ಇತ್ತೀಚೆಗೆ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಇದೀಗ ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿ ದಾಂಪತ್ಯಕ್ಕೆ ಕಾಲಿಡಲಿದೆ.
ಹೌದು ದಿಗಂತ್ ತಾವು ‘ಮನಸಾರೆ’ ಪ್ರೀತಿಸಿದ ಐಂದ್ರಿತಾ ರೈ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಡಿಸೆಂಬರ್ ನಲ್ಲಿವರು ಹೊಸ ಜೀವನ ಆರಂಭಿಸಲಿದ್ದಾರೆ.
ಇವರಿಬ್ಬರ ಮದ್ವೆ ವಿಚಾರ ಬಂದಾಗಲೆಲ್ಲಾ…ಅವೆಲ್ಲಾ ಅಂತೆಕಂತೆ, ಸುಳ್ಳು ಅಂತಿದ್ದ ಜೋಡಿ ಇದೀಗ ಮನೆಯವರ ಒಪ್ಪಿಗೆ ಪಡೆದು ಮದ್ವೆಗೆ ರೆಡಿಯಾಗಿದ್ದಾರೆ.
ಇಬ್ಬರು ಪರಸ್ಪರ ಒಬ್ಬರನ್ನೊಬ್ಬರು ಬಹುಕಾಲದಿಂದ ಪ್ರೀತಿಸುತ್ತಿದ್ದಾರೆ. ಈಗ ಗೃಹಸ್ಥಾಶ್ರನಕ್ಕೆ ಕಾಲಿಡುವ ಕಾಲ ಸನ್ನಿಹಿತವಾಗಿದೆ.
ಡಿಸೆಂಬರ್ ನಲ್ಲಿ ಮದುವೆ ಆಗುವುದಾಗಿ ದಿಗಂತ್ ಹೇಳಿದ್ದಾರೆ. ಈಗ ಇವರಿಬ್ಬರು ಸದ್ಯ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.