯಥಾಪ್ರಕಾರ, `ವೋ ಸಾಲೇ ಹಮಾರೇ ದೇಶ್ ಮೇ ನಹೀಂ ಹೈ, ಇದರ್ ಆಯೇಗಾಥೋ ದೇಕಿಂಗೆ’ ಎನ್ನಬಹುದು. ಇವ್ರು, `ಟೀಕೆ ಸಾಬ್’ ಅಂತ ಎದ್ದುಬರಬಹುದು. ಇದು ಎಷ್ಟು ದಿನಗಳ ಕಣ್ಣಾಮುಚ್ಚಾಲೆಯೋ ಗೊತ್ತಿಲ್ಲ. ಅದೆಷ್ಟು ಪ್ರೈಂ ಮಿನಿಸ್ಟ್ರು ಬಂದ್ರೂ ದಾವೂದ್ನಂಥ ಪಾತಕಿಗಳ ಸದ್ದಡಗಿಸುವುದು ಸಾಧ್ಯವಿಲ್ಲದ ಮಾತಾಗಿದೆ. 2011ರ ಪೋರ್ಬ್ಸ್ ವರದಿಯ ಪ್ರಕಾರ ಜಗತ್ತಿಗೆ ಬೇಕಾಗಿರುವ ಟಾಪ್ ಟೆನ್ ಕ್ರಿಮಿನಲ್ಸ್ ಗಳ ಪಟ್ಟಿಯಲ್ಲಿ ದಾವೂದ್ ಮೂರನೇ ಸ್ಥಾನದಲ್ಲಿದ್ದಾನೆ. ಸಧ್ಯ ಆತ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಹಾಗೂ ಖೋಟಾ ನೋಟು ಚಲಾವಣೆಯನ್ನು ತೆರಪಿಲ್ಲದೇ ಮುಂದುವರಿಸಿದ್ದಾನೆ. ಆಯಾ ದೇಶದ ಕರೆನ್ಸಿಯ ಪಡಿಯಚ್ಚಿನಂತಿರುವ ಖೋಟಾ ನೋಟುಗಳನ್ನು ತಯಾರಿಸಿ, ಆಯಾ ದೇಶಗಳ ಹದ್ದಿನಕಣ್ಣನ್ನು ತಪ್ಪಿಸಿ ಮನಿ ಟ್ರಾನ್ಸ್ ಫರ್ ಮಾಡಿಸುತ್ತಿರುವ ಈತನ ಅನ್ಅಫೀಶಿಯಲ್ ಆಪರೇಶನ್ಗೆ `ಹವಾಲಾ’ ಅಂತ ಹೆಸರಿಟ್ಟುಕೊಂಡಿದ್ದಾನೆ.
ಕೆಲ ದಶಕಗಳ ಹಿಂದೆ `ಏನೋ ಮಾಡಿಕೊಂಡು ಹೋಗಲಿ, ನಮಗೂ ಪ್ರಾಫಿಟ್ಟಿದೆಯಲ್ಲಾ…! ಅಂತ ಭಾರತ, ದಾವೂದ್ನನ್ನು ಅವನ ಪಾಡಿಗೆ ಬೆಳೆಯಲು ಬಿಟ್ಟ ತಪ್ಪಿಗೆ, ಅದರ ಒಡಲಿಗೆ ಬಾಂಬಿಟ್ಟು, ತಾನು ನಿಯ್ಯತ್ತಿನ ಮನುಷ್ಯ ಅಲ್ಲ ಎನ್ನುವುದನ್ನು ಸಾಬೀತು ಮಾಡಿದ್ದ. ಅವತ್ತು ಯುಎಸ್ಎ ಹಾಗೂ ಭಾರತ ಜಂಟಿಯಾಗಿ ಇವನನ್ನು ಗ್ಲೋಬಲ್ ಟೆರ್ರರಿಸ್ಟ್ ಎಂದು ಘೋಷಿಸಿತ್ತು. ಅಂದು ಡೆಪ್ಯೂಟಿ ಪ್ರೈಂ ಮಿನಿಸ್ಟರ್ ಆಗಿದ್ದ ಎಲ್ ಕೆ ಅಡ್ವಾಣಿ, ಇವನನ್ನು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸೇರಿಸಿದ್ದರು. ಆದರೆ ಮುಂಬೈ ಬ್ಲಾಸ್ಟ್ ನಡೆದು 23 ವರ್ಷ ಕಳೆದರೂ ದಾವೂದ್ ಇವರ ಕೈಗೆ ಸಿಕ್ಕಿಲ್ಲ. `ಏನ್ರಪ್ಪಾ…. ಇದು ಎಂದು ಕೇಳಿದ್ರೆ, ಪಕ್ಕದ ಪಾಕಿಸ್ತಾನದತ್ತ ಅಸಹಾಯಕರಾಗಿ ಕೈ ತೋರಿಸುತ್ತದೆ ಭಾರತ. 2014ರಲ್ಲಿ ಅವನ ಅಡಗುದಾಣ, ಕರಾಚಿಯ ಬಂಗಲೆಯೊಂದರ ಮೇಲೆ ಅಮೇರಿಕಾ, ಭಾರತದ ಮಿಲಿಟರಿ ಪಡೆ ದಾಳಿ ನಡೆಸಿತ್ತು. ಆದರೆ ಕೆಲವೇ ಘಂಟೆಗಳ ಮೊದಲು ಪಾಕಿಸ್ತಾನದ ಬೇಹುಗಾರಿಕೆ ಪಡೆ ಐಎಸ್ಐನಿಂದ ಮಾಹಿತಿ ಪಡೆದ ದಾವೂದ್ ಅಲ್ಲಿಂದ ಪರಾರಿಯಾಗಿದ್ದ. ಆಗವನು ಅಫ್ಘಾನಿಸ್ತಾನದ ಗಡಿಗಳಲ್ಲಿ ಅಥವಾ ಪಾಕಿಸ್ತಾನದ ಆಯಕಟ್ಟಿನ ಜಾಗೆಗಳಲ್ಲಿ ತಲೆಮರೆಸಿಕೊಂಡಿರಬಹುದು ಎಂಬ ಅನುಮಾನವಿತ್ತು.
ಅಷ್ಟಕ್ಕೂ ಅವ್ನೇನು ಸಾಮಾನ್ಯ ಡಾನ್ ಏನಲ್ಲ. ಅವನು ಬದುಕಿರಲಿ, ಇಲ್ಲದಿರಲಿ.. ಸೌತ್ ಏಷ್ಯಾ, ಮಿಡ್ಡಲ್ ಈಸ್ಟ್, ಆಫ್ರಿಕಾ, ಯು.ಕೆ, ವೆಸ್ಟರ್ನ್ ಯೂರೋಪ್- ಮುಂತಾದ ಕಡೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾನೆ. 1990ರ ಹೊತ್ತಿಗೆಲ್ಲಾ ಅಲ್ ಕೈದಾ ಜೊತೆ ನಂಟು ಹೊಂದಿದ್ದ. ಸತ್ತಿರುವ ಒಸಾಮಾ ಬಿನ್ ಲ್ಯಾಡೆನ್ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಅವನನ್ನು ಅಫ್ ಘಾನಿಸ್ತಾನದಲ್ಲಿ ಆಗಾಗ ಭೇಟಿಯಾಗುತ್ತಿದ್ದ. ಈ ಸಂದರ್ಭದಲ್ಲೇ ಭಾರತವನ್ನು ಘಾಸಿಗೊಳಿಸಲು ನಿರ್ಧರಿಸಿದ್ದ. ಬಾಬ್ರಿ ಮಸೀದಿಯ ಧ್ವಂಸಕ್ಕೆ ಆತ ಮುಂಬೈಗೆ ಬಾಂಬಿಟ್ಟು ರಿವೇಂಜ್ ಹೇಳಲಿಲ್ಲ. ಆತನ ಜೊತೆಗಿದ್ದ ರಕ್ಕಸ ಅಲ್ಖೈದಾದ ಮತಾಂಧರಿಗೆ ಭಾರತವನ್ನು ಸುಡಲೇಬೇಕೆನ್ನುವ ದರ್ದಿತ್ತು. ಅವರೇ ಹೇಳುವ ಪ್ರಕಾರ ಅದು ಜಿಹಾದ್. ಅದಕ್ಕೆ ದಾವೂದ್ ಎಂಬ ಅಸ್ತ್ರವನ್ನು ಎನ್ ಕ್ಯಾಶ್ ಮಾಡಿಕೊಂಡಿದ್ದರು. ದಾವೂದ್ ಬಾಬ್ರಿ ಮಸೀದಿ ದ್ವಂಸಕ್ಕೆ ರಿವೇಂಜ್ ಹೇಳುವ ಮೂಲಕ ದೇಶದ ಅಸಂಖ್ಯಾ ಮುಸ್ಲೀಮರ ರೋಲ್ ಮಾಡೆಲ್ ಆಗಲು ಹವಣಿಸಿದ್ದ. ಆ ನಿಟ್ಟಿನಲ್ಲಿ ಅಲ್ಪಮಟ್ಟಿಗೆ ಯಶಸ್ವಿಯೂ ಆದ. ಸತ್ತವರಲ್ಲಿ ಮುಸ್ಲೀಮರೂ ಇದ್ದರೂ ಎಂಬ ವಾಸ್ತವ ಬೇಕಿರಲಿಲ್ಲ. ಯಾರು ಸತ್ತರೇನು..? ಭಾರತದ ನೆಲದಲ್ಲಿ ನೆತ್ತರು ಹರಿಯಬೇಕಷ್ಟೇ..! ರಿವೇಂಜ್ ಹೇಳಲು ಹೊರಟ ದಾವೂದ್, ಅನಾಮತ್ತಾಗಿ ಮುಂಬೈನಲ್ಲಿ ಬಾಂಬಿಟ್ಟುಬಿಟ್ಟಿದ್ದ.
ಅವತ್ತೇ `ಡಿ’ ಕಂಪನಿಯಿಂದ ಛೋಟಾ ರಾಜನ್ ಹಾಗೂ ಶರದ್ ಶೆಟ್ಟಿ ಹೊರಬಂದಿದ್ದರು. ಆಮೇಲೆ ಶರದ್ ಶೆಟ್ಟಿ, ಛೋಟಾ ರಾಜನ್ ದುಬೈನಲ್ಲಿ ಕುಂತು ಇಲ್ಲಿಗಲ್ ದಂಧೆಗಳನ್ನು ಪೋಷಿಸತೊಡಗಿದರು. ಭಾರತದ ಗುಪ್ತಚರ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡು, ದಾವೂದ್ ನಡೆಸುತ್ತಿದ್ದ ಅವ್ಯವಹಾರ, ಸ್ಕೆಚ್ಚು, ಡೀಲುಗಳ ಮಾಹಿತಿಯನ್ನು ಒದಗಿಸತೊಡಗಿದ್ದರು. ಇದರ ಪರಿಣಾಮ ಶರದ್ ಶೆಟ್ಟಿಯನ್ನು ದುಬೈನ ಗಾಲ್ಫ್ ಕ್ಲಬ್ ನಲ್ಲಿ ಶೂಟ್ ಮಾಡಿ ಕೊಲ್ಲಲಾಯಿತು. ದಾವೂದ್ ತನ್ನನ್ನೂ ಬಿಡಲ್ಲ ಅಂತ ಹೆದರಿದ ಛೋಟಾ ರಾಜನ್ ಅಲ್ಲಿಂದ ಬ್ಯಾಂಕಾಕ್ ಗೆ ಹೋದ. ಗೆಳೆಯ ರೋಹಿತ್ ವರ್ಮ ಅವನಿಗೆ ಆಶ್ರಯ ಕೊಟ್ಟ. ಆದರೆ ದಾವೂದ್ ಇದೇ ಶರದ್ ಶೆಟ್ಟಿಯ ಆಪ್ತ ವಿನೋದ್ ಶೆಟ್ಟಿಯನ್ನು ಬೆದರಿಸಿ ಛೋಟಾ ರಾಜನ್ ಅಡಗುದಾಣವನ್ನ ಪತ್ತೆ ಹಚ್ಚಿದ. ಅವನನ್ನು ಕೊಲ್ಲಲು ಛೋಟಾ ಶಕೀಲ್ ಮೂಲಕ ರಶೀದ್ ಮಲಬಾರಿಗೆ ಡೀಲ್ ಒಪ್ಪಿಸಿದ್ದ. ಇಸವಿ 2000ದಂದು ಬ್ಯಾಂಕಾಕ್ ನಲ್ಲಿ ನಡೆದ ಶೂಟೌಟ್ನಲ್ಲಿ ರೋಹಿತ್ ವರ್ಮ ಸತ್ತರೇ, ಗುಂಡೇಟು ತಿಂದ ರಾಜನ್ ತಪ್ಪಿಸಿಕೊಂಡಿದ್ದ.
