ಧನ್ವಂತರಿ ಜಯಂತಿ ಇನ್ನು ರಾಷ್ಟೀಯ ಆಯುರ್ವೇದ ದಿನ.

Date:

ಮನುಕುಲದ ಒಳಿತಿಗಾಗಿ, ದೈಹಿಕ, ಮಾನಸಿಕ ಹಾಗೂ ಮನುಷ್ಯನ ಸರ್ವತೋಮುಖ ಆರೋಗ್ಯದ ರಕ್ಷಣೆಗಾಗಿ ನಮ್ಮದೇ ನೆಲದಲ್ಲಿ ಹುಟ್ಟಿ ಬೆಳೆದ ವೈದ್ಯಕೀಯ ಪದ್ದತಿ ಆಯುರ್ವೇದ. ಆಯುರ್ವೇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಅನಾದಿಕಾಲದಿಂದಲೂ ಈ ವೈದ್ಯವಿಜ್ಗ್ನಾನ ಹರಿದು ಬಂದಿದೆ. ಭಾರತೀಯ ಸಂಸ್ಕೃತಿಯ ಮೂಲಬೇರೆ ಎಂದೆನಿಸಿರುವ ನಾಲ್ಕು ವೇದಗಳಲ್ಲಿ, ಅತರ್ವಣವೇದದ ಉಪವೇದ ಆಯುರ್ವೇದ.
ಭಾರತೀಯರ ವೈದ್ಯಪದ್ದತಿಯಾಗಿ, ಆಹಾರ, ಆಚಾರ. ಅರೋಗ್ಯದ ರಕ್ಷಣೆಗೆ ಸಿದ್ದಸೂತ್ರಗಳನ್ನು ತಿಳಿಸುವ ಆಯುರ್ವೇದವನ್ನು ಶ್ರೀ ಧನ್ವಂತರಿ ದೇವನು ಧರೆಗೆ ತಂದನು ಎನ್ನಲಾಗಿದೆ. ದೇವಾನು ದೇವತೆಗಳಿಗೆ ವೈದ್ಯನಾಗಿದ್ದು, ಭಗವನ್ ಧನ್ವಂತರಿಯನ್ನು ಆಯುರ್ವೇದದ ಪಿತಾಮಹ, ಆಯುರ್ವೇದದ ಅಧಿದೀವತೆ ಎಂದು ಪೂಜಿಸಲ್ಪಡುತ್ತದೆ.
ಪುರಾಣಗಳ ಪ್ರಕಾರ ಧನ್ವಂತರಿಯು ವಿಷ್ಣುವಿನ ಅವತಾರವಾಗಿದ್ದು, ಸುರ ಹಾಗು ಅಸುರರ ನಡುವೆ ನಡೆದ ಸಮುದ್ರಮಂಥನದ ಸಮಯದಲ್ಲಿ ಹಲವು ರೋಗಗಳಿಗೆ ಮುಕ್ತಿಪ್ರಾಯವಾದ ಔಷಧಿರೂಪಿ ಅಮೃತವನ್ನು ಪಿಡಿದು ಉದ್ಭವಿಸುತ್ತಾನೆ ಎನ್ನಲಾಗಿದೆ. ಶ್ಯಾಮವರ್ಣನಾದ ಧನ್ವಂತರಿಯು ನಾಲ್ಕು ಕೈಗಳನ್ನು ಹೊಂದಿದ್ದು, ಶಂಖ, ಚಕ್ರ, ಅಮೃತಕಳಶ ಹಾಗೂ ಒಂದು ಕೈಯಲ್ಲಿ ಜಿಗಿಣೆ (ಜಲೌಕ) ವನ್ನು ಪಿಡಿದಿದ್ದಾನೆ. ಇವನು ದೀರ್ಘಾಆಯು ಪ್ರದಾಯಕ ಮತ್ತು ಜಗತ್ತಿಗೆ ಜೀವಜ್ಯೋತಿಯಾದ ಆಯುರ್ವೇದವನ್ನು ನೀಡಿದಾತ ಎಂದು ಆರಾಧಿಸಲಾಗುತ್ತದೆ.
ಒಂದು ಅರ್ಥದ ಪ್ರಕಾರ ಧನು ಎಂದರೆ ದುಃಖ ಹಾಗು ಅರಿ ಎಂದರೆ ದುಃಖದ ಹಂತಕ, ನಮ್ಮೊಳಗಿನ ದುಃಖವನ್ನು ನಿವಾರಿಸುವವನು ಎಂದರ್ಥ, ಹಾಗಾಗಿ ರೋಗಿಗಳ ಶಾರೀರಿಕ ಮಾನಸಿಕ ದುಃಖವನ್ನು ನಿವಾರಿಸುವ ವೈ ದ್ಯನು ಧನ್ವಂತರಿ ಎನ್ನಲಾಗಿದೆ.
