ದೀಪಾವಳಿ ಬೆಳಕಲ್ಲಿ ಬದಕು ಕತ್ತಲಾಗದಿರಲಿ

Must read

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಪಟಾಕಿ ಸಿಡಿಸುವ ವೇಳೆ ಹೆಚ್ಚಿನ ಅನಾಹುತಗಳು ಸಂಭವಿಸುವ ಹಿನ್ನೆಲೆ ಕೆ.ಆರ್.ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

 

ಪಟಾಕಿ ಅವಘಡಗಳಿಂದ‌ ಕಣ್ಣಿನ ತೊಂದರೆಗೆ ಒಳಗಾಗುವವರೇ ಹೆಚ್ಚಾಗಿದ್ದು, ದಿನದ 24 ಗಂಟೆ ಚಿಕಿತ್ಸೆ ನೀಡಲು KR.ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗದ ಸಿಬ್ಬಂದಿ ಸನ್ನದ್ಧರಾಗಿದ್ದಾರೆ.

ಇನ್ನ ಪಟಾಕಿ ಸಿಡಿಸುವ ವೇಳೆ ಅವಘಡಕ್ಕೀಡಾಗಿ ಆಸ್ಪತ್ರೆಗೆ ಬರುವವರಿಗೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ನೇತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ.ಶುಭ್ರತಾ ತಿಳಿಸಿದ್ರು.

- Advertisement -spot_img

More articles

- Advertisement -spot_img

Latest article