ದರ್ಭೆ ಎಂಬ ಪವಿತ್ರ ಹುಲ್ಲನ್ನು ದರ್ಭ,ದರ್ಭೆ ಅಥವಾ ದರ್ಭಂ ಎಂದೂ ಕರೆಯಲಾಗುತ್ತದೆ.ಇದರ ಹಿಂದಿ ಹಾಗೂ ಸಂಸ್ಕೃತ ಹೆಸರು ಕುಶ ಎಂಬುದಾಗಿದ್ದು ಇದರ ಸಸ್ಯ ಶಾಸ್ತ್ರೀಯ (Botanical name) ಹೆಸರು ಎರಾಗ್ರೋಸ್ಟಿಸ್ ಸೈನೋಸುರೋಯಿಡ್ಸ್(Eragrostis cynosuroides) ಹಾಗೂ ಆಂಗ್ಲ ಭಾಷೆಯಲ್ಲಿ ಇದನ್ನು ಬಿಗ್ ಕೋರ್ಡ್ ಗ್ರಾಸ್,ಪೆರೆನಿಯಲ್ ಗ್ರಾಸ್,ಹಾಲ್ಫಾ ಗ್ರಾಸ್ ಅಂತನೂ ಕರೆಯಲಾಗುತ್ತದೆ.ಇದನ್ನು ಅನಾದಿ ಕಾಲದಿಂದಲೂ ಬ್ರಾಹ್ಮಣ ಸಮುದಾಯದಲ್ಲಿ ಯಾಕೆ ಉಪಯೋಗಿಸಲಾಗುತ್ತದೆ ಅನ್ನೋದನ್ನು ನೋಡೋಣವೇ?
ದರ್ಭೆಯನ್ನು ವೇದಗಳ ಕಾಲದಿಂದಲೂ ದೇವರ ಆಸನ ಗ್ರಹಣಕ್ಕೆ ಮುನ್ನ ಆ ಜಾಗದಲ್ಲಿ ಇರಿಸಲಾಗುತ್ತಿತ್ತು.ಸ್ವಯಂ ಶ್ರೀ ಕೃಷ್ಣ ಪರಮಾತ್ಮನಿಂದ ಭಗವದ್ಗೀತೆಯಲ್ಲಿ ದರ್ಭೆಯನ್ನು ಧ್ಯಾನಾಸನಗಳ ಭಾಗವಾಗಿದೆ ಎಂದು ಉಪದೇಶಿಸಲಾಗಿದೆ.ಧ್ಯಾನದ ಸಮಯದಲ್ಲಿ ನಮ್ಮ ಶರೀರದಿಂದ ಮುಖ್ಯವಾಗಿ ಕಾಲು ಹಾಗೂ ಕಾಲಿನ ಬೆರಳಿನಂದ ಹೊರಹೋಗುವ ಶಕ್ತಿಯನ್ನು ತಡೆಗಟ್ಟುವುದರಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ.ಹೋಮ ಹವನಾದಿಗಳಲ್ಲಿ ದರ್ಭೆಯನ್ನು ಹೋಮ ಕುಂಡದ ಸುತ್ತಲೂ 4 ಬದಿಯಲ್ಲೂ ಹಾಕಲಾಗುವುದು ಇದನ್ನು ಪರಿಸ್ಥರಣ ಅನ್ನುತ್ತಾರೆ.ಅಂದರೆ ಇದು ದೇವರ ಆಸನವಾಗಿದೆ.ಬುದ್ದಾವತಾರದಲ್ಲಿ ಗೌತಮ ಬುದ್ದನು ತಾನು ಬೋಧಿ ವೃಕ್ಷದ ಕೆಳಗೆ ಧ್ಯಾನಾಸಕ್ತನಾಗಿದ್ದಾಗ ತಾನು ಕುಳಿತಿರೋ ಆಸನದ ಜಾಗದಲ್ಲಿ ಈ ದರ್ಭೆಯನ್ನು ಹಾಕಲಾಗಿತ್ತು ಎಂದೂ ಕೆಲವು ಪುರಾವೆಗಳು ತಿಳಿಸುತ್ತವೆ,ಆ ಬೋಧಿ ವೃಕ್ಷದ ಕೆಳಗೆ ಅವನಿಗೆ ಜ್ನಾನೋದಯವಾಯಿತು.ಪುರಾಣದ ಇನ್ನೊಂದು ಕಥೆಯನ್ನು ನೋಡಿದಾಗ ಹಿಂದೆ ಸಮುದ್ರ ಮಥನದ ಸಂದರ್ಭದಲ್ಲಿ ಮಹಾವಿಷ್ಣು ಮಂದರ ಪರ್ವತಕ್ಕೆ ಆಸರೆಯಾಗಲು ಕೂರ್ಮಾವತಾರ ತಾಳಿದಾಗ ಆಮೆಯ ಮೈಯ ಕೆಲವು ರೋಮಗಳು ಮಂಥನದ ಘರ್ಷಣೆಯಿಂದ ಉದುರಿ ಸಮುದ್ರದಲ್ಲಿ ಬೀಳುತ್ತವಂತೆ.ಇವುಗಳೇ ಕ್ರಮೇಣ ಕುಶ ಆಗಿ ಕರೆಯಲ್ಪಡುತ್ತವೆ
ದರ್ಭೆಯನ್ನು ಪೂಜಾ ಕರ್ಮಾದಿಗಳನ್ನು ಮಾಡುವ ಪುರುಷನು ತನ್ನ ಬಲಕೈ ಯ ಉಂಗುರದ ಬೆರಳಿಗೆ ಧರಿಸುತ್ತಾನೆ.ಅಶುಭ ಸಂದರ್ಭಗಳಾದ ಸಾವು ಮೊದಲಾದ ಸಂದರ್ಭಗಳಲ್ಲಿ ಒಂದೇ ಎಳೆಯ ದರ್ಭೆಯನ್ನೂ,ನಿತ್ಯ ಪೂಜೆ ಹಾಗೂ ಶುಭ ಸಂದರ್ಭಗಳಲ್ಲಿ ಎರಡು ಎಳೆಯ ದರ್ಭೆಯನ್ನೂ,ಅಮಾವಾಸ್ಯೆ ಹಾಗೂ ಶ್ರಾದ್ಧ ಕರ್ಮಾದಿಗಳಲ್ಲಿ 3 ಎಳೆಯ ದರ್ಭೆಯನ್ನೂ ಮತ್ತೂ ದೇವಸ್ಥಾನಗಳಲ್ಲಿ ಮಾಡಲಾಗುವ ಪ್ರಾರ್ಥನೆ ಪೂಜೆಗಳಲ್ಲಿ 4 ಎಳೆಯ ದರ್ಭೆಯನ್ನೂ ಪವಿತ್ರವಾಗಿ ನಮ್ಮ ಬಲಗೈ ಉಂಗುರದ ಬೆರಳಲ್ಲಿ ಧರಿಸಲಾಗುತ್ತದೆ.
ಮನೆಯಲ್ಲಿ ನಾವು ಮಾಡುವ ಯಾವುದೇ ಕಾರ್ಯಕ್ರಮದ ಮೊದಲಿಗೆ “ಪುಣ್ಯಾಹವಾಚನ”ಎಂಬುದಾಗಿ ಮಾಡುತ್ತಾರೆ;ಅಂದರೆ ಕಾರ್ಯಕ್ರಮ ನಡೆಯುವ ಜಾಗದ ಶುದ್ದೀಕರಣ.ಇಲ್ಲಿ ದರ್ಭೆಯ ಒಂದು ಗೊಂಚಲನ್ನು ಹಿಡಿದು ಅದರ ತುದಿಯಿಂದ ಎಲ್ಲ ಪೂಜಾ ಸಾಮಗ್ರಿಗಳ ಮೇಲೂ,ಆ ಜಾಗದ ಪ್ರತೀ ಮೂಲೆಗಳಲ್ಲೂ,ಹಾಗೂ ಅಲ್ಲಿರುವವರ ಮೇಲೂ ನೀರನ್ನು ಪ್ರೋಕ್ಷಣೆ ಮಾಡಲಾಗುತ್ತದೆ.ದರ್ಭೆಯ ತುದಿಯಲ್ಲಿ ಧ್ವನಿ ಸಂವೇದನಾ ಕಂಪನಗಳನ್ನುಂಟು ಮಾಡುವ ಶಕ್ತಿಯು ಇದೆ ಎಂದು ಹೇಳಲಾಗುತ್ತದೆ.