ದೆಹಲಿಯ ಮಯೂರ ವಿಹಾರದಲ್ಲಿ ನಡೆದ ವಾಗ್ವಾದವು ಕೈ ಮಿಲಾಯಿಸುವ ಹಂತಕ್ಕೆ ಹೋಗಿ ರಜತ ಎಂಬ 15 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ರಜತ ಮತ್ತವನ ಇಬ್ಬರು ಸ್ನೇಹಿತರು ಟ್ಯೂಷನ್ ಮುಗಿಸಿಕೊಂಡು ಬೈಕ್‍ನಲ್ಲಿ ಬರುವಾಗ ಬೀಡಾ ಅಂಗಡಿಯ ಮಾಲೀಕ ಬೈಕ್‍ನ್ನು ನಿಲ್ಲಿಸಿ ಬೈದಿದ್ದಾರೆ. ಮತ್ತೋರ್ವ ಅಂಗಡಿಯ ಮಾಲೀಕ, ರಜತ ಕೆಲ ದಿನಗಳ ಹಿಂದೆ ಅಂಗಡಿಯಿಂದ ಕಳ್ಳತನ ಮಾಡಿದ್ದಾನೆ ಎಂದು ವಾಗ್ವಾದ ಮಾಡಿದರು.
ವಾಗ್ವಾದವು ಕೈ ಮಿಲಾಯಿಸುವ ಹಂತಕ್ಕೆ ಬಂದಾಗ, ರಜತನ ಸ್ನೇಹಿತರು ಅಲ್ಲಿಂದ ಓಡಿ ಹೋಗಿದ್ದಾರೆ. ಸಿಕ್ಕಿಬಿದ್ದ ರಜತ ಹೊಡೆತ ತಿಂದಿದ್ದಾನೆ. ಸ್ವಲ್ಪ ಹೊತ್ತಿನಲ್ಲೆ ರಜತ ಕುಸಿದು ಬಿದ್ದಿದ್ದಾನೆ. “ರಜತ ಮೌನವಾಗಿ ಬಿದ್ದಿದ್ದನ್ನು ನೋಡಿದ, ಅಂಗಡಿ ಮಾಲೀಕ ಆತನನ್ನು ಸನಿಹದ ಆಸ್ಪತ್ರೆಗೆ ತನ್ನ ಬೈಕ್‍ನಲ್ಲೇ ಕರೆದೊಯ್ದಿದ್ದಾನೆ.
ಸಿಸಿಟಿವಿ ಫೂಟೇಜ್‍ನ್ನು ಪೋಲಿಸರು ಸಂಗ್ರಹಿಸಿದ್ದಾರೆ. ಬೀಡಾ ಅಂಗಡಿಯವ ರಜತನನ್ನು ಬೆನ್ನಟ್ಟುತ್ತಿರುವುದು ಮತ್ತು ರಜತನನ್ನು ಬೈಕ್‍ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು ಸೆರೆಯಾಗಿದೆ. ಮೊದಲು ಕರೆದೊಯ್ದ ಆಸ್ಪತ್ರೆಯವರು ಜೀವಧಾರಕ ವ್ಯವಸ್ಥೆ ಅಲಭ್ಯತೆಯ ನೆಪವೊಡ್ಡಿ ರಜತನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.
ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವ ಸಮಯದಲ್ಲೇ ರಜತ ಮೃತಪಟ್ಟಿದ್ದು, ಎರಡನೇ ಆಸ್ಪತ್ರೆಯವರು ರಜತ ಮರಣಿಸಿದ್ದನ್ನು ಖಚಿತಪಡಿಸಿದ್ದಾರೆ. ಇದರಿಂದ ಹೆದರಿದ ಬೀಡಾ ಅಂಗಡಿಯವರು ರಜತ ಮೃತ ದೇಹವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರಾರಿಯಗಿದ್ದಾರೆ. ರಜತನ ಸ್ನೇಹಿತರು, ಅವನ ಮನೆಗೆ ತೆರಳಿ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದ ಸ್ಥಳೀಯರು ಘಟನೆಯನ್ನು ಪ್ರತಿಭಟಿಸಿ ಬೀಡಾ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ರಜತನ ವಿಷಯದಲ್ಲಿ ಪೊಲೀಸರ ನಿಷ್ಕ್ರಿಯತೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಮರಣೋತ್ತರ ಪರೀಕ್ಷಾ ವರದಿಯಿಂದ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.
POPULAR STORIES :
ಸೆಲ್ಫಿ ಹುಚ್ಚು ಹೆಚ್ಚಾಯ್ತು..! ಅತ್ಯಾಚಾರ ಸಂತ್ರಸ್ತೆ ಜೊತೆ ಸೆಲ್ಫಿ ತೆಗೆದುಕೊಂಡ್ಲು ಮಹಿಳಾ ಆಯೋಗದ ಸದಸ್ಸೆ..!
ಬಟ್ಟೆ ಕಳಚಿ ಬೆತ್ತಲಾದ್ರು ಆ ದೇಶದ ಜನ.. ಬೆತ್ತಲಾಗೇ ಮಾಡಿದ್ರು ಕಚೇರಿ ಕೆಲಸ ಯಾಕೆ ಗೊತ್ತಾ..?
ನಿರ್ದೇಶಕನ ಬೆವರಿಳಿಸಿದ ಜಗ್ಗುದಾದ.. ರಾಘವೇಂದ್ರ ಹೆಗಡೆ ಮೈ ಚಳಿ ಬಿಡಿಸಿದ ದರ್ಶನ್..!
ಜೈಲ್ ನಿಂದಲೇ IIT ಪರೀಕ್ಷೆ ಬರೆದು ಪಾಸಾದ ಈ ಹುಡುಗನ ಬಗ್ಗೆ ಗೊತ್ತೇ??
ಸತ್ತ ನಂತರವೂ ವ್ಯಕ್ತಿಗಳ ಜತೆ ಸಂವಹನ ನಡೆಸಿ!!
ವಿಮಾನದ ಮೆಟ್ಟಿಲಿನಿಂದ ಬಿದ್ದವಳು ಏನಾದಳು? ಹೆಂಗಿದ್ದ ಮಹಿಳೆ ಹೇಗಾದ್ಲು ಗೊತ್ತಾ?
ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ರಿಂಗಿಂಗ್ ಬೆಲ್ಸ್?
ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಯಲ್ಲಿ ಶೋಭ ಹಸ್ತಕ್ಷೇಪ ಇಲ್ವಂತೆ..!?