ಅವರು ಡೆಹ್ರಾಡೂನ್‍ನ ಸೇನಾ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ರು. ಅದು 2009. ಅಂದ್ರೆ 7 ವರ್ಷದ ಹಿಂದೆ ಅಪಘಾತವೊಂದು ಸಂಭವಿಸುತ್ತೆ. ಆ ಅಪಘಾತದಲ್ಲಿ ಜೊತೆಗಿದ್ದ ಸಹಚರರು ಗಾಯಗೊಂಡು, ಚಿಕಿತ್ಸೆಪಡೆದು ಮತ್ತೆ ವೃತ್ತಿ ಜೀವನ ಮುಂದುವರೆಸ್ತಾರೆ! ಆದರೆ, ಅವರು ಮಾತ್ರ ಎಲ್ಲಿ ಹೋದ್ರು? ಏನಾದ್ರು? ಎನ್ನುವ ಸುಳಿವೇ ಸಿಗಲ್ಲ..!
ತಲೆಗೆ ಪೆಟ್ಟು ಬೀಳೋದಂತೆ, ಎಲ್ಲವನ್ನೂ ಮರೆಯೋದಂತೆ..! ಮತ್ತೆ ಅಂತಹದೇ ಅಪಘಾತದಲ್ಲಿ ಮತ್ತೊಮ್ಮೆ ಪೆಟ್ಟು ಬೀಳುವುದಂತೆ. ಆಗ, ನೆನಪು ಮರುಕಳುಹಿಸುವುದಂತೆ! ಇವೆಲ್ಲಾ ಬೇಕಾದಷ್ಟು ಸಿನಿಮಾಗಳಲ್ಲಿ ಬಂದಿವೆ, ಬರುತ್ತಲೇ ಇವೆ! ಆದರೆ, ಇಲ್ಲಿ ನಾನು ಹೇಳೋಕೆ ಹೊರಟಿರೋದು ಸಿನಿಮಾ ಕತೆಯಲ್ಲ..! ಇದು ಯೋಧ ಧರ್ಮವೀರ್ ಸಿಂಗ್ ರಿಯಲ್ ಸ್ಟೋರಿ..!
ಧರ್ಮವೀರ್ ಅವತ್ತು ಅಪಘಾತದಲ್ಲಿ ಏನಾದ್ರೂ? ನಂತರ ಎಲ್ಲೋದ್ರು ಅನ್ನುವುದು ಯಾರಿಗೂ ಗೊತ್ತಾಗ್ಲೇ ಇಲ್ಲ..! ಹುಡುಕಿ ಹುಡುಕಿ ಸುಸ್ತಾಗಿದ್ದು ಬಿಟ್ರೆ ಯೋಧನ ಕುರುಹು ಸಿಗಲಿಲ್ಲ..! ಮೂರು ವರ್ಷದ ಬಳಿಕ ನಿಯಮದಂತೆ ಯೋಧ ಧರ್ಮವೀರ್ ಸಿಂಗ್‍ರನ್ನು ಹುತಾತ್ಮ ಎಂದು ಘೋಷಿಸಿ, ಮರಣ ಪ್ರಮಾಣಪತ್ರವನ್ನು ನೀಡಿ, ಅವರ ಕುಟುಂಬಕ್ಕೆ ಮಾಸಿಕ ಪಿಂಚಣಿ ಸೌಲಭ್ಯವನ್ನು ಕಲ್ಪಿಸಲಾಯಿತು..!
ಆದ್ರೆ ಸಿಂಗ್ ಹೆಂಡತಿ ಮಾತ್ರ ಗಂಡನ ಬರುವಿಕೆಗೆ ಕಾದು ಕುಳಿತಿದ್ದರು..! “ನನ್ನ ಹೃದಯದ ಅಂತರಾಳದಲ್ಲಿ ಅವರನ್ನು ಮತ್ತೆ ನೋಡುತ್ತೇನೆಂಬ ನಂಬಿಕೆ’ ಇದೆ ಎಂದು ಅವರಿಗೆ ಏನೂ ಆಗದಿರಲೆಂದು ಉಪವಾಸ ವ್ರತವನ್ನು ಮಾಡ್ತಾ ಇದ್ರು ಪತ್ನಿ ಮನೋಜಾದೇವಿ.
ನಂಬ್ತಿರೋ ಬಿಡ್ತೀರೋ? ಆಕೆಯ ಮನಸ್ಸಿನ ಯೋಚನೆ ಸರಿಯಾಗಿಯೇ ಇತ್ತು, 7 ವರ್ಷದ ನಂತರ ಧರ್ಮವೀರ್ ಸಿಂಗ್ ಮನೆಗೆ ಬಂದಿದ್ದಾರೆ..! 2009ರಲ್ಲಿ ಏನಾಯ್ತು ಅಂತಾ ಗೊತ್ತೇ ಇಲ್ಲ ಅನ್ನುತ್ತಾರೆ ಸಿಂಗ್! ಆದರೆ, ಆ ಅಪಘಾತದ ಕ್ಷಣಬಿಟ್ಟು ಉಳಿದೆಲ್ಲದರ ನೆನಪಿರುವ ಇವರು, ಆ ನೆನಪುಗಳು ಮರುಕಳುಹಿಸಿದ ಬಳಿಕ ಮನೆದಾರಿ ಹಿಡಿದಿದ್ದಾರೆ! ಇವರಿಗೆ ಈ ನೆನಪಿನ ಶಕ್ತಿ ಮತ್ತೆ ಬರಲು ಕಾರಣ ಮತ್ತೊಂದು ಆ್ಯಕ್ಸಿಡೆಂಟ್!
