No menu items!
17.9 C
Munich
Thursday, July 9, 2026

ಕೇವಲ 999 ರೂಗಳಿಗೆ 4ಜಿ ಸ್ಮಾರ್ಟ್‍ಫೋನ್..!

Must read

ಇನ್ನು ಕೇವಲ 999 ರೂಗಳಿಗೆ 4ಜಿ ಸ್ಮಾರ್ಟ್‍ಫೋನ್ ಲಭ್ಯವಾಗಲಿದೆ..! ಮೈಕ್ರೋಮ್ಯಾಕ್ಸ್ ಮತ್ತು ವೊಡಾಫೋನ್ ಜೊತೆಗೂಡಿ ಗ್ರಾಹಕರಿಗೆ ಇಷ್ಟೊಂದು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‍ಫೋನ್ ನೀಡಲು ಮುಂದಾಗಿವೆ..!
ಮೈಕ್ರೋಮ್ಯಾಕ್ಸ್ ಮತ್ತು ವೊಡಾಫೋನ್ ಪಾಲುದಾರಿಕೆಯಲ್ಲಿ ಭಾರತ್ 2 ಅಲ್ಟ್ರಾ 4 ಜಿ ಸ್ಮಾರ್ಟ್ ಫೋನ್ ನವೆಂಬರ್‍ನಿಂದ ಮಾರುಕಟ್ಟೆಯಲ್ಲಿ ಸಿಗಲಿವೆಯಂತೆ.


ಗ್ರಾಹಕರು 2,899 ರೂಗಳನ್ನು ನೀಡಿ ಸ್ಮಾರ್ಟ್‍ಫೋನ್ ಅನ್ನ ಖರೀದಿಸಬೇಕು..! 36 ತಿಂಗಳು (3 ವರ್ಷ)ದ ಬಳಿಕ 1,900 ರೂ ಕ್ಯಾಶ್ ಬ್ಯಾಕ್ ಸಿಗುತ್ತೆ. ಹೀಗೆ 999 ರೂಗಳಿಗೆ 4ಜಿ ಸ್ಮಾರ್ಟ್‍ಫೋನ್ ಸಿಗಲಿದೆ. ಆದರೆ, ಸುಮ್ಮನೇ 2,899 ರೂ ಕೊಟ್ಟು ಸ್ಮಾರ್ಟ್‍ಫೋನ್ ತಗೊಂಡು 1,900 ರೂ ಕ್ಯಾಶ್ ಬ್ಯಾಕ್ ಪಡೆಯಕ್ಕಾಗಲ್ಲ..! 36 ತಿಂಗಳ ಕಾಲ ತಿಂಗಳಿಗೆ ಕನಿಷ್ಠ 150 ರೂ ವೊಡಾಫೋನ್ ರೀಚಾರ್ಜ್ ಮಾಡಿಕೊಳ್ಳಬೇಕು. ಮೊದಲ 18 ತಿಂಗಳ ನಂತರ ಬಳಕೆದಾರರ ವೊಡಾಫೋನ್ ಎಂ-ಪೆಸಾ ವ್ಲೆಟ್‍ಗೆ 900 ರೂ ಕ್ರೆಡಿಟ್ ಮಾಡಲಾಗುತ್ತೆ, ಮತ್ತೆ 18 ತಿಂಗಳ ನಂತರ 1000 ರೂ ನೀಡಲಾಗುತ್ತೆ ಎಂದು ಕಂಪನಿ ಹೇಳಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article