ರಾಂಚಿ : ಇಂದು ರಾತ್ರಿ 7 ಗಂಟೆಗೆ ಅತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವೆ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಬೇಕಿದ್ದು, ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಆತಂಕವಿದೆ.
ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಟಿ-20 ಪಂದ್ಯವನ್ನು ಗೆಲ್ಲುವ ಮುಖೇನ ಗೆಲುವಿನ ನಾಗಲೋಟವನ್ನು ಮುಂದುವರೆಸುವ ಆತ್ಮವಿಶ್ವಾಸದಲ್ಲಿ ವಿರಾಟ್ ಕೋಹ್ಲಿ ನೇತೃತ್ವದ ಟೀಂ ಇಂಡಿಯಾವಿದೆ. ಇನ್ನೊಂದು ಸ್ಟೀವ್ ಸ್ಮಿತ್ ಮುಂದಾಳತ್ವದ ಕಾಂಗರೂ ಪಡೆ ಏಕದಿನ ಸರಣಿಯಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಹೀಗೆ ಭಾರತ ಮತ್ತು ಆಸೀಸ್ ಆಟಗಾರರು ಗೆಲುವಿಗಾಗಿ ಎದುರುನೋಡುತ್ತಿದ್ದರೆ, ರಾಂಚಿ ಕ್ರಿಕೆಟ್ ಪ್ರೇಮಿಗಳು ಮಾತ್ರ ಮಾಜಿ ನಾಯಕ, ತಮ್ಮ ಮನೆಮಗ ಮಹೇಂದ್ರ ಸಿಂಗ್ ಧೋನಿ ಅವರ ಆಟವನ್ನು ಕಣ್ತುಂಬಿಕೊಳ್ಳಲು ಕಾಯ್ತಾ ಇದ್ದಾರೆ.
ಆದರೆ, ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಇದರಿಂದ ಧೋನಿ ಆಟಕ್ಕೆ ಕಾದಿರುವ ಅಭಿಮಾನಿಗಳಿಗೆ ನಿರಾಸೆ ಆಗಬಹುದು ಎಂದು ಹೇಳಲಾಗ್ತಾ ಇದೆ.