ದರ್ಭೆಯಲ್ಲಿರುವ ಕಂಪನಾ ಶಕ್ತಿಯನ್ನು ಪಾತ್ರದಲ್ಲಿರುವ ನೀರು ಹೀರಿಕೊಳ್ಳುತ್ತದೆ.ಈ ನೀರು ಎಲ್ಲೆಲ್ಲಿ ಪ್ರೋಕ್ಷಣೆಯಾಗುತ್ತೋ ಅಲ್ಲಲ್ಲಿ ಶಕ್ತಿಯ ಸಂಚಲನ ಉಂಟಾಗುತ್ತದೆ ಎಂದು ಅದಕ್ಕಾಗಿ ಅನಾದಿ ಕಾಲದಿಂದಲೂ ನಮ್ಮ ಹಿಂದೂ ಧರ್ಮದಲ್ಲಿ ಈ ಸಂಪ್ರದಾಯವು ನಡೆದುಕೊಂಡು ಬರುತ್ತಿದೆ.ಹೀಗಾಗಿ ತುದಿಗಳಿಲ್ಲದ ದರ್ಭೆಯನ್ನು ಉಪಯೋಗಿಸುವಂತಿಲ್ಲ,ಯಾಕಂದ್ರೆ ಇದರಲ್ಲಿ ಪ್ರವಹನಾ ಶಕ್ತಿಯು ನಷ್ಟವಾಗಿರುತ್ತದೆ.
ಧಾರ್ಮಿಕ ಪರಂಪರೆಯ ಪ್ರಕಾರ ದರ್ಭೆಯನ್ನು ಎಲ್ಲ ದಿನಗಳಲ್ಲೂ ಕೀಳುವಂತಿಲ್ಲ ಹಾಗೂ ತುಂಡರಿಸುವಂತಿಲ್ಲ.ಇದನ್ನು ಕೇವಲ ಹುಣ್ಣಿಮೆಯ ಮರುದಿನ ಬರುವ ಕೃಷ್ಣ ಪಕ್ಷದ ಪಾಡ್ಯದಂದು ಮಾತ್ರ ಕೀಳಲಾಗುತ್ತದೆ.
ಕೆಲವೊಂದು ಸಂಶೋಧನೆ ಯಿಂದ ಈ ದರ್ಭೆಯನ್ನು ಅಂಗೈಯಲ್ಲಿಟ್ಟು ಎಕ್ಸ್ ರೇ ಸಹಾಯದೊಂದಿಗೆ ಪರೀಕ್ಷಿಸಿದಾಗ ಇದು ಎಕ್ಸ್ ರೇಯ 60% ಕಿರಣವನ್ನು ಹೀರಿಕೊಳ್ಳುತ್ತದೆ ಎಂದು ತಿಳಿದುಬಂತು.ಇಂತಹ ಪ್ರಭಾವಶಾಲಿ ಎಕ್ಸ್ ರೇ ಕಿರಣಗಳನ್ನೆ ಈ ದರ್ಭೆಯು ಹೀರಿಕೊಳ್ಳುವಾಗ ಪ್ರಕೃತಿಯಲ್ಲಿನ ಕೆಟ್ಟ ನಕಾರತ್ಮಕ ವ್ಯಾಧಿಗ್ರಸ್ಥ ಕಿರಣಗಳನ್ನು ಇವು ಹೀರಲಾರವೆ?
ಅನೇಕ ವರುಷಗಳಿಂದಲೂ ಮನೆಯ ಹಿರಿಯರು ಚಂದ್ರ ಹಾಗೂ ಸೂರ್ಯ ಗ್ರಹಣ ದ ಸಂದರ್ಭದಲ್ಲಿ ಗ್ರಹಣ ದಿಂದ ಬರುವ ಅಲ್ಟ್ರ ವೈಲೆಟ್ ಕಿರಣಗಳಿಂದ ನೀರು ಹಾಗೂ ಆಹಾರ ಸಾಮಾಗ್ರಿಗಳನ್ನುರಕ್ಷಿಸಲು ಇವುಗಳ ಮೇಲೆ ಈ ದರ್ಭೆಯನ್ನು ಇಡುತ್ತಿದ್ದರು.ಇಂದಿಗೂ ಈ ಪ್ರತೀತಿ ಜ್ಯಾರಿಯಲ್ಲಿದೆ.
