ಭಾರೀ ಕುತೂಹಲ ಕೆರಳಿಸಿದ್ದ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ಮುಕ್ತಾಯಗೊಂಡಿದ್ದು, ಅಮೇರಿಕಾದ ರಾಜ್ಯಭಾರವನ್ನು ಇದೀಗ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಕೈಯಲ್ಲಿದೆ.. ಇನ್ನು ಅಮೇರಿಕಾದಲ್ಲಿ ಟ್ರಂಪ್ ಅಧ್ಯಕ್ಷನಾಗಿರುವ ವಿಷಯ ಕೇಳಿ ಸ್ವತಃ ಅಮೇರಿಕಾಗೆ ಶಾಕ್ ಆಗಿಬಿಟ್ಟಿದೆ.. ಈ ಶಾಕ್ ನಡುವೆ ಪಾಕ್ ಸುದ್ದಿವಾಹಿನಿಗಳು ಅಮೇರಿಕಾಗೆ ಮತ್ತೊಂದು ಶಾಕಿಂಗ್ ನ್ಯೂಸ್ ಹೇಳಿದೆ.. ಆ ಶಾಕಿಂಗ್ ವಿಷ್ಯ ಏನಪ್ಪಾ ಅಂದ್ರೆ ವಿಶ್ವದ ದೊಡ್ಡಣ್ಣ ಅಮೇರಿಕಾದ ಒಡೆಯ ಟ್ರಂಪ್ ಅಮೇರಿಕಾ ದೇಶದವನೇ ಅಲ್ವಂತೆ.. ಹೇಳ್ಬೇಕು ಅಂದ್ರೆ ಟ್ರಂಪ್‍ನ ನಿಜವಾದ ಹೆಸರೂ ಕೂಡ ಬೇರೆ ಅಂತೆ… ಅಂತಹ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ಪಾಕ್‍ನ ಸುದ್ದಿವಾಹಿನಿಗಳಲ್ಲಿ ಸಖತ್ ಹವಾ ಮೂಡುಸ್ತಾ ಇದ್ರೆ.. ಇನ್ನೊಂದ್ಕಡೆ ಅಮೇರಿಕಾ ದೇಶಕ್ಕೆ ಗೊಂದಲ ಸೃಷ್ಟಿಸಿದೆ ನೋಡಿ..!
ಅಷ್ಟಕ್ಕೂ ಟ್ರಂಪ್ ಯಾರು..? ಅಮೇರಿಕಾದ ಅಧ್ಯಕ್ಷ.. ಆದ್ರೆ ಟ್ರಂಪ್ ಪಾಕ್‍ನ ಪ್ರಜೆ ಆಗಿದ್ನಂತೆ..! ಇನ್ನು ಹೇಳ್ಬೇಕು ಅಂದ್ರೆ ಟ್ರಂಪ್ ಪಾಕ್‍ನಲ್ಲಿ ಹುಟ್ಟಿದ್ದು ಆತನ ನಿಜವಾದ ಹೆಸರು ಡೊನಾಲ್ಡ್ ಟ್ರಂಪ್ ಅಲ್ಲಾ ಸ್ವಾಮೀ… ‘ದಾವೂದ್ ಇಬ್ರಾಹಿಂ ಖಾನ್’…! ಮಾಡೋಕೆ ಬದ್ಕೇ ಇಲ್ಲದ ಪಾಕ್ ಸುದ್ದಿವಾಹಿನಿಗಳು ಈ ರೀತಿಯ ಅಪಪ್ರಚಾರ ಮಾಡಿಕೊಳ್ತಾ ವಿಶ್ಯದಾದ್ಯಂತ ನಗೆ ಪಾಟಲಿಗೆ ಕಾರಣವಾಗಿದೆ ನೋಡಿ..!
