No menu items!
17.6 C
Munich
Thursday, April 23, 2026

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸ್ನಾಯು ನೋವು: ಕಾರಣಗಳು ಮತ್ತು ತಡೆಗೆ ಸಲಹೆಗಳು

Must read

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸ್ನಾಯು ನೋವು: ಕಾರಣಗಳು ಮತ್ತು ತಡೆಗೆ ಸಲಹೆಗಳು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರಲ್ಲಿ ಸ್ನಾಯು ನೋವು ಹೆಚ್ಚಾಗಿ ಕಾಣಸಿಗುತ್ತಿದೆ. ಅನೇಕರು ಇದನ್ನು ವಿಟಮಿನ್ ಕೊರತೆ ಅಥವಾ ಮೂಳೆ ಸಂಬಂಧಿ ಕಾಯಿಲೆಯಂತೆ ಭಾವಿಸುತ್ತಾರೆ. ಆದರೆ ವೈದ್ಯಕೀಯ ತಜ್ಞರು ಹೇಳುವಂತೆ, ಈ ರೀತಿಯ ನೋವು ವಿಟಮಿನ್ ಕೊರತೆ ಅಥವಾ ಮೂಳೆ ಕಾಯಿಲೆಗೆ ನೇರ ಸಂಬಂಧವಿಲ್ಲ.

ಸ್ನಾಯು ನೋವಿಗೆ ಮುಖ್ಯ ಕಾರಣಗಳು

  1. ಕುಳಿತುಕೊಳ್ಳುವ ಭಂಗಿ ಮತ್ತು ಕೆಲಸದ ಪದ್ಧತಿ:
    ಒಂದೇ ಜಾಗದಲ್ಲಿ ಗಂಟೆಗಳ ಕಾಲ ಕುಳಿತುಕೊಳ್ಳುವುದು, ಲ್ಯಾಪ್‌ಟಾಪ್ ಅಥವಾ ಮೊಬೈಲ್‌ನಲ್ಲಿ ನಿರಂತರವಾಗಿ ಕೆಲಸ ಮಾಡುವಾಗ ಕುತ್ತಿಗೆ ಬಾಗಿರುವುದು ಮತ್ತು ಬೆನ್ನಿಗೆ ಒತ್ತಡ ಬೀಳುವುದರಿಂದ ನೋವು ಉಂಟಾಗುತ್ತದೆ.
  2. ಮಾನಸಿಕ ಒತ್ತಡ:
    ನೇರವಾಗಿ ಸಂಬಂಧವಿಲ್ಲದಿದ್ದರೂ, ಮಾನಸಿಕ ಒತ್ತಡ ಹಾರ್ಮೋನ್ ಸಮತೋಲನವನ್ನು ಅಡ್ಡಿಪಡಿಸಿ, ಸ್ನಾಯುಗಳನ್ನು ಬಿಗಿಗೊಳಿಸುತ್ತದೆ. ಜೊತೆಗೆ, ನಿದ್ರೆ ಸರಿಯಾಗಿ ಆಗದಿದ್ದರೆ ನೋವು ಹೆಚ್ಚಾಗಬಹುದು.
  3. ನಿರ್ಜಲೀಕರಣ (Dehydration):
    ನೀರಿನ ಕೊರತೆಯಿಂದ ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನ ಹಾಳಾಗುತ್ತದೆ. ಹೆಚ್ಚಿನ ಬೆವರು ಅಥವಾ ಕ್ರೀಡಾಪಟುಗಳು ನೀರು ತಕ್ಕ ಮಟ್ಟದಲ್ಲಿ ಕುಡಿಯದಿದ್ದರೆ, ಸ್ನಾಯು ನೋವು ಎದುರಾಗಬಹುದು, ಈ ಸಂದರ್ಭದಲ್ಲಿ ವಿಟಮಿನ್ ಅಥವಾ ಕ್ಯಾಲ್ಸಿಯಂ ಸೇವನೆಯು ಸಹ ಪ್ರಯೋಜನವಿಲ್ಲ.

ಸ್ನಾಯು ನೋವನ್ನು ತಡೆಯಲು ಸಲಹೆಗಳು

ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ; ಒಂದು ಗಂಟೆಗೂ ಹೆಚ್ಚು ಒಂದೇ ಸ್ಥಾನದಲ್ಲಿ ಕುಳಿತುಕೊಳ್ಳುವುದು ತಪ್ಪಿಸಿ.

ಪ್ರತಿದಿನ ಲಘು ವ್ಯಾಯಾಮ ಮಾಡಿ.

ಹಗಲಿನಲ್ಲಿ ಕನಿಷ್ಠ 7–8 ಗ್ಲಾಸ್ ನೀರು ಕುಡಿಯಿರಿ.

ಪ್ರತಿದಿನ 7–8 ಗಂಟೆ ಸರಿಯಾಗಿ ನಿದ್ದೆ ಮಾಡಿ.

- Advertisement -spot_img

More articles

- Advertisement -spot_img

Latest article