ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ವಿಭಿನ್ನ ರೀತಿಯ ಸಿನಿಮಾಗಳು ಸದ್ದು ಮಾಡ್ತಿವೆ..! ಸಿನಿಪ್ರಿಯರು ಹೊಸರೀತಿಯ ಸಿನಿಮಾಗಳನ್ನು ಗೆಲ್ಲಿಸುತ್ತಿದ್ದಾರೆ. ಇದೀಗ ಸ್ಯಾಂಡಲ್‍ವುಡ್‍ನಲ್ಲಿ ಇನ್ನೊಂದು ವಿಭಿನ್ನ ರೀತಿಯ ಸಿನಿಮಾ ತೆರೆಕಾಣಲು ಸಜ್ಜಾಗಿದೆ.. ‘ದಯವಿಟ್ಟು ಗಮನಿಸಿ’..!
ತೆರೆಕಾಣಲಿರುವ ಸಿನಿಮಾನಾ ಹೇಳು ಮಾರಾಯ..? ದಯವಿಟ್ಟು ಗಮನಿಸಿ ಅಂತ ನೀನೇಕೆ ಹೇಳ್ತೀಯಾ..? ಗಮನಿಸ್ತಿವೋ ಬಿಡ್ತೀವೋ ನಮ್ಗೆ ಬಿಟ್ಟಿದ್ದು, ಅದರ ಉಸಾಬರಿ ನಿನಗೇಕೋ ಅಂತಿದ್ದೀರಾ..? ಒಂದ್ ನಿಮಿಷ.. ನಾನು ಹೇಳೋದನ್ನ ಪೂರ್ಣ ಕೇಳಿ…ಸಾರಿ ಕಂಪ್ಲೀಟ್ ಓದಿ..!
ರಿಲೀಸ್‍ಗೆ ರೆಡಿಯಾಗಿರೂ ವಿಭಿನ್ನ ಮಾದರಿಯ, ಖಂಡಿತಾ ನಿಮ್ಗೆ ಇಷ್ಟವಾಗೋ ಸಿನಿಮಾದ ಹೆಸರೇ ‘ದಯವಿಟ್ಟು ಗಮನಸಿ’..! ಈಗಾಗಲೇ ನೀವು ಈ ಸಿನಿಮಾದ ಟ್ರೇಲರ್ ನೋಡಿರ್ಬಹುದು..! ತುಂಬಾ ನಿರೀಕ್ಷೆಯನ್ನು ಹುಟ್ಟುಹಾಕಿರೋ ಸಿನಿಮಾ ಇದು..!
ಆಟಗಾರ, ಆಕೆ ಸಿನಿಮಾಗಳಿಗೆ ಡೈಲಾಗ್ ಒಂದೆರಡು ಹಾಡು ಬರೆದಿದ್ದ ರೋಹಿತ್ ಪದಕಿ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ನಿರ್ದೇಶನದ ಮೊದಲ ಸಿನಿಮಾವಾಗಿದ್ದು ಕೃಷ್ಣ ಸಾರ್ಥಕ್ ಇದರ ನಿರ್ಮಾಪಕರು.
ರಘುಮುಖರ್ಜಿ, ಸಂಯುಕ್ತಾ ಹೊರನಾಡು, ಸಂಗೀತ ಭಟ್, ಪ್ರಕಾಶ್ ಬೆಳವಾಡಿ, ವಸಿಷ್ಠ, ರಾಜೇಶ್ ನಟರಂಗ, ಅವಿನಾಶ್, ಪೂರ್ಣಚಂದ್ರ ಮೈಸೂರು, ಸುಕೃತಾ ವಾಗ್ಲೆ, ಭಾವನ ರಾವ್ ಅಭಿನಯಿಸಿರೋ ಈ ಸಿನಿಮಾದ ಹಾಡೊಂದರಲ್ಲಿ ಮೇಘನಾ ರಾಜ್ ಕೂಡ ಹೆಜ್ಜೆ ಹಾಕಿದ್ದಾರೆ..
ಜಯಂತ್ ಕಾಯ್ಕಿಣಿ, ಚಿತ್ರದ ನಿರ್ದೇಶಕ ರೋಹಿತ್ ಪದಕಿ, ಅರಸು ಅಂತಾರೆ ಸಾಹಿತ್ಯವಿದ್ದು ಅನೂಪ್ ಸೀಳಿನ್ ಸಂಗೀತ ನಿರ್ದೇಶಿಸಿದ್ದಾರೆ.
ಇದೇ ಇಪ್ಪತ್ತಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಆಸ್ಟ್ರೇಲಿಯಾದಲ್ಲಿ ನಡೆದ ಪ್ರಿಮಿಯರ್‍ನಲ್ಲಿ ಒಳ್ಳೆಯ ರೆಸ್ಪಾನ್ಸ್ ಬಂದಿತ್ತು. 20ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, 19ಕ್ಕೆ ಪೈಡ್ ಪ್ರಿಮೀಯರ್ ಇದೆ ಎಂದು ರೋಹಿತ್ ಪದಕಿ ತಿಳಿಸಿದ್ದಾರೆ…ನೀವು ‘ದಯವಿಟ್ಟು ಗಮನಿಸಿ’ ಕನ್ನಡ ಸಿನಿಮಾಗಳನ್ನ ಗೆಲ್ಲಿಸಿ..