ಕಳೆದ ವರ್ಷ ಅಂದ್ರೆ 2016 ನವೆಂಬರ್ 8ರಂದು ಕೇಂದ್ರ ಸರ್ಕಾರ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಮಾಡಿರೋದ್ ಗೊತ್ತೇ ಇರುವ ವಿಷಯ..! ರದ್ದು ಮಾಡಿರೋ 500, 1000 ರೂ ಮುಖಬೆಲೆಯ ನೋಟುಗಳ ಬದಲಾಗಿ ಹೊಸ 500 ರೂ ಹಾಗೂ 2000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿರೋದ್ ಕೂಡ ಹಳೇ ಸಂಗತಿ.
ನಿಮ್ಗೆ ಗೊತ್ತಿರಬಹುದು, ಅಮಾನ್ಯವಾಗಿರೋ ನೋಟನ್ನು ಇಟ್ಟುಕೊಳ್ಳಬಾರದು. ಹೀಗೆ ಅಮಾನ್ಯಗೊಂಡಿರೋ ನೋಟಿಗೆ ಸಂಬಂಧಿಸಿದಂತೆ ವ್ಯಕ್ತಿಯೋರ್ವ ಪೊಲೀಸರ ಅತಿಥಿಯಾಗಿದ್ದಾನೆ..! ಅಷ್ಟೇ ಅಲ್ಲ ಕೋಟಿಗಟ್ಟಲೆ ಮೌಲ್ಯದ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಕಾಕಿನಾಡಲ್ಲಿ ಅಮಾನ್ಯಗೊಂಡಿರೋ 500 ರೂ ಹಾಗೂ 1000 ರೂ ಮುಖಬೆಲೆಯ 1.5 ಕೋಟಿ ಮೊತ್ತರ ನೋಟ್‍ಗಳನ್ನು ವಶಪಡಿಸಿಕೊಂಡಿರೋ ಪೊಲೀಸರು ಓರ್ವನನ್ನು ಅರೆಸ್ಟ್ ಮಾಡಿದ್ದಾರೆ.