ಲೋಕಲ್ ಫೈಟ್; ಗೆದ್ದೋರ್ ಯಾರು? ಬಿದ್ದೋರ್ ಯಾರು?

Date:

ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂತಿಮ ಫಲಿತಾಂಶ ಹೊರಬಿದ್ದಿದೆ.‌

ತುಮಕೂರು , ಶಿವಮೊಗ್ಗ ಪಾಲಿಕೆ ಸೇರಿ 22 ಜಿಲ್ಲೆಗಳ 29 ನಗರಸಭೆ, 53 ಪುರಸಭೆ, 20 ಪಟ್ಟಣ ಪಂಚಾಯತ್ ಸೇರಿ‌105 ಸಂಸ್ಥೆಗಳಿಗೆ‌ ಚುನಾವಣೆ ನಡೆದಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ‌
ಒಟ್ಟು 2,527 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ 946, ಬಿಜೆಪಿ 875, ಜೆಡಿಎಸ್ 345, ಪಕ್ಷೇತರರು 315, ಎಸ್‍ಡಿಪಿಐ 17, ಬಿಎಸ್‍ಪಿ 12, ಕೆಪಿಜೆಪಿ 10, ಎಸ್‍ಪಿ 4, ಕೆಆರ್‍ಆರ್‍ಎಸ್ 1, ನ್ಯೂ ಇಂಡಿಯನ್ ಕಾಂಗ್ರೆಸ್ 1, ಡಬ್ಲ್ಯೂಪಿಐ 1ರಲ್ಲಿ ವಿಜಯದ ನಗೆ ಬೀರಿವೆ.
ಮಹಾನಗರ ಪಾಲಿಕೆ:
ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆ ಚುನಾವಣೆಯ ಒಟ್ಟು 135 ವಾರ್ಡ್ ಗಳಲ್ಲಿ ಬಿಜೆಪಿ 54, ಕಾಂಗ್ರೆಸ್ 36, ಜೆಡಿಎಸ್ 30, ಪಕ್ಷೇತರರು 14, ಬಿಎಸ್‍ಪಿ 1 ವಾರ್ಡ್ ನಲ್ಲಿ ಜಯಗಳಿಸಿವೆ. . ಮೈಸೂರು ಮತ್ತು ತುಮಕೂರಿನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಶಿವಮೊಗ್ಗ ಪಾಲಿಕೆಯನ್ನು ಬಿಜೆಪಿ ಗೆದ್ದುಕೊಂಡಿದೆ.

ನಗರ ಸಭೆ ಚುನಾವಣೆ:
ಒಟ್ಟು 926 ವಾರ್ಡ್ ಗಳಲ್ಲಿ ಬಿಜೆಪಿ 370, ಕಾಂಗ್ರೆಸ್ 294, ಜೆಡಿಎಸ್ 106, ಪಕ್ಷೇತರ 123, ಬಿಎಸ್‍ಪಿ 10, ಎಸ್‍ಡಿಪಿಐ 13, ಕೆಪಿಜೆಪಿ 10 ವಾರ್ಡ್ ನಲ್ಲಿ ಗೆದ್ದಿವೆ. ಒಟ್ಟು 29 ನಗರಸಭೆಗಳ ಪೈಕಿ ಬಿಜೆಪಿ 9 ರಲ್ಲಿ ಗೆಲುವು ಕಂಡಿದೆ. ಕಾಂಗ್ರೆಸ್ 5 ಕಡೆ, ಜೆಡಿಎಸ್ 2 ಕಡೆ ಸ್ವತಂತ್ರವಾಗಿ ಗದ್ದುಗೆ ಏರಲಿದೆ. ಗೋಕಾಕ್‍ನಲ್ಲಿ ಇತರರು ಕ್ಲೀನ್ ಸ್ವೀಪ್ ಮಾಡಿದ್ದಾರೆ. 13 ಕಡೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಪುರಸಭೆ ಚುನಾವಣೆ:
ಒಟ್ಟು 1246 ವಾರ್ಡ್ ಗಳಲ್ಲಿ ಕಾಂಗ್ರೆಸ್ 514, ಬಿಜೆಪಿ 375, ಜೆಡಿಎಸ್ 210, ಪಕ್ಷೇತರರು 135, ಬಿಎಸ್‍ಪಿ 2, ಎಸ್‍ಡಿಪಿಐ 4, ಕೆಆರ್‍ಆರ್‍ಎಸ್ 1, ಎಸ್‍ಪಿ 4, ಡಬ್ಲ್ಯೂಪಿಐ 1ರಲ್ಲಿ ಜಯಗಳಿಸಿದೆ. ಒಟ್ಟು 53 ಪುರಸಭೆಯಲ್ಲಿ ಕಾಂಗ್ರೆಸ್ 18, ಬಿಜೆಪಿ 11, ಜೆಡಿಎಸ್ 8 ಕಡೆ ಗೆದ್ದುಕೊಂಡಿದ್ದು 16 ಪುರಸಭೆ ಅತಂತ್ರವಾಗಿದೆ.
ಪಟ್ಟಣ ಪಂಚಾಯತ್:
ಒಟ್ಟು 355 ವಾರ್ಡ್ ಗಳ ಕಾಂಗ್ರೆಸ್ 138, ಬಿಜೆಪಿ 130, ಪಕ್ಷೇತರರು 57, ಜೆಡಿಎಸ್ 29, ಇಂಡಿಯನ್ ನ್ಯೂ ಕಾಂಗ್ರೆಸ್ 1ರಲ್ಲಿ ಗೆದ್ದಿದೆ. ಒಟ್ಟು 20 ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ 7, ಬಿಜೆಪಿ 7, ಜೆಡಿಎಸ್ 2 ಕಡೆ ಗೆದ್ದುಕೊಂಡಿದೆ. 3 ಪಟ್ಟಣ ಪಂಚಾಯ್ತಿಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ.

Share post:

Subscribe

spot_imgspot_img

Popular

More like this
Related

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...

ಮಧುಮೇಹಿಗಳಿಗೆ ಲವಂಗದ ನೀರು ವರದಾನ

ಮಧುಮೇಹಿಗಳಿಗೆ ಲವಂಗದ ನೀರು ವರದಾನ: ಬೆಳಿಗ್ಗೆ ಈ ನೀರು ಕುಡಿಯುವುದರಿಂದ ಬ್ಲಡ್...

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ! ಬೆಂಗಳೂರು: ಬಾಗಲಗುಂಟೆ...

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...