ಹಾಗೆಯೇ ದಾವೂದ್ ಮೇಲೂ ಅನೇಕ ಅಟ್ಯಾಕ್ಗಳು ನಡೆದಿವೆ. ಆಗೆಲ್ಲಾ ಕೂದಲೆಳೆಯಲ್ಲಿ ಬಚಾವಾಗಿದ್ದಾನೆ. ಈ ಪಾಪಕೂಪದಲ್ಲಿ ತನ್ನ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾನೆ. ಅಪಾರ ಸ್ನೇಹಿತರು, ಶಿಷ್ಯರನ್ನು ಬೆಳೆಸಿದ್ದಾನೆ. ಕರಾಚಿಯಲ್ಲಿ ಅದೊಮ್ಮೆ ಚೋಟಾ ರಾಜನ್ ದಾವೂದ್ಗೆ ಸ್ಕೆಚ್ ಇಟ್ಟಿದ್ದ. ದಾವೂದ್ ಕರಾಚಿಯ ತನ್ನ ಅಡಗುದಾಣದ ಸಮೀಪವೇ ಇರುವ ದರ್ಗಾಕ್ಕೆ ಭೇಟಿ ಕೊಡುತ್ತಾನೆ ಎನ್ನುವುದು ಅಲ್ಲಿಗೆ ಹೋಗಿದ್ದ ಶಾರ್ಪ್ ಶೂಟರ್ಗಳ ತಂಡಕ್ಕೆ ಗೊತ್ತಿದ್ದ ವಿಚಾರ. ಹಂತಕರು ಬೇರೇನನ್ನು ಯೋಚಿಸಲು ಹೋಗಲಿಲ್ಲ. ಸ್ಪಾಟ್ ಫಿಕ್ಸ್ ಆಗಿತ್ತು. ಆಪರೇಷನ್ ಕರಾಚಿ, ದರ್ಗಾದಲ್ಲೇ ಸಮಾಪ್ತಿ ಆಗುವ ಸಿದ್ದತೆ ನಡೆದಿತ್ತು. ಹಂತಕರು ಸರ್ವಸನ್ನದ್ಧರಾಗಿ ದಾವೂದ್ನನ್ನು ಬಲಿಹಾಕಲು ಕಾದುಕುಂತರು. ಆದರೆ ಅಲ್ಲಿಗೆ ದಾವೂದ್ ಬರಲಿಲ್ಲ. ಅವತ್ತು ಮಾತ್ರವಲ್ಲ, ಮತ್ಯಾವತ್ತು ದಾವೂದ್ ಆ ದರ್ಗಾಕ್ಕೆ ಕಾಲಿಡಲಿಲ್ಲ. ಸಾವಿನ ವಾಸನೆ ಅದಾಗಲೇ ಅವನ ಮೂಗಿಗೆ ಬಡಿದಿತ್ತು, ಹುಷಾರಾಗಿದ್ದ..! ಬಹುಶಃ ಚೋಟಾ ರಾಜನ್ ಬದುಕಿರಬಾರದು ಎಂದು ದಾವೂದ್ ನಿರ್ಧರಿಸಿದ್ದು ಆಗಲೇ…!. ಆ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಮಾಡಿದ್ದ. ಈಗಲೂ ಮಾಡುತ್ತಿದ್ದಾನೆ. ಇವತ್ತು ಛೋಟಾ ರಾಜನ್ ಅರೆಸ್ಟ್ ಆಗಿ ಭಾರತದ ಜೈಲಿನಲ್ಲಿದ್ದಾನೆ. ಅವತ್ತು ಒಬ್ಬ ಲ್ಯಾಡೆನ್ ನನ್ನು ಪಾಕಿಸ್ತಾನಕ್ಕೆ ನುಗ್ಗಿ ಹತ್ಯೆಗೈದಿದ್ದ ಅಮೇರಿಕಾ, ದಾವೂದ್ ಬಗ್ಗೆ ಅಷ್ಟೇನೂ ಆಸ್ಥೆ ತೋರಿಸಲಿಲ್ಲ. ಭಾರತಕ್ಕೆ ಪಾಕಿಸ್ತಾನದ ಉಗ್ರಕೋಟೆಯನ್ನು ಭೇದಿಸಿ, ದಾವೂದ್ ನನ್ನು ಹಿಡಿಯೋ ಬಾಹ್ಯ ಶಕ್ತಿಯಿದ್ದರೂ, ನೈತಿಕವಾಗಿ ದುರ್ಬಲವಾಗಿತ್ತು.
