ಸುರೇಶ್ ಬಾಬು ಪಳನಿಸ್ವಾಮಿ.. ತಮಿಳುನಾಡು ರಾಜ್ಯದ ಕೊಯಂಬತ್ತೂರಿನ ಬಡ ರೈತನ ಮಗನೀತ. ಈತನಿಗೆ ಓದಿನ ಹಸಿವು ಎಷ್ಟಿತ್ತೆಂದರೆ ಸಾಫ್ಟವೇರ್ ಎಂಜಿನಿಯರಿಂಗ್ ನಲ್ಲಿ ಭರ್ಜರಿ ಫಲಿತಾಂಶ ಪಡೆದ. ಆಸ್ಟ್ರೇಲಿಯಾದ ಅಡಿಲೇಡ್ ನ ದೊಡ್ಡ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ. ಅಷ್ಟು ಸಾಕಲ್ಲವೇ ಸುಖಿ ಜೀವನ ನಡೆಸಲು. ಆದರೆ ಸುರೇಶ್ ಬಾಬು ಮನಸ್ಸು ಮಾತ್ರ ಬೇರೆಡೆ ಸೆಳೆಯುತ್ತಿತ್ತು. ಭರ್ಜರಿ ಸಂಬಳ ನೀಡುವ ಕೆಲಸ ಬಿಡು ಎಂದು ಪ್ರೋತ್ಸಾಹಿಸುತ್ತಿತ್ತು. ಆದ್ದರಿಂದ ಆತ ಒಂದು ನಿರ್ಧಾರ ತೆಗೆದುಕೊಂಡ. ಸುಖಿ ಜೀವನಕ್ಕೆ ಏನು ಬೇಕು ಅದರತ್ತ ಗಮನ ಹರಿಸಿದ. ಇಷ್ಟಕ್ಕೂ ಆತ ಆಯ್ದುಕೊಂಡ ಹೊಸ ವೃತ್ತಿ ಕೃಷಿ..!
ನಮ್ಮ ದೇಶದಲ್ಲಿ ಬೆಳೆ ಇದ್ದಾಗ ಮಳೆ ಬರಲ್ಲ. ಮಳೆ ಬಂದಾಗ ಬೆಳೆ ಇರಲ್ಲ. ಇದೇ ಕಾರಣಕ್ಕೆ ನಮ್ಮ ಅನ್ನದಾತರು ಸಂಕಷ್ಟದಲ್ಲ ಜೀವನ ನಡೆಸುತ್ತಿದ್ದಾರೆ. ಇದನ್ನೆಲ್ಲಾ ತಿಳಿದಿದ್ದ ಸುರೇಶ್ ಬಾಬು ಆಸ್ಟ್ರೇಲಿಯಾದ ದೊಡ್ಡ ಕೆಲಸ ಬಿಟ್ಟ. ಭಾರತಕ್ಕೆ ಬಂದ. ತನ್ನ ತಾತ, ತಂದೆಯಂದೀರು ನಿರ್ವಹಿಸಿಕೊಂಡು ಬಂದ ವೃತ್ತಿ(ಕೃಷಿ)ಯನ್ನೇ ಆಯ್ಕೆ ಮಾಡಿಕೊಂಡ. ತನ್ನೂರಿನ ರೈತರೊಂದಿಗೆ ಚರ್ಚೆ ನಡೆಸಿದ. ಯಾವ ರೀತಿ ಕೃಷಿ ಕೆಲಸ ಮಾಡಬೇಕು..? ಮಾರ್ಕೆಟ್ ಸ್ಥಿತಿಗತಿ ಏನು..? ಎಂದು ಮಾಹಿತಿ ಸಂಗ್ರಹಿಸಿದ.
ತನ್ನ ತಂದೆಯ ಹೆಸರಿನಲ್ಲಿದ್ದ 9 ಎಕರೆಯಷ್ಟು ಜಮೀನಿನಲ್ಲಿ ಆನೆಗಳ ಕಾಟ ಇರುವುದನ್ನು ಗಮನಿಸಿ ಅದರ ಸುತ್ತ ತಂತಿ ಬೇಲಿ ಹಾಕಿಸಿದ. ಹತ್ತಿರದಲ್ಲಿ ಯಾವುದೇ ನೀರಿನ ಮೂಲ ಇರದೇ ಇರುವುದನ್ನು ಕಂಡು ಬೋರ್ ಹಾಕಿಸಿದ. ನೀರು ಚಿಮ್ಮಿತು. ನೀರನ್ನು ಮೇಲೆತ್ತಲು 5 ಎಚ್ ಪಿ ಮೋಟಾರ್ ತಂದ. ಅಲ್ಲಿಗೆ ತನ್ನ ಜಮೀನಿಗೆ ಏನೇನು ಬೇಕೋ ಅದನ್ನೆಲ್ಲಾ ಸಿದ್ಧಪಡಿಸಿದ.
