ಡಯಾಬಿಟೀಸ್ ನಿಂದ ಶಾಶ್ವತ ಪರಿಹಾರ ಬೇಕೆ.?

Date:

ನಾವು ಸೇವಿಸುವ ಆಹಾರದಲ್ಲಿರೋ ಸಕ್ಕರೆಯ ಅಂಶವು ಗ್ಲೂಕೋಸ್ ಆಗಿ ಪರಿವರ್ತನೆಯಾಗಿ, ಅಲ್ಲಿಂದ ದೇಹದ ಶಕ್ತಿಯ ಉತ್ಪಾದನೆಗಾಗಿ ರಕ್ತಕ್ಕೆ ಸೇರಲ್ಪಡುತ್ತದೆ ಈ ರಕ್ತಕ್ಕೆ ಸೇರಿಸುವ ಕೆಲಸವನ್ನು ಮಾಡಲು ಇನ್ಸುಲಿನ್ ಎಂಬ ಒಂದು ಮುಖ್ಯವಾದ ಹಾರ್ಮೋನಿಂದ ಮಾತ್ರವೇ ಸಾಧ್ಯ. ದೇಹದಲ್ಲಿರೋ ಪಾಂಕ್ರಿಯಾಸ್ ಗ್ರಂಥಿಯು ಸ್ರವಿರುವ ಇನ್ಸುಲಿನ್ ಹಾರ್ಮೋನಿನ ಮಟ್ಟದಲ್ಲಿ ಕುಸಿತವಾಗುವುದೇ ಈ ಡಯಾಬಿಟೀಸ್ ರೋಗಕ್ಕೆ ಮೂಲ ಕಾರಣ. ಡಯಾಬಿಟೀಸ್ ನಲ್ಲಿ ಟೈಪ್ I ಹಾಗೂ ಟೈಪ್ II ಎಂಬ ಎರಡು ವಿಧಗಳಿವೆ. ಟೈಪ್ I ನಲ್ಲಿ ಇನ್ಸುಲಿನ್ ಹಾರ್ಮೋನ್ ಉತ್ಪಾದನೆಯಾಗುವುದೇ ಇಲ್ಲ, ಇದು ಸಾಮಾನ್ಯವಾಗಿ ಹುಟ್ಟಿದ ನವಜಾತ ಮಕ್ಕಳಿಂದ ಹದಿಹರೆಯದವರಿಗೂ ಬರುತ್ತದೆ, ಕೆಲವೊಮ್ಮೆ ಜೆನಿಟಿಕ್ ಆಗಿರುತ್ತದೆ; ಆದರೆ ಟೈಪ್ II ಡಯಾಬಿಟೀಸ್ ನಲ್ಲಿ ನಿಮ್ಮ ಗ್ರಂಧಿಯು ಸ್ರವಿಸುವ ಇನ್ಸುಲಿನ್ ಮಟ್ಟ ಕಡಿಮೆಯಿದ್ದು, ಗ್ಲೋಕೋಸ್ ನ ಶಕ್ತಿಯಾಗಿ ಬದಲಾಯಿಸುವಲ್ಲಿ ಇದು ಅಸಮರ್ಥವಾಗುತ್ತದೆ
ಡಯಾಬಿಟೀಸ್ ಅಂದರೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ‍ಯು ಭಯಂಕರ ರೋಗ, ಇದರಿಂದ ಮುಕ್ತಿಯೇ ಇಲ್ಲ ಎಂಬ ಭಾವನೆ ಇಂದಿಗೂ ಹಲವರಲ್ಲಿದೆ, ಆದರೆ ಇದು ಶುದ್ದ ಸುಳ್ಳ…ಆರಂಭದಲ್ಲೇ ಇದಕ್ಕೆ ಬೇಕಾದ ಔಷಧೋಪಚಾರಗಳನ್ನು ಮಾಡಿ ವ್ಯವಸ್ಥಿತವಾದ ಆಹಾರಕ್ರಮ ಹಾಗೂ ಜೀವನ ಶೈಲಿಯನ್ನು ಪಾಲಿಸಿದಲ್ಲಿ, ಸಕ್ಕರೆ ಕಾಯಿಲೆಯನ್ನು ಬುಡ ಸಮೇತ ಕಿತ್ತೆಸೆಯಬಹುದು. ಅದಕ್ಕೆ ನೀವು ಮಾಡಬೇಕಾಗಿರುವೇನೆಂದು ಗೊತ್ತೇ..?
