ಬಿಗ್ ಬಾಸ್ ಸೀಸನ್ 5ಕ್ಕೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 15ರಿಂದ ಶುರುವಾಗಲಿರುವ ಕಲರ್ಸ್ ಕನ್ನಡವಾಹಿನಿಯ ಈ ರಿಯಾಲಿಟಿ ಶೋ ಬಗ್ಗೆ ಜನರ ಕುತೂಹಲ ಗರಿಗೆದರಿದೆ.
ಈ ಬಾರಿ ಸೆಲಬ್ರಿಟಿಗಳ ಜೊತೆಗೆ ಜನಸಾಮಾನ್ಯರು ಇರುತ್ತಾರೆ.
ಸದ್ಯ ಯಾವ ಸೆಲಬ್ರಿಟಿಗಳು ಬಿಗ್ ಬಾಸ್ ಮನೆ ಪ್ರವೇಶಿಸ್ತಾರೆ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಪ್ರಮುಖವಾಗಿ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ , ನಟರಾದ ಸುನೀಲ್ ರಾವ್, ಪಂಕಜ್ , ಕೋಮಲ್, ಗಾಯಕಿ ಅನುರಾಧ , ನಟಿ ನಿತ್ಯಾರಾಮ್ ಮುಂತಾದವರ ಹೆಸರು ಕೇಳಿಬರ್ತಿದೆ.
ಇವರುಗಳ ಜೊತೆಗೆ ನಟ ದಿಗಂತ್ ಹೆಸರು ಕೂಡ ಆರಂಭದಲ್ಲಿ ಕೇಳಿಬಂದಿತ್ತು.ಅವರು ಬಿಗ್ ಬಾಸ್ ಮನೆಗೆ ಖಂಡಿತಾ ಹೋಗೇ ಹೋಗ್ತಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ದಿಗಂತ್ ಅವಕಾಶವನ್ನು ಕಳೆದುಕೊಂಡಿದ್ದಾರಂತೆ..!
ದಿಗಂತ್ ಬಿಗ್ ಬಾಸ್ ಮನೆಗೆ ಹೋಗುವ ಮೊದಲೆ ಔಟ್ ಆಗಿದ್ದೇಕೆ ಗೊತ್ತಾ?
ನಿಮಗೆ ಗೊತ್ತಿರುವಂತೆ ಇತ್ತೀಚೆಗೆ ಇವರು ಪ್ರಯಾಣಿಸುತ್ತಿದ್ದ ಕಾರು ಆ್ಯಕ್ಸಿಡೆಂಟ್ ಆಗಿತ್ತು, ಅದರಲ್ಲಿ ಗಾಂಜಾ ಕೂಡ ಇತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗಂತ್ ಗೆ ನೋಟಿಸ್ ಕೂಡ ಬಂದಿದೆ ಎಂದು ಹೇಳಲಾಗ್ತಾ ಇದೆ. ಆದರೆ, ಇದನ್ನು ದಿಗಂತ್ ಅಲ್ಲಗಳೆದಿದ್ದಾರೆ. ಆದರೂ ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ದಿಗಂತ್ ಬಿಗ್ ಬಾಸ್ ಮನೆಗೆ ಹೋಗುವುದು ಸಾಧ್ಯವಿಲ್ಲವಂತೆ.
ಈಗ ದಿಗಂತ್ ಮನೆಗೆ ಪ್ರವೇಶಿಸುವ ಮೊದಲೇ ಔಟ್ ಆಗಿದ್ದಾರೆ.