ಬಿಗ್ ಬಾಸ್ ಸೀಸನ್ 6 ಮೊನ್ನೆಯಷ್ಟೇ ಮುಕ್ತಾಗೊಂಡಿದೆ. ಮನೆಯಿಂದ ಹೊರ ಬಂದ ಸ್ಪರ್ಧಿಗಳು ಈಗ ಸೆಲೆಬ್ರಿಟಿಗಳಾಗಿ ಮಿಂಚುತ್ತಿದ್ದಾರೆ. ಅದರಲ್ಲೂ ತಮ್ಮ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡ ಸ್ಪರ್ಧಿ ಅಂದ್ರೆ ಧನರಾಜ್. ಬಿಗ್ ಬಾಸ್ ಜಂಟಲ್ ಮನ್ ಎಂದೇ ಕರೆಸಿಕೊಂಡ ಧನರಾಜ್ ಈಗ ಹ್ಯಾಟ್ರಿಕ್ ಹೀರೋ ಫ್ರೆಂಡ್ ಆಗಿದ್ದಾರೆ.ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಕೆಲವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಅದರಲ್ಲೂ ಧನರಾಜ್ ಕೂಡ ಆಫರ್ ಬರುತ್ತಿವೆ, ಅದರಲ್ಲೂ ಶಿವಣ್ಣ ಅಭಿನಯದ ರುಸ್ತುಂ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೌದು, ಶಿವಣ್ಣನ ಸ್ನೇಹಿತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಧನರಾಜ್ ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಫ್ರೆಂಡ್ ಆಗಿ ಐ.ಎ.ಎಸ್ ಪಾತ್ರದಲ್ಲಿ ನಟಿಸ್ತಿದ್ದಾರಂತೆ. ಇಂದಿನಿಂದ ಚಿತ್ರದ ಚಿತ್ರದ ಶೂಟಿಂಗ್ ಆರಂಭವಾಗಿದೆ. ಇನ್ನೂ ಎರಡು ದಿನಗಳ ಕಾಲ ಬೆಂಗಳೂರಿನ ನಾಗರಬಾವಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಇನ್ನು ಈ ಚಿತ್ರವನ್ನ ಸಾಹಸ ನಿರ್ದೇಶಕ ರವಿವರ್ಮ ಫಸ್ಟ್ ಟೈಮ್ ಆ್ಯಕ್ಷನ್ ಕಟ್ ಹೇಳ್ತಿದ್ದು, ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ.