ಸ್ಯಾಂಡಲ್ ವುಡ್ ನಲ್ಲಿ ಹೊಸ ಪ್ರತಿಭೆಗಳ ಉದಯ ಆಗುತ್ತಿದೆ . ಅದರಲ್ಲೂ ಅನೇಕ ಪ್ರಾಮಿಸಿಂಗ್ ಡೈರೆಕ್ಟರ್ ಗಳು ಬರುತ್ತಿರುವುದು ಕನ್ನಡ ಚಿತ್ರರಂಗ ಇನ್ನೂ ಎತ್ತರಕ್ಕೇರುವ ಸೂಚನೆಯಾಗಿದೆ.
ಅಂತಹ ಕೆಲವು ಡೈರೆಕ್ಟರ್ ಗಳ ಪರಿಚಯ ಇಲ್ಲಿದೆ.
1) ಪ್ರಶಾಂತ್ ನೀಲ್ :ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ ಡೈರೆಕ್ಟರ್ ಪ್ರಶಾಂತ್ ನೀಲ್. ಶ್ರೀ ಮುರುಳಿ ಅಭಿನಯದ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದು ಇದೇ ಯುವ ನಿರ್ದೇಶಕ ಪ್ರಶಾಂತ್ ನೀಲ್. ಜನ ಇವರ ಸಿನಿಮಾಕ್ಕೆ ಈಗ ಕಾದುಕುಳಿತಿದ್ದಾರೆ.
2)ಸಂತೋಷ್ ಆನಂದ್ ರಾಮ್ : ರಾಮಚಾರಿ, ರಾಜಕುಮಾರದಂತಹ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಸಂತೋಷ್ ಆನಂದ ರಾಮ್. 2008ರಲ್ಲಿ ರಾಖಿ ಸಿನಿಮಾಕ್ಕೆ ಲಿರಿಕ್ ರೈಟರ್ ಆಗಿ ಚಿತ್ರರಂಗ ಪ್ರವೇಶಿಸಿದ್ದ ಸಂತೋಷ್ ಇಂದು ಮೋಸ್ಟ್ ಪ್ರಾಮಿಸಿಂಗ್ ಡೈರೆಕ್ಟರ್. ಇವರು ಫಸ್ಟ್ ಆ್ಯಕ್ಷನ್ ಕಟ್ ಹೇಳಿದ್ದೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ರಾಮಚಾರಿ’ ಗೆ. ನಂತರ ಪುನೀತ್ ರಾಜ್ ಅಭಿನಯದ ‘ರಾಜಕುಮಾರ’ನಿಗೆ.
3)ಪವನ್ ಕುಮಾರ್ : ಇವರು ಕೂಡ ಸ್ಯಾಂಡಲ್ ವುಡ್ ನ ಪ್ರಾಮಿಸಿಂಗ್ ಡೈರೆಕ್ಟರ್. ಯೋಗರಾಜ್ ಭಟ್ಟರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪವನ್ ನಿರ್ದೇಶಿಸಿದ ಮೊದಲ ಸಿನಿಮಾ ಲೈಫು ಇಷ್ಟೇನೆ.ಈ ಸಿನಿಮಾಕ್ಕೆ ಅಂಥಾ ದೊಡ್ಡ ಯಶಸ್ಸು ಸಿಕ್ಕಿರ್ಲಿಲ್ಲ. ಲೂಸಿಯಾ ಇವರಿಗೆ ಒಂದೊಳ್ಳೆ ಹೆಸ್ರು ಕೊಡ್ತು.
4) ರಾಜ್ ಬಿ ಶೆಟ್ಟಿ : ಒಂದು ಮೊಟ್ಟೆಯ ಕಥೆ ಖ್ಯಾತಿಯ ನಿರ್ದೇಶಕ ರಾಜ್ ಬಿ ಶೆಟ್ಟಿ ಕೂಡ ಸ್ಯಾಂಡಲ್ ವುಡ್ ನ ಮೋಸ್ಟ್ ಪ್ರಾಮಿಸಿಂಗ್ ಡೈರೆಕ್ಟರ್.
5) ಆದರ್ಶ್ ಎಚ್ ಈಶ್ವರಪ್ಪ : ನೀವು ‘ಶುದ್ಧಿ’ ಸಿನಿಮಾ ನೋಡಿದ್ದೀರ? ಹೆಸರನ್ನಾದರೂ ಕೇಳಿರ್ತೀರಿ. ಈ ಸಿನಿಮಾದ ನಿರ್ದೇಶಕ ಆದರ್ಶ್ ಅವ್ರು ಕೂಡ ಭರವಸೆಯ ನಿರ್ದೇಶಕ.
6) ರಾಮ ರೆಡ್ಡಿ : ತಿಥಿ ಸಿನಿಮಾ ನಿರ್ದೇಶಕ ರಾಮರೆಡ್ಡಿ ಕೂಡ ಪ್ರಾಮಿಸಿಂಗ್ ಡೈರೆಕ್ಟರ್.
7)ಹೇಮಂತ್ ರಾವ್ : ಗೋಧಿ ಬಣ್ಣ ಸಾಧರಣ ಮೈಕಟ್ಟು ಸಿನಿಮಾದ ನಿರ್ದೇಶಕ ಹೇಮಂತ್ ತಮ್ಮ ಚೊಚ್ಚಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ.
8) ಸಿಂಪಲ್ ಸುನಿ : ಸ್ಯಾಂಡಲ್ ವುಡ್ ನ ಪ್ರಾಮಿಸಿಂಗ್ ಡೈರೆಕ್ಟರ್ ಗಳಲ್ಲಿ ಇವ್ರು ಕೂಡ ಒಬ್ರು. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಬಹುಪರಾಕ್, ಆಪರೇಷನ್ ಅಲಮೇಲಮ್ಮ , ಚಮಕ್ ನಂತಹ ಹಿಟ್ ಸಿನಿಮಾಗಳನ್ನು ಕೊಟ್ಟ ಡೈರೆಕ್ಟರ್.
9) ಪವನ್ ಒಡೆಯರ್..! ಕನ್ನಡದ ಮತ್ತೊಬ್ಬ ನಿರ್ದೇಶಕರು .ಗೂಗ್ಲಿ ಸಿನಿಮಾ ಇವ್ರಿಗೆ ಸಖತ್ ಹೆಸ್ರು ತಂದುಕೊಡ್ತು.
10) ರಿಷಭ್ ಶೆಟ್ಟಿ : ಕಿರಿಕ್ ಪಾರ್ಟಿ ಖ್ಯಾತಿಯ ನಟರಲ್ಲಿ ಒಬ್ಬರಾದ ನಿರ್ದೇಶಕ ರಿಷಭ್ ಶೆಟ್ಟಿ ಕೂಡ ಮೋಸ್ಟ್ ಪ್ರಾಮಿಸಿಂಗ್ ಡೈರೆಕ್ಟರ್.
11)ಡಿ. ಸತ್ಯಪ್ರಕಾಶ್ : ಜಯನಗರ 4. ಬ್ಲಾಕ್, ಒಂದಲ್ಲ ಎರಡಲ್ಲ,ರಾಮ ರಾಮ ರೇ ಸಿನಿಮಾ ಖ್ಯಾತಿಯ ಸತ್ಯಪ್ರಕಾಶ್ ಸ್ಯಾಂಡಲ್ ವುಡನ ಪ್ರಾಮಿಸಿಂಗ್ ಡೈರೆಕ್ಟರ್.