ನಾಯಿ ತಿಥಿ ಮಾಡಿ ಬಾಡೂಟ ಹಾಕಿದ್ರು..!

Date:

ಪ್ರೀತಿಯಿಂದ ಸಾಕಿದ ನಾಯಿ ಸತ್ತೋದ್ರೆ ತುಂಬಾ ದುಃಖವಾಗುತ್ತೆ. ತಡ್ಕೊಳಕ್ಕಾಗದೇ ಇರುವಷ್ಟು ಅಳು ಬರುತ್ತೆ..! ಅದನ್ನು ಹೂತು ಸುಮ್ಮನಾಗುವುದಷ್ಟೇ..! ಎಷ್ಟೇ ಮುದ್ದಿನಿಂದ ಸಾಕಿರಲಿ, ಮನುಷ್ಯರ ತಿಥಿಯಂತೆ ಪುಣ್ಯತಿಥಿ ಮಾಡ್ತೀವಾ..? ನಾಯಿ ತಿಥಿ ಯಾರ್ ಮಾಡ್ತಾರೆ ಅಲ್ವಾ..? ಇಲ್ಲೊಂದು ಕಡೆ ನಾಯಿ ಪುಣ್ಯತಿಥಿ ಮಾಡಿದ್ದಾರೆ..! ಅಷ್ಟೇ ಅಲ್ಲ ಊರಿಗೇ ಬಾಡೂಟ ಹಾಕಿದ್ದಾರೆ..!


ಇದು ನಡೆದಿರೋದು ಹಾಸನ ಜಿಲ್ಲೆಯಲ್ಲಿ. ಜಿಲ್ಲೆಯ ಹೊಳೆನರಸೀಪುರದ ಹೂವಿನ ವ್ಯಾಪಾರಿಗಳು ನಾಯಿಯ ತಿಥಿ ಮಾಡಿದವರು. ಧರ್ಮ ಎಂಬ ನಾಯಿ ಇಲ್ಲಿನ ಎಲ್ಲರ ಮನೆ ಮಗನಂತಿತ್ತು. ಅಕ್ಟೋಬರ್ 14 ರಂದು ಧರ್ಮ ಸತ್ತಾಗ ಇಡೀ ಹೂವಿನ ಮಾರುಕಟ್ಟೆಯಲ್ಲಿ ಸೂತಕದ ಛಾಯೆ ಆವರಿಸಿತ್ತು.

 


ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಧರ್ಮ ತಿಥಿಯನ್ನು ಮಾಡಲು ಹೂವಿನ ವ್ಯಾಪಾರಿಗಳು ತೀರ್ಮಾನ ಮಾಡಿದ್ರು. 11ನೇ ದಿನಕ್ಕೆ ವಿಧಿಬದ್ಧವಾಗಿ ಪುಣ್ಯ ತಿಥಿ ಮಾಡಿ ಬಾಡೂಟ ಹಾಕಿಸಿ, ಧರ್ಮನ ಆತ್ಮಕ್ಕೆ ಶಾಂತಿಕೋರಿದ್ದಾರೆ..! ಅಷ್ಟೇ ಅಲ್ಲದೆ ಶ್ರದ್ಧಾಂಜಲಿ ಪೋಸ್ಟರ್ ಕೂಡ ಹಾಕಿ ನಾಯಿ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ. ಧರ್ಮನ ತಿಥಿಯಲ್ಲಿ ಜಾತಿ-ಧರ್ಮದ ಬೇಧವಿಲ್ಲದೆ ಪಾಲ್ಗೊಂಡಿದ್ದರು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...