ಭಗವನ್ ಧನ್ವಂತರಿಯ ಹೊರತಾಗಿ ಪ್ರಮುಖವಾಗಿ ಇನ್ನು ಇಬ್ಬರು ಧನ್ವಂತರಿಯ ಉಲ್ಲೇಖ ಶಾಸ್ತ್ರದಲ್ಲಿ ಸಿಗುತ್ತದೆ. ಇಬ್ಬರು ಬೇರೆ ಬೇರೆ ಕಾಲಾವಧಿಯಲ್ಲಿ ಜೀವಿಸಿ ಆಯುರ್ವೇದವನ್ನು ಪ್ರವರ್ಧಸಿದ ವೈದ್ಯರು.
ಭಾಗವತ ಪುರಾಣ ದಲ್ಲಿ ಆದಿ ಧನ್ವಂತರಿಯ ಉಲ್ಲೇಖವಿದೆ. ಆದಿ ಧನ್ವಂತರಿಯು ಪುರೂರವ ರಾಜ್ಯದ ದೊರೆ ಧೀರ್ಘತಮನ ಮಗ ಎನ್ನಲಾಗಿದೆ, ಇವನು ವಿಷ್ಣುವಿನ ಅವತಾರವಾಗಿದ್ದು, ಆಯುರ್ವೇದದ ಪ್ರವರ್ತಕ ಎನ್ನಲಾಗಿದೆ. ಈತನು ಕಾಯಚಿಕಿತ್ಸಾ, ಬಾಲರೋಗ, ಗ್ರಹ ಚಿಕಿತ್ಸಾ, ಶಲ್ಯತಂತ್ರ, ಶಾಲಾಕ್ಯ ತಂತ್ರ, ವಿಷಚಿಕಿತ್ಸ, ಜರ ಹಾಗೂ ವಾಜೀಕರಣ ಎಂಬ ಎಂಟು ಪ್ರತ್ಯೇಕ ವಿಭಾಗಗಳನ್ನು ರಚಿಸಿದ ಎನ್ನಲಾಗಿದೆ.
ಮತ್ತೊಬ್ಬರು ಕಾಶಿರಾಜ ದಿವೂದಾಸ ಧನ್ವಂತರಿ, ಇವರು ಆಯುರ್ವೇದಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಹಲವಾರು ವೈಜ್ನಾನಿಕ ಹೊಸ ಪ್ರಯೋಗಗಳನ್ನು, ವೈದ್ಯಕೀಯ ವಿಧಾನಗಳನ್ನು ಅಳವಡಿಸಿ, ಆಯುರ್ವೇದ ಶಸ್ತ್ರಚಿಕಿತ್ಸೆಯ ಪಿತಾಮಹ ಸುಶ್ರುತನಿಗೆ ಹಲವು ವೈದ್ಯಕೀಯ ವಿಚಾರಧಾರೆಗಳನ್ನು, ವಿಧಿವಿಧಾನಗಳನ್ನು ತಿಳಿಸಿದ್ದ ಎಂದೂ ಗ್ರಂಥಗಳು ನಮಗೆ ತಿಳಿಸುತ್ತವೆ. ಅಲ್ಲದೇ ಶಲ್ಯ ಚಿಕಿತ್ಸೆಯನ್ನು ಶಲ್ಯತಂತ್ರ ಹಾಗೂ ಶಾಲಾಕ್ಯವೆಂದು ವಿಂಗಡಿಸಿ ಪ್ರತ್ಯೇಕ ಶಸ್ತ್ರಚಿಕಿತ್ಸಾ ಪರಂಪರೆಯಾದ “ ಧನ್ವಂತರಿ ಸಂಪ್ರದಾಯ” ಕ್ಕೆ ನಾಂದಿಯಾದರು. ಇವರ ಪ್ರವಚನವನ್ನು ಸುಶ್ರುತ ಸಂಹಿತೆಯಲ್ಲಿ ನಮೂದಿಸಲಾಗಿದೆ.
ಇದಲ್ಲದೆ ವಿಕ್ರಮಾಧಿತ್ಯನ ಆಸ್ಥಾನದಲ್ಲಿ ಶ್ರೀ ಧನ್ವಂತರಿ ವೈದ್ಯನ ಉಲ್ಲೇಖವಿದೆ. ವೈದ್ಯಕೀಯ ಕ್ಷೇತ್ರದಲ್ಲಿನ ಈತನ ಬುದ್ಧಿವಂತಿಕೆ ಮತ್ತು ಸಾಧನೆಗಳ ಮೆಚ್ಚುಗೆಯ ಫಲವಾಗಿ ಈತನನ್ನು ನವರತ್ನಗಳಲ್ಲಿ ಒಬ್ಬ ಎಂದು ಬಣ್ಣಿಸಲಾಗಿತ್ತು.
