ಸತತ ಏಳು ತಿಂಗಳ ನಿರಂತರ ಪರಿಶ್ರಮದ ಬಳಿಕ ಎಸ್‍ಎಲ್‍ಜಿ ಪ್ರೊಡಕ್ಷನ್ ಅವರ ಬಹು ನಿರೀಕ್ಷಿತ ಡ್ರೀಮ್‍ಗರ್ಲ್ ಸಿನಿಮಾ ಅಭಿಮಾನಿಗಳನ್ನು ರಂಜಿಸಲು ಸಿದ್ದವಾಗಿ ನಿಂತಿದೆ.. ಸೂರ್ಯಸತೀಶ್ ಅವರ ನಿರ್ದೇಶನದ ಎರಡನೇ ಚಿತ್ರವಾದ ಡ್ರೀಮ್‍ಗರ್ಲ್ ಎಲ್ಲರ ನಿರೀಕ್ಷೆಯಂತೆ ಒಂದು ಪಕ್ಕಾ ಟ್ರೈಯಾಂಗಲ್ ಲವ್ ಸ್ಟೋರಿ ಜೊತೆಗೆ ಸಖತ್ ಎಂಟರ್ ಟೈಮೆಂಟ್ ಸಿನಿಮಾ.. ಚಿತ್ರದಲ್ಲಿ ನಾಯಕ ನಟರಾಗಿ ನಟ ರಘುಭಟ್, ಪಟ್ರೆ ಅಜೀತ್ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದಲ್ಲಿ ಕಡು ಬಡತನದಲ್ಲಿ ಬೆಳೆಯುವ ಇವರಿಬ್ಬರು ಪ್ರಾಣ ಸ್ನೇಹಿತರು. ಇಲ್ಲಿ ರಘು ಭಟ್ ಹಾಗೂ ಪಟ್ರೇ ಅಜಿತ್ ಅವರಿಗೂ ತಿಳಿಯದೇ ಇಬ್ಬರೂ ಒಂದೇ ಹುಡುಗಿಯನ್ನ ಮೆಚ್ಚಿಕೊಂಡಿರುತ್ತಾರೆ..! ತಾವಿಬ್ಬರೂ ಒಂದೇ ಹುಡಿಗಿಯನ್ನು ಲವ್ ಮಾಡ್ತಾ ಇರೋ ಸಂಗತಿ ತಿಳಿದ ಕೂಡಲೇ ಮುಂದೇನ್ಮಾಡ್ತಾರೆ ಅನ್ನೋ ನಿಗೂಢತೆಯನ್ನೂ ಕೂಡ ನಿರ್ದೇಶಕ ಸೂರ್ಯಸತೀಶ್ ನವಿರಾಗಿ ಎಳೆದಿದ್ದಾರೆ.. ಅಲ್ಲದೇ ಸಿನಿಮಾದಲ್ಲಿ ಒಟ್ಟು ಐದು ಹಾಡುಗಳು ಹಾಗೂ 2 ಫೈಟ್ ಗಳನ್ನು ಕೂಡ ಇಡಲಾಗಿದ್ದು ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಆಡಿಯೋ ಲಾಂಚ್ ಆಗಲಿದೆ. ಇನ್ನು ಕರ್ವ, ನನ್ನ ನಿನ್ನ ಪ್ರೇಮಕಥೆ ಸೇರಿದಂತೆ 10ಕ್ಕೂ ಹೆಚ್ಚು ಹಿಟ್ ಸಿನಿಮಾಗಳಲ್ಲಿ ನಾಯಕ ನಟನಾಗಿವ ರಘುಭಟ್ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಅಷ್ಟೇ ಅಲ್ಲದೇ ಸೂರ್ಯಸತೀಶ್ ನಿರ್ದೇಶನದ ಮೊದಲ ಚಿತ್ರ ರಘುವೀರ ಸಿನಿಮಾದಲ್ಲೂ ನಟನಾಗಿ ಮಿಂಚಿರುವ ರಘುಭಟ್ ಎರಡು ಸಿನಿಮಾದಲ್ಲೂ ಟಾಪ್ಮೋಸ್ಟ್ ಪ್ರದರ್ಶನ ನೀಡಿದ್ದಾರೆ.. ನಟಿ ದೀಪಿಕಾ, ಅಮೃತಾ ರಾವ್, ಅವಿನಾಶ್, ಶಿವ ಸಂತೋಷ್, ಜ್ಯೋತಿ ಅವರು ನಟಿಸಿರುವ ಡ್ರೀಮ್‍ಗರ್ಲ್ ಸಿನಿಮಾ ಎಲ್ಲರ ನಿರಿಕ್ಷೆ ಹೆಚ್ಚಿಸಿರುವುದಂತೂ ನಿಜ.. ಈ ಸಿನಿಮಾ ಮುಂದಿನ ಡಿಸೆಂಬರ್ ಅಂತ್ಯಕ್ಕೆ ತೆರೆ ಕಾಣಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
Like us on Facebook The New India Times
POPULAR STORIES :
ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?
ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!
ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!