ದೇಶದಾದ್ಯಂತ 3 ದಿನಗಳ ಕಾಲ ಬೆಳಕಿನ ಹಬ್ಬ ದೀಪಾವಳಿ ಆಚರಣೆ ನಡೆಯಲಿದ್ದು, ಅರಮನೆ ನಗರಿ ಮೈಸೂರಿನಲ್ಲೂ ದೀಪಾವಳಿ ಆಚರಿಸಲು ಜನರಿಂದ ಸಕಲ ಸಿದ್ಧತೆ ನಡೆದಿದೆ.
ದೇವರಾಜ ಮಾರುಕಟ್ಟೆ ಸೇರಿ ವಿವಿಧ ವಾಣಿಜ್ಯ ಪ್ರದೇಶಗಳಲ್ಲಿ ದೀಪಾವಳಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.
ಹೂವು, ಹಣ್ಣು, ಮಾವಿನ ಸೊಪ್ಪು, ಬಾಳೆಕಂದು ಖರೀದಿಯಲ್ಲಿ ಮೈಸೂರಿಗರು ತೊಡಗಿದ್ದು, ರಸ್ತೆ ಬದಿಗಳಲ್ಲೂ ದೀಪಾವಳಿ ಖರೀದಿ ಭರದಿಂದ ಸಾಗುತ್ತಿದೆ. ಇನ್ನ ಈ ಬಾರಿಯ ದೀಪಾವಳಿಯಲ್ಲಿ ಹೂವಿನ ವ್ಯಾಪಾರ ಕುಸಿತಗೊಂಡಿದೆ ಎಂದು ಮಾರಾಟಗಾರರು ಅಳಲು ತೋಡಿಕೊಂಡಿದ್ದಾರೆ.