ಅಯುರ್ವೇದದಲ್ಲಿ ಇದಕ್ಕೆ ತನ್ನದೇ ಆದ ಮಹತ್ವ ಇದೆ.ಅನೇಕ ಸಂದರ್ಭಗಳಲ್ಲಿ ವಿಶೇಷವಾಗಿ ಭೇದಿ,ಋತುಸ್ರಾವ ಹಾಗೂ ಮೂತ್ರ ಸಂಬಂಧಿ ದೋಷ ಮೊದಲಾದವುಗಳಲ್ಲಿ ಇವು ಚಿಕಿತ್ಸಾತ್ಮಕ ಶಕ್ತಿಯಾಗಿಯೂ ಪರಿಣಮಿಸುತ್ತದೆ.
ಇವತ್ತಿನ ವಿಜ್ನಾನಿಗಳಿಗಿಂತ ಅಂದಿನ ಋಷಿ ಮುನಿಗಳು ಅಪಾರ ಜ್ನಾನ ಉಳ್ಳವರಾಗಿದ್ದರು.ಹಿಂದಿನ ಮಹಾಮುನಿಗಳ ಸಂಶೊಧನೆಯನ್ನು ತಿಳಿಯಲು ಇಂದಿನ ವಿಜ್ನಾನಿಗಳು ಇನ್ನೂ ಹರ ಸಾಹಸ ಪಡುತ್ತಿದ್ದಾರೆ.
- ಸ್ವರ್ಣಲತ ಭಟ್
POPULAR STORIES :
`ರೋಬೋಫೀಲಿಯಾ’ ಇದು `ಫ್ಯೂಚರ್ ಆಫ್ ಸೆಕ್ಸ್’
ಗೀತಾ ಟಂಡನ್ ಖತರ್ನಾಕ್ ಸ್ಟಂಟ್ ಮಹಿಳೆಯ ಕಥೆ..!
ಮಿನಿಸ್ಟರ್ ಗಿರಿ ಬಿಟ್ಟುಕೊಡ್ತಾರಂತೆ ಅಂಬಿ… ಆದ್ರೆ ಕಂಡೀಷನ್ಸ್ ಅಪ್ಲೈ…!!
ಸಿಂಹದೊಂದಿಗೆ ಪೋಸ್ ಕೊಟ್ಟ ಜಡೇಜಾ ದಂಪತಿಗೆ ಸಂಕಷ್ಟ..!
7ವರ್ಷದ ಹಿಂದೆ ಆ್ಯಕ್ಸಿಡೆಂಟ್, 3ವರ್ಷದ ಹಿಂದೆ ಹುತಾತ್ಮ, ಈಗ? ಸಿನಿಮಾ ಸ್ಟೋರಿ ಅಲ್ಲ, ಯೋಧನ ರಿಯಲ್‍ಸ್ಟೋರಿ..!
ರಾಹುಲ್ ದ್ರಾವಿಡ್ ಕೊನೆ ಏಕದಿನ ಆಟವನ್ನು ನೋಡಿಲ್ವಾ? ಇಲ್ಲಿದೆ ದ್ರಾವಿಡ್ ಕೊನೆ ಪಂದ್ಯದ ಅದ್ಭುತ ಆಟ
ಮೂಢನಂಬಿಕೆ ಆಚರಣೆ ಕಾಯಿದೆ ಜಾರಿಗೆ ಬರುವುದೇ..?
ಸ್ನೇಹ ಸಂಪತ್ತು… ಫ್ರೆಂಡ್ಶಿಪ್ ಅಂದ್ರೆ ಅದೆಂಥಾ ತ್ಯಾಗ..!
ಪರೀಕ್ಷೆಯಲ್ಲಿ ಏನೂ ಬರೀದೇನೆ 100/100 ಅಂಕ..! 12ನೇ ತರಗತಿಯ ವಿದ್ಯಾರ್ಥಿ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ..?