ಹೀಗೆ ವಿಷ್ಣುವಿನ ಅವತಾರವಾದ ಭಗವನ್ ಧನ್ವಂತರಿ ಅಲ್ಲದೇ ಧನ್ವಂತರಿ ಹೆಸರಿನ ಹಲವು ಪ್ರಖ್ಯಾತ ವೈದ್ಯರ ಹಾಗೂ ಆಯುರ್ವೇದ ಆಚಾರ್ಯರು ಬೇರೆ ಬೇರೆ ಕಾಲಾವಧಿಯಲ್ಲಿ ಜೀವಿಸಿದ್ದರೆನ್ನಲಾಗಿದ್ದು, ಅವರ ಕೊಡುಗೆಗಳನ್ನು ಹಲವು ಗ್ರಂಥಗಳಲ್ಲಿ ಕಾಣಬಹುದಾಗಿದೆ. ಅಲ್ಲದೇ ಪೂರ್ವದಲ್ಲಿ ಹಲವು ಪ್ರಖ್ಯಾತ ವೈದ್ಯರಿಗೆ ಅವರ ಸಾಧನೆಗಳನ್ನು ಗುರುತಿಸಿ “ಧನ್ವಂತರಿ” ಎಂಬ ಬಿರುದು ನಾಮಾಂಕಿತದಿಂದ ಗೌರವಸಲಾಗುತ್ತಿತ್ತು.
ಆದರೆ ಪ್ರಸ್ತುತ ವಿಷ್ಣುವಿನ ಅವತಾರ ಪುರುಷನಾದ ಭಗವನ್ ಧನ್ವಂತರಿಯ ಜನ್ಮದಿನವೆನ್ನು ಧನ್ವಂತರಿ ಜಯಂತಿ ಎಂದು ಆಚರಿಸಲಾಗುತ್ತದೆ. ಆಂತೆಯೇ ಭಾರತದೆಲ್ಲೆಡೆ ಎಲ್ಲ ವೈದ್ಯ ಸಮೂಹ ಮತ್ತು ಆರೋಗ್ಯಾಕಾಂಕ್ಷಿಗಳು ಭಗವನ್ ಧನ್ವಂತರಿಯನ್ನು ಪೂಜಿಸುತ್ತಾರೆ. ಕಾರ್ತಿಕ ಮಾಸದ ಹದಿಮೂರನೆ ದಿನ, ದೀಪಾವಳಿಯ ಎರಡು ದಿನಗಳ ಮುನ್ನಾದಿನ ಧನ್ವಂತರಿ ಜಯಂತಿಯನ್ನು ಆಚರಿಸಲಾಗುತ್ತದೆ. ಭಾರತದ ಬೇರೆ ಬೇರೆ ಭಾಗದಲ್ಲಿ ಈ ಹಬ್ಬವನ್ನು ದಾಂತೀರಸ್, ಧನ್ವಂತರಿ ತ್ರಯೋದಶಿ ಎಂದು ವಿವಿಧ ರೀತಿಯಾಗಿ ಆಚರಿಸಲಾಗುತ್ತದೆ. ಮುಸ್ಸಂಜೆ ವೇಳೆಗೆ ಮಣ್ಣಿನ ದೀಪವನ್ನು ಬಾಗಿಲಲ್ಲಿ ಹಚ್ಚುವ ಮೂಲಕ ಧನ್ವಂತರಿಯನ್ನು ಬರಮಾಡಿಕೊಳ್ಳಲಾಗುತ್ತದೆ, ಹಿಂದೂ ಸಂಪ್ರದಾಯದಂತೆ ಭಕ್ತಿ, ಪ್ರಾರ್ಥನೆಯನ್ನು ದೇವರಿಗೆ ಸಮರ್ಪಿಸಲಾಗುವುದು. ಉತ್ತಮ ಆರೋಗ್ಯ ನೀಡುವುದರೊಂದಿಗೆ ಅಕಾಲಿಕ ಮರಣವನ್ನು ದೂರ ಮಾಡುವನು ಎಂದು ನಂಬಲಾಗಿದೆ.
ಆಯುರ್ವೇದ ಜಗತ್ತಿಗೆ ಮಾತ್ರ ಸೀಮಿತವಾಗಿದ್ದ ಧನ್ವಂತರಿ ಜಯಂತಿ, ಭಾರತ ಸರ್ಕಾರದ ಆಯುಷ್ ಇಲಾಖೆಯು ಧನ್ವಂತರಿ ಜಯಂತಿಯ ದಿನವನ್ನು “ರಾಷ್ಟ್ರೀಯ ಆಯುರ್ವೇದ ದಿನ” ಎಂದು ಘೋಷಿಸಿ ಭಾರತದಾದ್ಯಂತ ಪ್ರತಿ ವರ್ಷ ಆಚರಿಸಲು ನಿರ್ಧರಿಸಿದೆ ಎಂಬುದು ಸಂತಸದ ಸುದ್ದಿ. ‘ಇದರ ಅಂಗವಾಗಿ ರಾಷ್ಟ್ರೀಯ ಆಯುರ್ವೇದ ದಿನಕ್ಕೆ ಸಂಬಂದಿಸಿದ ಲಾಂಛನವನ್ನು ಆಯುಷ್ ಇಲಾಖೆ ಹೊರತಂದಿದೆ. ಲಾಂಛನದ ಮಧ್ಯದಲ್ಲಿನ ಧನ್ವಂತರಿ ಮೂರ್ತಿಯು ಆಯುರ್ವೇದದ ದೇವರೆಂದು ಬಿಂಬಿಸುತ್ತದೆ. ಲಾಂಛನದ ಐದು ದಳಗಳು ಪಂಚಮಹಾಭೂತವನ್ನು, ಕೆಳಗಿನ ಮೂರು ಚಕ್ರಗಳು ಆಯುರ್ವೇದದ ಮೂಲಸಿದ್ದಾಂತವಾದ ವಾತ, ಪಿತ್ತ, ಕಫವನ್ನು ಸೂಚಿಸುತ್ತದೆ ಹಾಗೂ ಸುತ್ತುವರೆದ ಎಲೆಯು ನೈಸರ್ಗಿಕ ಚಿಕಿತ್ಸಾ ಸಾರವನ್ನು ಸೂಚಿಸುತ್ತದೆ. ಪ್ರಸಕ್ತ ವರ್ಷ ಅಕ್ಟೋಬರ 28 ರಂದು ಧನ್ವಂತರಿ ಜಯಂತಿ ಆಚರಿಸಲಾಗುವುದು ಇದರ ಅಂಗವಾಗಿ “ಮಧುಮೇಹ ರೋಗದ ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ”ಯನ್ನು ಈ ವರ್ಷದ ಆಚರಣೆಯ ಮುಖ್ಯ ಉದ್ದೇಶವಾಗಿದ್ದು, ಸಾರ್ವಜನಿಕರಿಗೆ ಚಿಕಿತ್ಸಾ ಶಿಬಿರ ಹಾಗೂ ಮಧುಮೇಹ ರೋಗದ ಜಾಗೃತಿ ಕಾರ್ಯಕ್ರಮಗಳನ್ನು, ಆಯುರ್ವೇದ ಚಿಕಿತ್ಸಾ ಪದ್ದತಿಗೆ ಸಂಬಂದಿಸಿದಂತೆ ಅರಿವಿನ ಕಾರ್ಯಕ್ರಮಗಳನ್ನು ಸರ್ಕಾರ ಹಾಗೂ ವೈದ್ಯರು ದೇಶಾದ್ಯಂತ ಹಮ್ಮಿಕೊಂಡಿದ್ದ್ದಾರ್ರೆ.
ಡಾ. ಮಹೇಶ್ ಶರ್ಮಾ. ಎಂ ಬೆಂಗಳೂರು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
9964022654

Like us on Facebook  The New India Times

POPULAR  STORIES :

ಭಾರತದ ಕಾಂಡೋಮ್ ಜಾಹೀರಾತಿಗೆ ಗೇಲ್, ಬ್ರಾವೋ ಸಖತ್ ಸ್ಟೆಪ್

ನಾಳೆ ಮುಕುಂದ ಮುರಾರಿಗೆ ಸಂತು ಸ್ಟ್ರೈಟ್ ಫಾರ್ವರ್ಡ್ ಚಾಲೆಂಜ್..!

ಧೋನಿಯ ಅದ್ಭುತ ರನ್ನೌಟ್ ವೀಡಿಯೋ ವೈರಲ್..!

ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್.. ದಕ್ಕಿದ್ದು ಮಿಸ್ಟರ್ ಏಷ್ಯಾ ಅವಾರ್ಡ್..!

ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?

ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...