ಮೊದಲಿಗೆ ಸಕ್ಕರೆ ಕಾಯಿಲೆ ಇದೆ ಎಂದು ತಿಳಿದಾಗ ನಿಮ್ಮ ದೇಹದಲ್ಲಿರೋ ಸಕ್ಕರೆಯ ಪರಿಮಾಣವನ್ನು ಅಳೆಯಲು ಈಗ ಆಕ್ಯೂಚೆಕ್, ಒನ್ ಟಚ್, ಸ್ಮಾರ್ಟ್ ಕೇರ್ ಹೀಗೆ ಅನೇಕ ವಿಧದ ಗ್ಲುಕೋಮೀಟರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮ್ಮ ದೇಹದ ಸಕ್ಕರೆಯ ಮಟ್ಟ ರಾಂಡಂ ಚೆಕ್(ಸರಾಸರಿ)ಮೂಲಕವೂ, ಆಹಾರದ ಮೊದಲು ಹಾಗೂ ಆಹಾರ ಸೇವಿಸಿದ ಎರಡು ಘಂಟೆಯ ಅವಧಿಯಲ್ಲೂ ಮಾಡಿತಿಳಿಯಬಹುದು. ರಾಂಡಂ ಚೆಕ್ ನ ಮಿತಿಯು (199) ಫ಼ಾಸ್ಟಿಂಗ್(110)ಹಾಗೂ ಆಹಾರದ ನಂತರದ ಮಟ್ಟವು(140) ಆಗಿರಬೇಕು.ಈ ಮಿತಿಗಳಿಗಿಂತ ನಿಮ್ಮ ಗ್ಲೋಕೋಸ್ ಅಂಶ ಅಧಿಕವಾದಲ್ಲಿ ನಿಮಗೆ ಸಕ್ಕರೆ ಕಾಯಿಲೆ ಇದೆ ಎಂದರ್ಥ. ಇನ್ಸುಲಿನ್ ಮಟ್ಟವು ಕುಸಿಯುವುದಕ್ಕೆ ಕಾರಣವೇನು ಗೊತ್ತೇ?
ನಾವು ಸೇವಿಸಿ, ಜೀರ್ಣ ಆಗದೆ ಉಳಿದ ಆಹಾರವು ದೇಹದಲ್ಲಿ ಹಲವು ಕಡೆಗಳಲ್ಲಿ ಕೊಬ್ಬಾಗಿ ಶೇಖರಣೆಗೊಂಡು ಪಾಂಕ್ರಿಯಾಸ್ ಮೇಲೆ ಒತ್ತಡ ಹೇರುತ್ತದೆ, ಇದರಿಂದಾಗಿ ಪಾಂಕ್ರಿಯಾಸ್ ಇನ್ಸುಲಿನ್ ಉತ್ಪಾದಿಸಲು ಅಸಮರ್ಥವಾಗುತ್ತದೆ. ಅದಕ್ಕಾಗಿ ನೀವು ಮೊದಲಿಗೆ ಮಾಡಬೇಕಾದುದಿಷ್ಟೇ.. ನೀವು ನಿಮ್ಮನ್ನು
ಚುರುಕಾಗಿಸಿಕೊಳ್ಳಿ. ನಿಮ್ಮ ದೇಹವನ್ನು ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಸಣ್ಣ ಮಟ್ಟಿಗೆ ದಂಡಿಸಿ; ತಿಂದುಂಡು ಆರಾಮು ಕುರ್ಚಿಯಲ್ಲಿ ಕೂತು ಟೀವಿ ನೋಡುತ್ತಾ ನನಗೆ ಸಕ್ಕರೆ ಕಾಯಿಲೆ ಇದೆ ಎಂದು ಬಾಯಲ್ಲಿ ಹೇಳುತ್ತಾ ಕೂತರೆ ಮುಗಿಯಿತೆ? ಇಲ್ಲ ನಿಮ್ಮ ಸಮಸ್ಯೆ ಇಲ್ಲಿಂದ ಆರಂಭವಾಗುತ್ತದೆ ನೋಡಿ. ಮೊದಲಿಗೆ ನಿಮಗೆ ಸಕ್ಕರೆ ಕಾಯಿಲೆ ಇದೆ ಎಂದು ತಿಳಿದ ತಕ್ಷಣ ಹಲವರು ಅಲೋಪತಿ ಮದ್ದಿಗೆ ಶರಣಾಗಿ ಬಿಡುತ್ತಾರೆ. ಇದು ಒಳ್ಳೆಯದಲ್ಲ, ಯಾಕೆಂದರೆ ಒಂದು ಬಾರಿ ನೀವು ಯಾವುದೇ ಮದ್ದಿಗೆ ಶರಣಾದ ಪಕ್ಷದಲ್ಲಿ ನಿಮ್ಮ ದೇಹ ಆ ಮದ್ದು ಮಾತ್ರೆಗಳಿಗೆ ಅಡ್ಜಸ್ಟ್ ಆಗಿಬಿಡುತ್ತದೆ, ಆಮೇಲೆ ನೀವು ಎಷ್ಟು ಸರ್ಕಸ್ ಮಾಡಿದ್ರೂ ಪರಿಣಾಮ ಶೂನ್ಯ. ಅದಕ್ಕೆ ಆರಂಭದಲ್ಲೇ ಸಣ್ಣ ಮಟ್ಟಿಗೆ ಕಾಣಿಸಿಕೊಂಡ ಈ ಕಾಯಿಲೆಗೆ ಮದ್ದಿನ ಆವಶ್ಯಕತೆ ಇರಲ್ಲ, ಆದ್ರೆ ಅಧಿಕವಾಗಿ ಕಾಣಿಸಿಕೊಂಡ ಪಕ್ಷದಲ್ಲಿ ಮೊದಲಿಗೆ ಸಣ್ಣ ಮಟ್ಟದ ಮೆಡಿಕೇಷನ್ ತೆಗೆದುಕೊಂಡು ನಿಧಾನಕ್ಕೆ ನಿಲ್ಲಿಸಿ ಬಿಡಬಹುದು. ಕೇವಲ ಕರಿಬೇವು ಹಾಗೂ ಕಹಿಬೇವು ತಿಂದು ಸಕ್ಕರೆ ಕಾಯಿಲೆ ನಿಯಂತ್ರಿಸಿದವರೆಷ್ಟೋ ಮಂದಿ.
1.ಸತ್ವ ಪೂರ್ಣವಾದ ಆಹಾರ ಸೇವಿಸಿ
ರಾಗಿ,ಗೋಧಿ,ಜೋಳ,ಬಾರ್ಲಿ,ಹಾಗೂ ಸಿರಿಧಾನ್ಯಗಳಾದ ನವಣೆ,ಹರಕಾ,ಸಾಮೆ ಇವುಗಳನ್ನು ನಿಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳಿ. ಮೊಳಕೆ ಕಾಳುಗಳು ಅದರಲ್ಲೂ ಮೆಂತೆಯನ್ನು ಹಿಂದಿನ ದಿನ ನೆನೆ ಹಾಕಿ ಮೊಳಕೆ ಕಟ್ಟಿ ತಿಂದಲ್ಲಿ ಹಿತಕಾರಿ. ತರಕಾರಿಗಳಾದ ಹೀರೆಕಾಯಿ, ಹಾಗಲಕಾಯಿ ಹಾಗೂ ಸೋರೆ ಕಾಯಿಗಳು ಇದಕ್ಕೆ ರಾಮಬಾಣ ಅಲ್ಲದೆ ನೇರಳೆಹಣ್ಣು, ಪಪ್ಪಾಯಿ ಸಣ್ಣ ಸೇಬು ಹಾಗೂ ಪೇರಳೆ(ಸೀಬೆ ಕಾಯಿ) ಗಳೂ ತಿನ್ನಬಹುದಾದ ಹಣ್ಣುಗಳು.
2.ಕಣ್ಣು ತುಂಬ ನಿದ್ದೆ
ದಿನಕ್ಕೆ ಆರು ಘಂಟೆ ನಿದ್ದೆ ಆವಶ್ಯಕ. ದೇಹಕ್ಕೆ ಆರಾಮ ಇಲ್ಲದಿದ್ದಲ್ಲಿ ಇನ್ಸುಲಿನ್ ಸ್ರವಿಕೆ ಕಡಿಮೆಯಾಗುತ್ತದೆ.
3.ದೇಹ ದಂಡಿಸಿ
ನಿಯಮಿತವಾದ ವ್ಯಾಯಾಮ,ವಾಕಿಂಗ್ ತೀರಾ ಆವಶ್ಯಕ,ಇದರಿಂದಾಗಿ ದೇಹ ಬೆವರಿ ಅಧಿಕವಾದ ಗ್ಲೋಕೋಸ್ ನಷ್ಟವಾಗುತ್ತದೆ
4.ಪ್ರಾಣಾಯಾಮ ಹಾಗೂ ಯೋಗಾಸನ
