ಡಿ.ವಿ.ಜಿ ನಮ್ಮನ್ನಗಲಿ 40ವರ್ಷ..! ಡಿ.ವಿ.ಜಿ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಬರುವ ಮೊದಲು ಎಷ್ಟೆಲ್ಲಾ ಕಷ್ಟಪಟ್ಟಿದ್ರು ಗೊತ್ತಾ..?

Date:

ಡಿ.ವಿ.ಜಿ ಎಂದೇ ಚಿರಪರಿಚಿತರಾಗಿರುವ “ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ”(ಡಿ.ವಿ.ಗುಂಡಪ್ಪ) ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಎಂದೂ ಮರೆಯದ ಅಜರಾಮರ ಹೆಸರು..!
ಮಂಕುತಿಮ್ಮನ ಕಗ್ಗದಿಂದಲೇ ಹೆಸರುವಾಸಿಯಾಗಿರುವ ಈ ಸಾಹಿತ್ಯ ಕೃಷಿಕನ ಬಗ್ಗೆ ತಿಳಿಯದ ಅದೆಷ್ಟೋ ವಿಷಯಗಳಿವೆ..! ಇವರ ಲೈಫ್ ಸ್ಟೋರಿ ನಮಗೆಲ್ಲಾ ಆದರ್ಶ..! ಇವರೊಬ್ಬ ಸಾಹಿತಿ, ಪತ್ರಕರ್ತರೆಂದದಷ್ಟೇ ನಮಗೆ ಗೊತ್ತು..! ಆದ್ರೆ ಇವರು ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಬರುವ ಮೊದಲು ಎಂಥಹಾ ಸವಾಲುಗಳನ್ನೆಲ್ಲಾ ಎದುರಿಸಿದ್ರು ಗೊತ್ತಾ..? ಅವರ ಪತ್ರಿಕೋದ್ಯಮಕ್ಕೆ ಬಂದಿದ್ದೇಕೆ..? ಪತ್ರಿಕೋದ್ಯಮ ಮತ್ತು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳುವ ಮೊದಲು ಎಷ್ಟೆಲ್ಲಾ ಕಷ್ಟಪಟ್ಟಿದ್ರು..? ಎಂಬುದನೆಲ್ಲಾ ತಿಳಿಯಲೇ ಬೇಕು..! ಒಬ್ಬ ವ್ಯಕ್ತಿ ಸಾಧನೆ, ಕೀತರ್ಿಯ ಹಿಂದೆ ಅದೆಷ್ಟು ಕಷ್ಗಳು, ಅಗ್ನಿಪರೀಕ್ಷೆಗಳು ಇರ್ತವೆ ಎನ್ನುವುದಕ್ಕೆ ಡಿ.ವಿ.ಜಿ ಯೇ ಸಾಕ್ಷಿ..! ಡಿ.ವಿ. ಜಿಯವರ ಬಗ್ಗೆ ಕೆಲವರಿಗೆ ಗೊತ್ತೇ ಇಲ್ಲದ ಸಂಗತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ..!