ಹೌದು, 2009ರಲ್ಲಿ ಏನಾಯ್ತು ಎಂದು ಗೊತ್ತಿಲ್ಲ. ಆದರೆ, ಕಳೆದವಾರ ಹರಿದ್ವಾರದ ರಸ್ತೆಯಲ್ಲಿ ಭಿಕ್ಷೆ ಬೇಡ್ತಾ ಇದ್ದ ಅವನಿಗೆ ಬೈಕ್ ಬಂದು ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ಸವಾರನೇ ಅವನನ್ನು ಆಸ್ಪತ್ರೆಗೆ ಸೇರಿಸಿದ. ಪ್ರಜ್ಞೆ ಬಂದಾಗ ಹಳೆ ನೆನಪುಗಳು ಮತ್ತೆ ಬಂದವು ಎನ್ನುತ್ತಾರೆ ಸಿಂಗ್ ಸೋದರ, ಡಾಕ್ಟರ್ ರಾಮ್ ನಿವಾಸ್..!
ಹೀಗೆ ಹಳೆ ನೆನಪುಗಳು ಮರುಕಳುಹಿಸಿದ ಬಳಿಕ ದೆಹಲಿ ಸಮೀಪದ ಅಲ್ವಾರ್‍ನಲ್ಲಿನ ಮನೆದಾರಿ ಹಿಡಿದು ಬರ್ತಾರೆ ಧರ್ಮವೀರ್‍ಸಿಂಗ್.
ಮನೆಗೆ ಬಂದು ಸಿಂಗ್ ಬಾಗಿಲು ಬಡಿದಾಗ, ಅವರ ತಂದೆ ಸುಬೇದಾರ್ ಕೈಲಾಶ್ ಯಾದವ್ ಯಾರೋ ಕುಡುಕ ಬಂದಿದ್ದಾನೆಂದು ಬೈಯುತ್ತಾ, ಗದರಿಸುತ್ತಾ ಬಂದು ಬಾಗಿಲು ತೆಗೆಯುತ್ತಾರೆ..! ತೆಗೆದರೆ ಆಶ್ಚರ್ಯ ಕಾದಿರುತ್ತೆ, ಮಗನನ್ನು ನೋಡಿ ಶಾಕ್ ಜೊತೆ ಖುಷಿಯೂ ಆಗುತ್ತೆ..! ಕುಟುಂಬವರು ಸಂಸತದಿಂದ ಬರಮಾಡಿಕೊಳ್ತಾರೆ..! 7 ವರ್ಷದ ಬಳಿಕ ಧರ್ಂವೀರ್ ಸಿಂಗ್ ಅಪ್ಪ, ಹೆಂಡತಿ, ಇಬ್ಬರು ಮಕ್ಕಳು, ಸಹೋದರನನ್ನು ಸೇರಿದ್ದಾರೆ..!
ಧರ್ಮವೀರ್ ಸಿಂಗ್ ಹಾಗೂ ಕುಟುಂಬಕ್ಕೆ ಶುಭಹಾರೈಸೋಣ.
- ರಘು ಭಟ್
POPULAR STORIES :
ರಾಹುಲ್ ದ್ರಾವಿಡ್ ಕೊನೆ ಏಕದಿನ ಆಟವನ್ನು ನೋಡಿಲ್ವಾ? ಇಲ್ಲಿದೆ ದ್ರಾವಿಡ್ ಕೊನೆ ಪಂದ್ಯದ ಅದ್ಭುತ ಆಟ
ಮೂಢನಂಬಿಕೆ ಆಚರಣೆ ಕಾಯಿದೆ ಜಾರಿಗೆ ಬರುವುದೇ..?
ಸ್ನೇಹ ಸಂಪತ್ತು… ಫ್ರೆಂಡ್ಶಿಪ್ ಅಂದ್ರೆ ಅದೆಂಥಾ ತ್ಯಾಗ..!
ಪರೀಕ್ಷೆಯಲ್ಲಿ ಏನೂ ಬರೀದೇನೆ 100/100 ಅಂಕ..! 12ನೇ ತರಗತಿಯ ವಿದ್ಯಾರ್ಥಿ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ..?
ಚೀನಾದಲ್ಲಿ ಬೆತ್ತಲೆ ಚಿತ್ರ ಕೊಟ್ರೆ ಲೋನ್ ಕೊಡ್ತಾರೆ..! ಮಹಿಳೆಯರ ನಗ್ನ ಚಿತ್ರವೇ ಲೋನ್‍ಗೆ ಶೂರಿಟಿ…!
ಬೊಕ್ಕುತಲೆ ಕಸಿ, ವಿಗ್ ಜೋಡಣೆ ಚಟುವಟಿಕಿಗೆ ಬ್ರೇಕ್ : ಯು.ಟಿ ಖಾದರ್
ಜ್ಯೇಷ್ಟಮಧುವೆಂಬ ಶ್ರೇಷ್ಟ ಔಷಧಿ | ಅಸಿಡಿಟಿ, ಹೊಟ್ಟೆ ಉರಿ ಅಥವಾ ಜಠರದ ಹುಣ್ಣಿನಲ್ಲಿ ಇದು ಶಮನಕಾರಿ