ಭೂಮಿಯ ಸಂಜೀವಿನಿ ಕಪಾಲ ಭಾತಿ ಎಂದೇ ಹೆಸರಾಗಿದೆ. ಸಕ್ಕರೆ ಕಾಯಿಲೆ ಇರುವಾತ,ಈ ಕಪಾಲಭಾತಿಯನ್ನು ದಿನಕ್ಕೆ ಅರ್ಧ ಘಂಟೆಯಂತೆ ಹಾಗೂ ಅನುಲೋಮ ವಿಲೋಮ ಪ್ರಾಣಾಯಾಮವನ್ನು ದಿನಕ್ಕೆ ಇಪ್ಪತ್ತು ನಿಮಿಷವಾದರೂ ಮಾಡಿದಲ್ಲಿ,ಇನ್ಸುಲಿನ್ ಹಾರ್ಮೋನು ಸ್ರವಿಕೆ ಹೆಚ್ಚಾಗುತ್ತದೆ.ಹೈ ಬಿ.ಪಿ ಇದ್ದವರು ನಿಧಾನಕ್ಕೆ ಕಪಾಲ ಭಾತಿ ಮಾಡಬೇಕು.ಇದಲ್ಲದೆ,ಬ್ರಾಹ್ಮರಿ ಪ್ರಾಣಾಯಾಮವನ್ನೂ ಅಭ್ಯಸಿಸಬೇಕು.
ಮಂಡೂಕಾಸನ,ವಜ್ರಾಸನ,ನಾವಾಸನ,ಧನುರಾಸನ,ಪಶ್ಚಿಮೋತ್ತಾಸನ,ಪವನ ಮುಕ್ತಾಸನ ಗಳಂತಹ ಆಸನಗಳನ್ನು ನಿತ್ಯ ನಿರಂತರ ಅಭ್ಯಸಿಸಿದಲ್ಲಿ ನಿಮ್ಮ ಸಕ್ಕರೆ ಕಾಯಿಲೆ ಮಂಗ ಮಾಯ.
5.ಆಕ್ಯುಪ್ರೆಷರ್
ನಿಮ್ಮ ಎಡಕೈಯ ಕಿರುಬೆರಳ ಕೆಳಗೆ ಒಂದು ದೊಡ್ದ ರೇಖೆಯ ಕೆಳಗಿರೋ ಪಾಯಿಂಟ್ ನ ಎರಡು ನಿಮಿಷ ಒತ್ತಿ ಹಿಡಿದಲ್ಲಿ ಪಾಂಕ್ರಿಯಾಸ್ ಆಕ್ಟಿವೇಟ್ ಆಗುತ್ತದೆ.
ಇವೆಲ್ಲಾದಕೂ ಮಿಗಿಲಾಗಿ ನೆಮ್ಮದಿಯ,ನಿಶ್ಚಿಂತೆಯ ಜೀವನ ಶೈಲಿ ಹಾಗೂ ಧ್ಯಾನ ಗಳಾದಿ ಮಾಡಿದಲ್ಲಿ ಈ ಸಕ್ಕರೆ ಕಾಯಿಲೆಯನ್ನು ಹೊಡೆದೋಡಿಸಬಹುದು.

  • ಸ್ವರ್ಣಲತ ಭಟ್

Like us on Facebook  The New India Times

POPULAR  STORIES :

ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ

ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!

ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!

50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ

ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!

ಕ್ಯೂನಲ್ಲಿ ನಿಂತಿದ್ದ ಜನರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸ್..!

ವಾಟ್ಸಾಪ್‍ನಿಂದ 10 ವರ್ಷದ ಲವ್ ಬ್ರೇಕಪ್..!

ಬಿಗ್‍ಬಾಸ್ ಸದಸ್ಯರ ಬಗ್ಗೆ ಜನ ಏನ್ ಹೇಳ್ತಾರೆ…?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...