ಇನ್ನು ಮುಂದೆ ನಿಮಗೆ ಡ್ರೈವಿಂಗ್ ಲೈಸೆನ್ಸ್ ಗಾಗಿ ರಸ್ತೆಯ ಮೇಲೆ ಗಾಡಿ ಟೆಸ್ಟ್ ನೀಡೋ ಪದ್ದತಿಯನ್ನು ತೆಗೆದು ಹಾಕಲಾಗ್ತಾ ಇದೆ.. ಹಾಗೆಂದ ಮಾತ್ರಕ್ಕೆ ಯಾರು ಬೇಕಾದ್ರೂ ಇನ್ಮೇಲೆ ಲೈಸೆನ್ಸ್ ತಗೋಬೋದು ಅಂತಲ್ಲ.. ಹೊರಗೆ ತೋರಿಸುತ್ತಿದ್ದ ಟೆಸ್ಟ್ ಈಗ ಮುಚ್ಚಿದ ಕೋಣೆಯಲ್ಲಿ ಡ್ರೈವಿಂಗ್ ಟೆಸ್ಟ್ ತೋರಿಸಬೇಕಾಗತ್ತೆ ಅಷ್ಟೆ.. ಮುಚ್ಚಿದ ಅಥವಾ ಒಳಾಂಗಣದಲ್ಲಿ ಡ್ರೈವಿಂಗ್ ಸೆಮ್ಯೂಲೇಟರ್ ಮೂಲಕ ನಿಮ್ಮ ವಾಹನ ಚಾಲನಾ ಟೆಸ್ಟ್ ನಡೆಯಲಿದೆ.
ಇದರ ಮೂಲಕ ನಿಮಗೆ ನಿರ್ದಿಷ್ಟ ಅವಧಿಯಲ್ಲಿ ನೀವು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತೀರ ಎಂಬದು ತಿಳಿದುಕೊಂಡು ನಿಮಗೆ ಪರವಾನಗಿ ನೀಡಲು ಆರ್‍ಟಿಓ ಮುಂದಾಗಿದೆ. ಇದನ್ನು csir-crri, csio, ನ್ಯಾಷನಲ್ ಏರ್ ಸ್ಪೇಸ್ ಹಾಗೂ ಫ್ಯಾರೋಸ್ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯ ನಿಮಾಣಗೊಳ್ಳಲಿದೆ. ಉದಾ: ನೀವು ಗಾಡಿ ಚಲಾಯಿಸುವ ಸಂದರ್ಭದಲ್ಲಿ ಯಾವುದೋ ಒಂದು ಪ್ರಾಣಿ ಅಥವಾ ಮನುಷ್ಯ ಅಠಾತ್ತನೆ ಅಡ್ಡ ಬಂದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದನ್ನು ಪರೀಕ್ಷಿಸಲಾಗುತ್ತದೆ. ರಾತ್ರಿ ಹೊತ್ತಿನಲ್ಲಿ ಅಥವಾ ಹಗಲಿನಲ್ಲಿ, ಮಂಜು ಕವಿದ ವಾತಾವರಣದಲ್ಲಿ ಅಥವಾ ತೀರಾ ಹದಗೆಟ್ಟ ರಸ್ತೆಯಲ್ಲಿ ಅಚಾನಕ್ಕಾಗಿ ನೀವು ಬಂದಾಗ ಯಾವ ರೀತಿ ಪ್ರತಿಕ್ರಿಯಿಸುತ್ತೀರಿ ಎಂದೂ ಸಹ ಪರೀಕ್ಷೆ ನಡೆಸಲಾಗುತ್ತದೆ. ಇನ್ನು ನಿಮ್ಮ ಡ್ರೈವಿಂಗ್ ಟೆಸ್ಟ್ ಸಮಯದಲ್ಲಿ ನಿಮ್ಮ ಜೊತೆ ಆರ್‍ಟಿಓ ಅಧಿಕಾರಿಗಳೂ ಕೂಡ ಹಾಜರಿರುತ್ತಾರೆ. ಈ ಸಂಬಂಧವಾಗಿ ಸುಪ್ರೀಂ ಕೋರ್ಟ್ ರಸ್ತೆ ಸುರಕ್ಷಾ ಸಮಿತಿಯ ಅನುಮತಿ ದೊರೆತ ಕೂಡಲೇ ಈ ವಿಧಾನ ಕಾರ್ಯ ರೂಪಕ್ಕೆ ಬರಲಿದೆ. ಅಲ್ಲದೇ ಎಲ್ಲಾ ಆರ್‍ಟಿಓ ಕೇಂದ್ರಗಳಲ್ಲಿ ಈ ರೀತಿಯ ವಿಧಾನವನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಲಾಗಿದೆ.
POPULAR STORIES :
ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!
ನಾನು ನಿನ್ನ ಮದ್ವೆ ಆಗ್ತೀನಿ.. ಅಂದಿದಕ್ಕೆ ತಲೆ ತಿರುಗಿ ಬಿದ್ಲು ನಾರಿ..! ಯಾಕೆ ಗೊತ್ತಾ..
ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!
ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?
ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!