ದಾವೂದ್, ಕೆಲ ವರ್ಷಗಳ ಹಿಂದೆ ತನ್ನ ಮಗಳನ್ನು ಪಾಕಿಸ್ತಾನದ ಕ್ರಿಕೆಟರ್ ಜಾವೇದ್ ಮಿಯಾಂದಾದ್ ಮಗನಿಗೆ ನಿಖಾ ಮಾಡಿಕೊಟ್ಟಿದ್ದ. ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ರನ್ನು ಭೇಟಿಯಾಗಿದ್ದನಂತೆ. ಅಷ್ಟೇ ಮತ್ಯಾವ ಸಮಾರಂಭದಲ್ಲಾಗಲೀ, ಕಾರ್ಯಕ್ರಮದಲ್ಲಾಗಲೀ, ದಾವೂದ್ ಹೆಸರೇ ಪ್ರಸ್ತಾಪವಾಗಲಿಲ್ಲ. ಆತ ಮತ್ತೆಲ್ಲೂ ಕಾಣಿಸಿಕೊಂಡೂ ಇಲ್ಲ. ಇದೀಗ ಅವನ ಹೊಸ ಫೋಟೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅದೇ ಫೋಟೋ ಸುತ್ತಾ ಚರ್ಚೆ, ವಿಮರ್ಶೆಗಳು ಶುರುವಾಗಿದೆ. ಈ ವಿಚಾರ ಇಷ್ಟಕ್ಕೆ ಸೀಮಿತವಾಗಿ ಮುಗಿದುಹೋಗುತ್ತದೆ. ಅವನನ್ನು ಹಿಡಿಯುತ್ತೇವೆ ಅಂತ ಭಾರತ ಸೀರಿಯಲ್ ಕಥೆಯನ್ನು ಯಥಾಪ್ರಕಾರ ಮುಂದುವರಿಸುತ್ತದೆ. ಡಾನ್ ಅದೆಲ್ಲೋ ಕುಂತು ನಿಗೂಢವಾಗಿ ಚಿದ್ವಿಲಾಸಗೈಯ್ಯುತ್ತಿರುತ್ತಾನೆ. ಇದು ಮುಗಿಯದ ವಿಚಾರ; ಲೀವ್ ಇಟ್..!
POPULAR STORIES :
ಐನೂರು ಮಹಿಳೆಯರ ಜೊತೆ ಮಲಗಿದ್ದಾನಂತೆ ಈ ವೆಸ್ಟ್ ಇಂಡೀಸ್ ಕ್ರಿಕೆಟರ್..!
ಗಾನಕೋಗಿಲೆಗೆ ಹುಟ್ಟುಹಬ್ಬದ ಸಂಭ್ರಮ ಆ ಹಾಡನ್ನು ಅವರಿಂದ ಮಾತ್ರ ಹಾಡಲು ಸಾಧ್ಯವಾಗಿತ್ತು..!!
`ಫೋರ್ಜರಿ ಕೇಸ್’, ನಟಿಗೆ ಮೂರು ವರ್ಷ ಜೈಲು..!
ಅಲ್ಟ್ರಾ ಮಾಡರ್ನ್ ಡ್ರೆಸ್ ಗೆ ನೋ ಎಂಟ್ರಿ, ತುಂಡುಡುಗೆ ಹಾಕಿಕೊಳ್ಳುವುದನ್ನ ಅಪರಾಧ ಎಂದು ಪರಿಗಣಿಸಲಾಗುತ್ತಂತೆ
ಬುಕ್ಕಿಗಳ ಫೇವರೆಟ್ ಟೀಮ್ ಯಾವುದು ಗೊತ್ತಾ..? ಈ ಬಾರಿಯ ಐಪಿಎಲ್ ಕಪ್ ಗೆಲ್ಲೋದು ಇದೇ ಟೀಮ್ ಅಂತೆ..!
`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!
ಯೇ ದೋಸ್ತಿ ಹಮ್ ನಹೀ ಚೋಡೆಂಗೆ – ಕಿಚ್ಚ ದಚ್ಚು ಬೆಸ್ಟ್ ಫ್ರೆಂಡ್ಸ್ ಫಾರ್ ಎವರ್