ಅಬ್ಬಬ್ಬಾ..! ಇನ್ನು ಮುಂದೆ ಕಾಮಿಡಿ ಇದೆ ಓದಿ.. ಪಾಕ್ ಮೂಲಗಳ ಪ್ರಕಾರ ದಾವುದ್ ಇಬ್ರಾಹಿಂ ಖಾನ್ ಅಲಿಯಾಸ್ ಡೊನಾಲ್ಡ್ ಟ್ರಂಪ್ ಪಾಕಿಸ್ತಾನ ಪ್ರಜೆ ಎಂದು ಹೇಳ್ಕೊಂಡ್ ತಿರುಗ್ತಾ ಇರೊ ಜೊತೆ ಟ್ರಂಪ್ ಬಾಲ್ಯದಲ್ಲಿದ್ದಾಗ ಪಾಕ್‍ನಲ್ಲೇ ಇದ್ದಿದ್ದು ಬೇಕಿದ್ರೆ ಈ ಬಾಲಕನ ಫೋಟೋ ನೋಡಿ..! ಎಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೊನೂ ಸಹ ಹರಿಬಿಟ್ಟಿದೆ. ಟ್ರಂಪ್ ಎಂದು ನಾಮಾಂಕಿತವಾಗಿರೋ ನಮ್ಮ ದೇಶದ ಪ್ರಜೆ ದಾವೂದ್ ಓರ್ವ ಅನಾಥ..! 1954ರ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಆತನ ಪೋಷಕರು ತೀರಿಕೊಂಡ ಬಳಿಕ ನಮ್ಮ ಮದರಸಾ(ಶಾಲೆ) ದಲ್ಲೇ ಆತನಿಗೆ ವಿದ್ಯಾಭ್ಯಾಸ ನೀಡ್ತಾ ಬಂದಿದ್ದು. 1955ರಲ್ಲಿ ಆತನನ್ನು ಬ್ರಿಟೀಷ್ ಇಂಡಿಯನ್ ಆರ್ಮಿಗಳು ಕರೆದುಕೊಂಡು ಹೋದ್ರು ಎಂದು ಬೊಗಳೆ ಪುರಾಣಗಳನ್ನು ಬಿಟ್ಟಿದ್ದಾರೆ..!
ಟ್ರಂಪ್ ಪಾಕ್ ಪ್ರಜೆನಾ..?
ಸುದ್ದಿವಾಹಿನಿಯೊಂದರ ಗಾಸಿಪ್ ಸುದ್ದಿಯನ್ನು ನಂಬದಿರುವ ದೃಷ್ಠಿಯಿಂದ ಅಮೇರಿಕಾದ ಅಧಿಕಾರಿಗಳು ಟ್ರಂಪ್ ಯಾರು ಆತನ ಜನನ ಎಲ್ಲಿ ಎಂಬ ಮಾಹಿತಿ ಬಹಿರಂಗಗೊಳಿಸಿದ್ದಾರೆ.. ಮೂಲಗಳು ಹೇಳುವಂತೆ ಟ್ರಂಪ್ 14 ಜೂನ್ 1946ರಲ್ಲಿ ನ್ಯೂಯಾಕ್‍ನಲ್ಲಿ ಜನಿಸಿದ್ದು. ಆತನ ತಂದೆ ಫ್ರೆಡ್ ಟ್ರಂಪ್ ತಾಯಿ ಮೇರಿ ಟ್ರಂಪ್. ಪದವೀ ಮುಗಿಸಿದ ನಂತರ ಟ್ರಂಪ್ ತಂದೆಯ ಜೊತೆ ರಿಯಲ್ ಎಸ್ಟೇಟ್ ಬ್ಯುಸಿನೆಸ್‍ನಲ್ಲಿ ತೊಡಗಿಕೊಂಡಿದ್ದ ಎಂದು ತಿಳಿದು ಬಂದಿದೆ. ಆದ್ರೆ ಪಾಕ್ ಸುದ್ದಿವಾಹಿನಿಯ ನಡೆಯನ್ನು ಕಂಡು ಪಾಕ್‍ನ ಮಾಧ್ಯಮ ಹೇಗೆ ಕಾರ್ಯ ನಿರ್ವಹಿಸ್ತಾ ಇದೆ ಎಂಬುದು ಈಗ ಜಗದ್‍ಜಾಹೀರಾಗಿದೆ..! ಈಗ ಹೇಳಿ ಟ್ರಂಪ್ ಪಾಕ್ ಪ್ರಜೆನಾ..?
https://www.youtube.com/watch?v=0f0mjZnumTA
Like us on Facebook The New India Times
POPULAR STORIES :
ಹಳೆಯ ನೋಟು ಕೊಟ್ಟು ವಿದ್ಯುತ್ ಬಿಲ್ ಪಾವತಿಸಿ: ಡಿಕೆಶಿ
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!
ಕಸ ಗುಡಿಸುವ ಮಹಿಳೆಗೆ ಸಿಕ್ಕಿತ್ತು ಸಾವಿರ ಮುಖಬೆಲೆಯ ನೋಟುಗಳ ಬ್ಯಾಗ್..!
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!
ಜಮೀನು ಮಾರಿದ 50 ಲಕ್ಷ ಹಣವಿತ್ತು: ದಿಕ್ಕು ತೋಚದ ಮಹಿಳೆ ಆತ್ಮಹತ್ಯೆ
ಮಾಸ್ತಿಗುಡಿ ದುರಂತ: ಕ್ಲೈಮ್ಯಾಕ್ಸ್ ಐಡಿಯಾ ಕೊಟ್ಟವರು ಯಾರು ಗೊತ್ತಾ..?