ಮೌಸ್ ಹಿಡಿಯಬೇಕಿದ್ದ ಕೈ ಬಾರುಕೋಲು ಹಿಡಿಯಿತು. ಕೃಷಿ ಕೆಲಸ ಸಾಗಿತು. 9 ಎಕರೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆಸಿದ. ಪ್ರಾರಂಭದಲ್ಲಿ ಕಷ್ಟವಾದರೂ ಕೂಡಾ ದಿನಗಳೆದಂತೆ ಕೆಲಸ ಸುಲಭವಾಗತೊಡಗಿತು. ಆಗ ಕೀಟ ಬಾಧೆ ಎದುರಾಯಿತು. ರಾಸಾಯನಿಕಗಳ ಬದಲು ಸಾವಯವ ಮಾದರಿಯಲ್ಲೇ ಕೀಟ ಬಾಧೆ ತಡೆಯಲು ಬೇಕಾದ ಮಾರ್ಗ ಹುಡುಕಿದ. ಅದರಲ್ಲೂ ಯಶಸ್ವಿಯಾದ. ಭರ್ಜರಿ ಬೆಳೆ ಬೆಳೆದ. ಇತರ ರೈತರಿಗೆ ಮಾದರಿಯಾದ. ಆತನ ಸಾಧನೆ ಗುರುತಿಸಿ ತಮಿಳುನಾಡು ಸರ್ಕಾರ `ಯುವ ರೈತ ಪ್ರಶಸ್ತಿ’ ನೀಡಿ ಗೌರವಿಸಿತು.
ಇಷ್ಟೆಲ್ಲಾ ಆದ ಮೇಲೆ ನೀವ್ಯಾಕೆ ಸಾಫ್ಟ್ ವೇರ್ ಕೆಲಸ ಬಿಟ್ಟಿದ್ದು ಎಂದು ಕೇಳಿದಾಗ, `ನಾನು ಆಸ್ಟ್ರೇಲಿಯಾದಲ್ಲೇ ಕೆಲಸ ಮಾಡುತ್ತಿದ್ದರೆ ನನ್ನ ಪರಿಶ್ರಮ ಆ ದೇಶಕ್ಕೆ ಸೀಮಿತವಾಗುತ್ತಿತ್ತು. ಆ ದೇಶದ ನಾಗರಿಕ ಹಕ್ಕು ಸಿಗುತ್ತಿತ್ತು. ಆದರೆ ಅದೇನು ದೊಡ್ಡ ಸಾಧನೆಯಾಗುವುದಿಲ್ಲ. ಆದ್ದರಿಂದ ನಾನು ಭಾರತಕ್ಕೆ ಬಂದೆ. ಇಲ್ಲೇ ಜೀವನ ದಾರಿ ಕಂಡುಕೊಂಡೆ. ಇಷ್ಟು ಕೊಡುಗೆ ಸಾಕಲ್ಲವೇ ನನ್ನ ದೇಶಕ್ಕೆ’ ಅಂತಾರೆ ಸುರೇಶ್ ಬಾಬು.
ನಮ್ಮ ದೇಶದಲ್ಲಿ ರೈತರ ಸಾವಿನ ಸರಣಿ ಮುಂದುವರೆದೇ ಇದೆ. ಕರ್ನಾಟಕದ ರೈತನು ದೊಡ್ಡ ಸಂಕಷ್ಟದಲ್ಲಿದ್ದಾನೆ. ಆದರೆ ಅವರೆಲ್ಲರೂ ಸುರೇಶ್ ಬಾಬು ರೀತಿ ವೈಜ್ಞಾನಿಕ ಮಾದರಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡರೆ ಲಾಭವೂ ಗಳಿಸಬಹುದು. ಸಾವಿನ ಸರಣಿಗೂ ಅಂತ್ಯ ಹಾಡಬಹುದು. ಅಲ್ಲವೇ..?
- ರಾಜಶೇಖರ ಜೆ
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ತನಗಿಂತ ಮೂರು ವರ್ಷ ಚಿಕ್ಕವನಾದ ಹುಡುಗನ್ನು ಪ್ರೀತಿಸಿ ಮದುವೆಯಾದಳು..!
ಎರಡು ಮುಖವುಳ್ಳ ಮಾನವನನ್ನು ಕಂಡಿದ್ದೀರಾ..?
12,000 ಹುಡುಗಿಯರನ್ನು ಲೈಂಗಿಕ ಗುಲಾಮಗಿರಿಯಿಂದ ಕಾಪಾಡಿದ ತಾಯಿ..! ಇವರು ಕಟ್ಟಿದ `ತಾಯಿಮನೆ’ ಸಂತ್ರಸ್ತರ ತವರು ಮನೆ..!
ಅಂದು ಅಮ್ಮ ಇಲ್ಲದಿದ್ದರೆ ಹೇಗಿರುತ್ತಿತ್ತು ಗೊತ್ತಾ..? ಅಪ್ಪ ಎಂಬ ಗುಮ್ಮ ಕೊನೆಗೂ ಹೀರೋ ಆದ
ಹುಚ್ಚ ವೆಂಕಟನ ಈ ಇಂಟರ್ವ್ಯೂ ನೋಡಿದೀರಾ..? ಅಯ್ಯೋ ಸಖತ್ ಮಜಾ ಇದೆ.. ನೋಡಿ…
ನಿಮ್ಮ ಪ್ರಕಾರ ಬಿಗ್ ಬಾಸ್ ಗೆಲ್ಲೋರು ಯಾರು..? ಈಗಲೇ ಕಮೆಂಟ್ ಮಾಡಿ, ಓಟ್ ಮಾಡಿ..!
ವಾಲ್ಮೀಕಿ ತನ್ನ ತಪ್ಪನ್ನು ತಿದ್ದಿಕೊಂಡಿದ್ದರಿಂದ ಮಹರ್ಷಿಯಾದರು..! ವಾಲ್ಮೀಕಿ ಜಯಂತಿಯ ಶುಭಾಶಯಗಳು..!