ಬಹುನಿರೀಕ್ಷಿತ ಪದ್ಮಾವತಿ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ವಿವಾದ ಬುಗಿಲೆದ್ದಿರುವ ಹಿನ್ನೆಲೆಯಲ್ಲಿ ಮುಂಜಾಗೃತಕ್ರಮವಾಗಿ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಅವರ ಕುಟುಂಬಕ್ಕೆ ಬೆಂಗಳೂರಲ್ಲಿ ಬಿಗಿ ಭದ್ರತೆವಹಿಸಲಾಗಿದೆ.
ಪದ್ಮಾವತಿ ಸಿನಿಮಾದಲ್ಲಿ ನಟಿಸಿರುವ ದೀಪಿಕಾ ಅವರ ಶಿರಚ್ಛೇದ ಮಾಡಿದ್ರೆ 10 ಕೋಟಿ ರೂ ಬಹುಮಾನ ನೀಡುವುದಾಗಿ ಹರಿಯಾಣದ ಬಿಜೆಪಿ ನಾಯಕ ಸೂರಜ್ ಪಾಲ್ ಅಮು ಘೋಷಿಸಿದ್ದಾರೆ. ಇವರ ಈ ಪ್ರೋಚದನಕಾರಿ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಸರ್ಕಾರ ಮುಂಜಾಗೃತ ಕ್ರಮವಾಗಿ ಬೆಂಗಳೂರಿನ ವುಡ್ಸ್ ವೇಲ್ ಅಪಾರ್ಟ್‍ಮೆಂಟ್ ಹಾಗೂ ಮಲ್ಲೇಶ್ವರಂನಲ್ಲಿರುವ ದೀಪಿಕಾ ಅವರ ಕುಟುಂಬಕ್ಕೆ ಭದ್ರತೆ ನೀಡಲಾಗಿದೆ.
ವುಡ್ಸ್ ವೇಲ್ ಅಪಾರ್ಟ್‍ಮೆಂಟ್‍ನಲ್ಲಿ ದೀಪಿಕಾ ಅವರ ತಂದೆ, ತಾಯಿ, ಸಹೋದರಿ ವಾಸವಿದ್ದಾರೆ. ಮಲ್ಲೇಶ್ವರಂನ 18ನೇ ಕ್ರಾಸ್‍ನಲ್ಲಿ ದೀಪಿಕಾ ಅವರ ಅಜ್ಜಿ ಮನೆಯಿದೆ.