1887, ಮಾರ್ಚ್ 17ರಂದು ವೆಂಕಟರಮಣಯ್ಯ ಮತ್ತು ಅಲಮೇಲಮ್ಮ ದಂಪತಿಗಳ ಮಗನಾಗಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ದೇವನಹಳ್ಳಿಯಲ್ಲಿ ಜನಸಿದ ಡಿ.ವಿ.ಜಿ ಯ ಪೂರ್ವಿಕರು ಕನ್ನಡಿಗರಲ್ಲ..! ಇವರ ಮುತ್ತಜ್ಜ ತಮಿಳುನಾಡಿನ ತಿರುಚನಾಪಳ್ಳಿಯಿಂದ ಕರ್ನಾಟಕಕ್ಕೆ ವಲಸೆ ಬಂದವರು..! ಆದ್ರೂ ಡಿ.ವಿ.ಜಿ ನಮ್ಮವರೇ.. ಹುಟ್ಟಿದ್ದು, ಬೆಳೆದಿದ್ದು, ಸಾಹಿತ್ಯ ಕೃಷಿ ಮಾಡಿದ್ದೂ ನಮ್ ಕರ್ನಾಟಕದಲ್ಲಿಯೇ..! ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸ್ ಆದ ಡಿ.ವಿ.ಜಿ ಖಾಸಗಿಯಾಗಿ ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಯನ್ನೂ ಅಭ್ಯಾಸ ಮಾಡಿದ್ರು..!ಸಂಬಧಿಕರೊಬ್ಬರ ಸಹಾಯದಿಂದ ಮೈಸೂರು ಮಹರಾಜ ಪ್ರೌಢಶಾಲೆಯಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ…! ಆದ್ರೆ ಮೆಟ್ರಿಕ್ಯುಲೇಷನ್ ಪಾಸ್ ಮಾಡಿಕೊಳ್ಳಲಾಗದೆ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸ್ತಾರೆ..! ಹೈಸ್ಕೂಲ್ ನಲ್ಲಿ ಓದುತ್ತಿರುವಾಗಲೇ ಭಾಗೀರಥಮ್ಮ ಎಂಬುವವರೊಡನೆ ಮದುವೆ ಆಗುತ್ತೆ…! ಚಿಕ್ಕ ವಯಸ್ಸಿನಲ್ಲಿಯೇ ಸಂಸಾರದ ಜವಬ್ದಾರಿ ಇವರ ಬೆನ್ನಿಗೆ ಕಟ್ಟಲಾಗುತ್ತೆ..! ಸಂಸಾರ ನಿಭಾಯಿಸಲು ಉದ್ಯೋಗ ಹುಡುಕುತ್ತಿರುವಾಗ ಅದೃಷ್ಟವಶಾತ್ ತಮ್ಮ ತಾಲ್ಲೂಕು ಮುಳುಬಾಗಿಲಿನಲ್ಲಿಯೇ ಬದಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರುವ ಅವಕಾಶ ಸಿಗುತ್ತೆ..! ಶಿಕ್ಷಕ ವೃತ್ತಿ ಮೂಲಕ ವೃತ್ತಿ ಜೀವನಕ್ಕೆ ಎಂಟ್ರಿಕೊಟ್ಟ ಡಿ.ವಿ.ಜಿ ಬಹಳ ಸಮಯದವರೆಗೆ ಅಲ್ಲಿಯೇ ಇರಲು ಆಗಲಿಲ್ಲ..! ಯಾವುದೋ ಕಾರಣಕ್ಕಾಗಿ ಆ ಶಿಕ್ಷಕ ವೃತ್ತಿಗೆ ಗುಡ್ ಬೈ ಹೇಳ್ತಾರೆ..! ನಂತರ ಕೋಲಾರದ ಚಿನ್ನದ ಗಣಿಯಲ್ಲಿ, ಸೋಡಾ ಫ್ಯಾಕ್ಟರಿಯಲ್ಲಿಯೂ ಕೆಲಸ ಮಾಡ್ತಾರೆ..! ಈ ಕೆಲಸಗಳನ್ನು ಬಿಟ್ಟ ನಂತರ ಬೆಂಗಳೂರು ಕಡೆ ಹೆಜ್ಜೆ ಹಾಕ್ತಾರೆ..! ಅಲ್ಲಿ ಕೆಲಸ ಬಿಟ್ಟು ರಾಜಧಾನಿ ಬೆಂಗಳೂರಿಗೇನೋ ಬಂದ್ರೂ..! ಆದ್ರೆ ಕೆಲಸ ಸಿಗಬೇಕಲ್ಲಾ..!? ಕೆಲಸಕ್ಕಾಗಿ ಸಿಕ್ಕಸಿಕ್ಕ ಕಡೆಗಳಲ್ಲೆಲ್ಲಾ ಅಲೆದಾಡಿದ್ರು…! ಕೊನೆಗೂ ಎಲ್ಲೂ ಕೆಲಸ ಸಿಗದೇ ಇರುವಾಗ ಜಟಕಾ ಗಾಡಿಗೆ ಬಣ್ಣ ಬಡಿಯುವ ಸಣ್ಣ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರ್ತಾರೆ..! ಗ್ರಹಚಾರ ಅಂದ್ರೆ ಆ ಕಾರ್ಖಾನೆಯೂ ಕೆಲವೆ ಕೆಲವು ದಿನಗಳ ನಂತರ ಮುಚ್ಚಿ ಹೋಗುತ್ತೆ..!
ಆಗ ಡಿ.ವಿ.ಜಿ ಗೆ ಕೇವಲ ಹದಿನೆಳೇ ವರ್ಷ..! ಆಗಲೇ ಪಟಪಟನೆ ಇಂಗ್ಲೀಷ್ ಮಾತಾಡ್ತಾ ಇರ್ತಾರೆ..! ಅವರಿಗೆ ಬರವಣಿಗೆಯೂ ಗೊತ್ತಿತ್ತು..! ಹಂಗೋ ಹಿಂಗೋ ಲೈಫ್ ಲೀಡ್ ಮಾಡ್ಬೆಕಲ್ಲಾ ಅಂತ ಆ ಬರವಣಿಗೆಯನ್ನೇ ನಂಬಿ “ಸೂಯರ್ೋದಯ ಪ್ರಕಾಶಿಕ” ಪತ್ರಿಕೆಯಲ್ಲಿ ಕೆಲಸಕ್ಕೆ ಸೇರ್ತಾರೆ…! ಹೀಗೆ ಹೊಟ್ಟೆ ಪಾಡಿಗಾಗಿ ಆಯ್ಕೆ ಮಾಡಿಕೊಂಡ ಪತ್ರಿಕೋದ್ಯಮ ಆಯ್ಕೆ ಮಾಡಿಕೊಂಡರಾದರೂ ಮತ್ತೆ ಇವರ ಗ್ರಹಚಾರಕ್ಕೆ ಆ ಪತ್ರಿಕೆ ಹೆಚ್ಚುಕಾಲ ನಡೆಯಲೇ ಇಲ್ಲ..! ಆದ್ರೂ ಪತ್ರಿಕೋದ್ಯಮ ಇವರ ಕೈ ಬಿಡಲ್ಲ..! ಈವನಿಂಗ್ ಮೈಲ್, ಮೈಸೂರು ಸ್ಟಾಂಡರ್ಡ್ ಮುಂತಾದ ಇಂಗ್ಲೀಷ್ ಮತ್ತು ಕನ್ನಡ ಪತ್ರಿಕೆಗಳಿಗೆ ಲೇಖನ ಬರೆಯಲು ಶುರು ಮಾಡಿದ್ರು..! “ವೀರ ಕೇಸರಿ” ಪತ್ರಿಕೆಯಲ್ಲಿ ಕೆಲಸಕ್ಕೆಂದು ಮದ್ರಾಸ್ ಗೆ ಹೋದ ಇವರು ಅಲ್ಲಿ “ಹಿಂದೂ” ಪತ್ರಿಕೆಗೆ ಬರೆದರು..! ನಂತರ “ಮೈಸೂರು ಟೈಮ್ಸ್” ಎಂಬ ಇಂಗ್ಲೀಷ್ ಪತ್ರಿಕೆ ಸಹಾಯಕ ಸಂಪಾದಕರಾದ್ರು..! ನಂಬ್ತೀರೋ ಬಿಡ್ತೀರೋ ನರತ್ನ ಕೃಷ್ಣ ಸ್ವಾಮಿ ಎಂಬ ಸ್ನೇಹಿತರೊಡನೆ ಸೇರಿ ಕನ್ನಡದ ಮೊದಲ ದಿಬ ಪತ್ರಿಕೆ “ಭಾರತಿ”ಯನ್ನು ಆರಂಭಿಸಿದಾಗ ಡಿ.ವಿ.ಜಿ ಗೆ ಕೇವಲ ಹದಿನೆಂಟು ವರ್ಷ..! ನಂತರ ಸಕರ್ಾರದ ಕೆಲವೊಂದು ಅರ್ಥವಿಲ್ಲದ ಕಾನೂನಿಂದಾಗಿ ಈ ಪತ್ರಿಕೆಯನ್ನು ನಿಲ್ಲಸಿಯೇ ಬಿಡ್ತಾರೆ..!
