ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು’ – ಖರ್ಗೆ ಸೂಚನೆ ಪಾಲಿಸಬೇಕು: ಡಿ.ಕೆ. ಶಿವಕುಮಾರ್

Date:

ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು’ – ಖರ್ಗೆ ಸೂಚನೆ ಪಾಲಿಸಬೇಕು: ಡಿ.ಕೆ. ಶಿವಕುಮಾರ್

ಬೆಂಗಳೂರು: ಅಧಿಕಾರ ಹಂಚಿಕೆ ಕುರಿತಾಗಿ ಪಕ್ಷದೊಳಗಿನ ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು ಎಂದು ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಹೇಳಿದ್ದಾರೆ. ಅದನ್ನು ನಾವು ಪಾಲಿಸಬೇಕು ಎಂದು ಹೇಳಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಪರವಾಗಲಿ ಅಥವಾ ವಿರುದ್ಧವಾಗಲಿ ಶಾಸಕರು, ಸಚಿವರು ನೀಡುವ ಹೇಳಿಕೆಗಳು ಪಕ್ಷಕ್ಕೆ ಹಾನಿ ಮಾಡುವಂತೆಯೇ ಹೊರತು, ಪಕ್ಷಕ್ಕೆ ಒಳ್ಳೆಯದನ್ನು ಮಾಡುವ ಹೇಳಿಕೆಗಳಲ್ಲ ಎಂದರು. ಈ ರೀತಿಯ ಹೇಳಿಕೆಗಳಿಂದ ಯಾರಿಗೂ ಪ್ರಯೋಜನ ಇಲ್ಲ ಎಂದು ಸ್ಪಷ್ಟಪಡಿಸಿದರು.

ನೀವು ಶುಭಸುದ್ದಿ ತರುವಿರಿ ಎಂದು ಕೆಲ ಕಾಂಗ್ರೆಸ್ ನಾಯಕರು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಪ್ರತಿದಿನವೂ ನನಗೆ ಶುಭ ದಿನವೇ. ಶುಭ ಜೀವನ, ಶುಭ ಆರಂಭ, ಯಶಸ್ಸಿನ ದಿನ ಎಂದರೆ ಪ್ರತಿದಿನವೂ ಕಷ್ಟದ ದಿನವೇ. ಯಾವುದೂ ಸುಲಭವಾಗಿ ಸಿಗುವುದಿಲ್ಲ ಎಂದು ಹೇಳಿದರು.

ಜನರ ಕಷ್ಟಗಳನ್ನು ಬಗೆಹರಿಸಲು ಹೋರಾಟ, ಅಡಚಣೆಗಳು, ತೊಡಕುಗಳು ಸಹಜ. ಟೀಕೆಗಳು ಬರುತ್ತಲೇ ಇರುತ್ತವೆ. ಅವುಗಳನ್ನು ಎದುರಿಸಿಕೊಂಡೇ ನಮ್ಮ ಕೆಲಸವನ್ನು ಮುಂದುವರೆಸಬೇಕು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

Share post:

Subscribe

spot_imgspot_img

Popular

More like this
Related

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಬೆಂಗಳೂರು: ದುಬೈನಲ್ಲಿ...

ಬೆಂಗಳೂರುನಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ

ಬೆಂಗಳೂರುದಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ ಬೆಂಗಳೂರು: ನಗರದಲ್ಲಿ ಇಂದು...

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌ ಬೆಂಗಳೂರು: ಇಸ್ರೇಲ್–ಇರಾನ್ ನಡುವಿನ...

ಅತೀ ಶೀಘ್ರದಲ್ಲಿ‌ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್

ಅತೀ ಶೀಘ್ರದಲ್ಲಿ‌ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್ ನಡೆಯಲಿದೆ. ಇದರ...