ನಂತರ ದಿವಾನ್ ರಂಗಾಚಾರ್ಲು ರವರ ಬಗ್ಗೆ ಡಿ.ವಿ.ಬರೆದ ಲೇಖನ ಬದುಕಿನ ಟರ್ನಿಂಗ್ ಪಾಯಿಂಟ್ ಆಗಿಯೇ ಬಿಡ್ತು..! ಅದು “ದಿವಾನ್ ರಂಗಾಚಾರ್ಲು” ಎಂಬ ಪುಸ್ತಕದ ರೂಪದಲ್ಲಿಯೂ ಪ್ರಕಟವಾಗಿ ಡಿ.ವಿ.ಜಿಯವರಿಗೆ ಹೆಸರನ್ನು ತಂದುಕೊಡುತ್ತೆ..! ಆ ಪುಸ್ತಕದಿಂದ ಜನ ಮೆಚ್ಚುಗೆಗಳಿಸಿದಾಗ ಡಿ.ವಿ.ಜಿಗೆ ಕೇವಲ 22 ವರ್ಷ..! ಈ ಪುಸ್ತಕವನ್ನು ಅಂದಿನ ಮೈಸೂರು ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರೂ ಓದಿ ಮೆಚ್ಚಿದ್ದರು..! ಇಲ್ಲಿಂದ ಡಿ.ವಿ.ಜಿ ಹಿಂತುರುಗಿ ನೋಡಲೇ ಇಲ್ಲ..! ಸಾಹಿತ್ಯ, ಕಾವ್ಯ ರಚನೆಯಲ್ಲಿ ತೊಡಗಿದರು..!
ಬಾಲ್ಯದಲ್ಲಿ 11ರ ತನಕ ಹೇಗೋ ಮಗ್ಗಿ ಹೇಳ್ತಾ ಇದ್ದ ಡಿ.ವಿ.ಜಿ ಗೆ ಮುಂದಿನ ಮಗ್ಗಿ ಬರ್ತಾ ಇರ್ಲಿಲ್ಲ..! ಅಪ್ಪ ಮಗ್ಗಿ ಹೇಳಲು ಹೇಳಿದಾಗ ಸೋದರ ಮಾವ ತಿಮ್ಮ ಕಿವಿಯಲ್ಲಿ ಪಿಸುಗುಟ್ಟಿದ್ದನ್ನು ಜೋರಾಗಿ ಹೇಳ್ತಾ..ಅಪ್ಪನ ಹತ್ತಿರ ಪೆಟ್ಟು ತಿನ್ತಾ ಇದ್ದ ಡಿ.ವಿ.ಜಿ “ಮಂಕುತಿಮ್ಮ” ನ ಮೂಲಕ ಗಣಿತಕ್ಕಿಂತಲೂ ಕಷ್ಟವಾದ ಜೀವನ ಲೆಕ್ಕವನ್ನು ಬಿಡಿಸಿ..ತನ್ನ ಅಪಾರ ಕಾವ್ಯ ಸಾಮಾಥ್ರ್ಯವನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯನ್ನಾಗಿ ನೀಡಿದರು..!
ಚಿಕ್ಕ ವಯಸ್ಸಲ್ಲಿ ಮದುವೆಯೂ ಆಗಿ, ಸಂಸಾರ ಹೊಣೆ ನಿಭಾಯಿಸಿ, ಕೆಲಸಕ್ಕಾಗಿ ಅಲೆದು ಹೊಟ್ಟೆಪಾಡಿಗಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದ ಡಿ.ವಿ.ಜಿ ಮುಂದೇ ಅದೇ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ರತ್ನರಾದ್ರು..! ಅಕ್ಟೋಬರ್ 07, 1975ರಲ್ಲಿ ತಮ್ಮ 88ನೇ ವಯಸ್ಸಲ್ಲಿ ಡಿ.ವಿ.ಜಿ ನಮ್ಮನ್ನೆಲ್ಲಾ ಬಿಟ್ಟು ಹೋದ್ರು..! ಆದ್ರೆ ಅವರ ನೆನಪು ಎಂದಿಗೂ ಶಾಶ್ವತ..! ಅವರ ಕೊಡುಗೆ ಮರೆಯಲಾದೀತೆ..? ಅಂದಹಾಗೆ ಡಿ.ವಿ.ಜಿ ನಮ್ಮನ್ನಗಲಿ 40 ವರ್ಷ..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

ಶಿವಣ್ಣ ಆರಾಮಾಗಿದ್ದಾರೆ…ಡೋಂಟ್ ವರಿ..!

ಬಿಯರ್ ಬಾಟಲ್ ಗಳ ಮುಚ್ಚಳ ತೆಗೆದ ಹೆಲಿಕಾಪ್ಟರ್..!

ವಿಷ ಕುಡಿದು ಪ್ರೀತಿ ಉಳಿಸಿಕೊಂಡವರ ಕಥೆ..! ಅಷ್ಟಕ್ಕೂ ಅವರು ವಿಷ ಕುಡಿದಿದ್ದು ಯಾಕೆ ಗೊತ್ತಾ..?

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

ಭಾರತದ ಇತಿಹಾಸ ಹಾಗೂ ಅಪೂರ್ವ ಸಾಧನೆಯನ್ನು ತೋರಿಸೋ ಅದ್ಭುತ ಸ್ಯಾಂಡ್ ಆರ್ಟ್.!

ಪಳಪಳನೆ ಹೊಳೆಯುವ ಕೂದಲಿಗಾಗಿ ಕೋಕ ಕೋಲಾ ಬಳಸಿ..!

“ಜುಕರ್ ಬರ್ಗ್”, “ಸ್ಟೀವ್ ಜಾಬ್ಸ್” ರಂತಹ ಉದ್ಯಮಿಗಳ ಯಶಸ್ಸಿಗೆ ಭಾರತದ ದೇವರೇ ಕಾರಣ..!

ಭಾರತೀಯರು ನೋಡಬೇಕಾದ ಭಾರತೀಯರ ವೀಡಿಯೋ..!

ಸಲ್ಮಾನ್ ಖಾನ್ ಹಾಗೂ ಪ್ರೇಮ್ ಗೂ ಎನ್ ಸಂಬಂಧ ಗೊತ್ತಾ…? ಇಲ್ಲಿದೆ ಸಲ್ಮಾನ್ ಪ್ರೇಮ್ ಕಹಾನಿ..

ನೀವು ತಿಳಿದುಕೊಳ್ಳಲೇಬೇಕಾದ ಕಂಪ್ಯೂಟರ್ ಟ್ರಿಕ್ಸ್..!

ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!

ಅಬ್ಬಾ…! ಈ ಪುಟ್ಟಬಾಲಕಿ ಅದೆಂಥಾ `ಹುಲಿಡ್ಯಾನ್ಸ್’ ಮಾಡ್ತಾಳೆ..!

ಇಂಡೋ-ಪಾಕ್ ವಾರ್ ಮತ್ತೇ ನಡೆಯಿತು..! ಯುದ್ದ ನಡೆದಿದ್ದು ಎಲ್ಲಿ ಗೊತ್ತಾ..?

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...